ಒತ್ತಡ ಜೀವನದಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ
ಕಂಪ್ಲಿ 26: ಒತ್ತಡ ಜೀವನದಲ್ಲಿ ಪುರಾಣ ಪ್ರವಚನಗಳನ್ನು ಕೇಳುವದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಮರಿಯಮ್ಮನಹಳ್ಳಿ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಕಂಪ್ಲಿ ಸಮೀಪದ ಬುಕ್ಕಸಾಗರ ಗ್ರಾಮದ ಶ್ರೀಕರಿಸಿದ್ದೇಶ್ವರ ಸಂಸ್ಥಾನಮಠದಲ್ಲಿ ಲಿಂ.ಕರಿಸಿದ್ದೇಶ್ವರ ಶಿವಯೋಗಿಗಳ 12 ನೇವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರಿ್ಡಸಿರುವ ಶ್ರೀ ಕರಿಸಿದ್ದೇಶ್ವರ ಲೀಲಾಮೃತ ಪುರಾಣ ಪ್ರವಚನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ.ತಾಯಂದಿರು ಮಕ್ಕಳಿಗೆ ಸಂಸ್ಕತಿ ಸಂಸ್ಕಾರ ಜೊತೆಗೆ ಶಿಕ್ಷಣ ಕ್ಕೆ ಅದ್ಯತೆ ನೀಡಿ ಮಕ್ಕಳಿಗೆ ಮೊಬೈಲೆ ಕೊಡುವ ಬದಲು ಪುರಾಣ ಪುಸ್ತಕ ಕೊಡಿ ಪುರಾಣ ಪ್ರವಚನ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶಾಂತಿ ನೆಮ್ಮದಿಯನ್ನು ನೀಡುತ್ತವೆ ಎಂದರು.ನಂದಿಪುರದ ಹಾಲಸ್ವಾಮಿಗಳು.ಮಾತನಾಡಿದರು ದಿವ್ಯ ಸಾನಿಧ್ಯ ವಹಿಸಿದ್ದ ಬುಕ್ಕಸಾಗರದ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ ಶ್ರೀಮಠದ ಲಿಂಗೈಕ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಶಿವಯೋಗಿಗಳ 12ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಶಿವಯೋಗಿಗಳ ಜಾತ್ರಾ ಮಹೋತ್ಸವವು ಜ.06ರಂದು ಸಂಜೆ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರದಿಂದ ಪುರಾಣ ಪ್ರವಚನ ಆರಂಭಿಸಲಾಗಿದ್ದು, ಡಿ.22ರಿಂದ ಜ.05ರವರೆಗೆ ಪುರಾಣ ಪ್ರವಚನ ಜರುಗಲಿದೆ. ಪುಣ್ಯಸ್ಮರಣೋತ್ಸವದ ಅಂಗವಾಗಿ ಪಂಚ ಪೀಠಗಳಲ್ಲಿ ಒಂದಾದ ಶ್ರೀಮದ್ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದಂಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ಜ.06ರಂದು ಬೆಳಿಗ್ಗೆ 10 ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಜ.05 ರಂದು ಬೆಳಿಗ್ಗೆ ಲಿಂಗೈಕ್ಯ ಶ್ರೀ ಕರಿಸಿದ್ದೇಶ್ವರ ವಿವಿಧ ಧಾರ್ಮೀಕ ಕಾರ್ಯಕಮ ಅಗ್ನಿಕುಂಡ, ಮಹಾರುದ್ರಾಭಿಷೇಕದ ನಂತರ ಮಡಿ ತೇರನ್ನು ಎಳೆಯುವುದು. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.ಸಪೇಟೆಯ ಶ್ರೀ ಸಾಲಿ ಬಸವರಾಜಸ್ವಾಮಿ ಇವರಿಗೆ “ಕರಿಸಿದ್ದಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ನಂ10 ಮುದ್ದಾಪುರದ ವೇ.ಶರಣಯ್ಯ ಶಾಸ್ತ್ರಿ ಕಂಬಳದಿನ್ನಿ ಸಂಗೀತ ಶಿಕ್ಷಕರಾದ ರಾರಾವಿಯ ಚಿದಾನಂದ ಗವಾಯಿಗಳ ಸಂಗೀತ ಮತ್ತು ಕೆ.ದೊಡ್ಡಬಸಪ್ಪ ತಬಲ ಸಾಥ್ ನೀಡಿದರು. ಸಾಂಗತ್ರಯ ಸಂಸ್ಕೃತ ಪಾಠಶಾಲೆ ಗೌರವ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿಗಳು, ಎಚ್.ಎಂ.ವಿಶ್ವನಾಥಸ್ವಾಮಿ, ಗಂಗಾದರಯ್ಯ ಕ್ಯಾದಿಗೆಹಾಳ್, ಹಾವಳಗಿ ರುದ್ರಯ್ಯ, ವೀರಯ್ಯಸ್ವಾಮಿ,ಎಸ್.ಡಿ.ಬಸವರಾಜ ಸೇರಿದಂತೆ ಪಾಲ್ಗೊಂಡಿದ್ದರು.