ಬಳ್ಳಾರಿ 20: ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ನೀರಿನ ಅಭಾವ ಇರುವುದನ್ನು ಮನಗಂಡ ಹೆಸರು ಹೇಳಲು ಇಚ್ಚಿಸದ ಕಮಲಾಪುರದ ಹಿತೈಷಿಯೊಬ್ಬರು ಕೊಳವೆ ಬಾವಿಯೊಂದನ್ನು ಕೊರೆಸಿದ್ದು, ಕುಲಪತಿ ಡಾ.ಸ.ಚಿ.ರಮೇಶ ಅವರು ಸದರಿ ಬೋರ್ವೆಲ್ನ್ನು ಉದ್ಘಾಟಿಸಿದರು.
ಬೋಧಕೇತರ ನೌಕರರು ಮತ್ತು 'ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ' ವಿದ್ಯಾಥರ್ಿನಿಯರ ವಸತಿ ನಿಲಯದ ವಿದ್ಯಾಥರ್ಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 'ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ' ವಿದ್ಯಾಥರ್ಿನಿಯರೊಂದಿಗೆ ವಸತಿ ನಿಲಯದ ಕುಂದು ಕೊರತೆಗಳನ್ನು ಕುರಿತು ಚರ್ಚೆ ನಡೆಸಿದರು. ನಂತರ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾಥರ್ಿ ವಸತಿ ನಿಲಯ "ಅನಿಕೇತನ"ಕ್ಕೆ ದಿಢೀರ್ ಭೇಟಿ ನೀಡಿ ವಸತಿ ನಿಲಯದಲ್ಲಿ ಸಿದ್ಧಪಡಿಸಿದ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಸೌಲಭ್ಯಗಳು ಮತ್ತು ಕುಂದುಕೊರತೆಗಳಿಗೆ ಸಂಬಂಧಪಟ್ಟಂತೆ ಸಂಶೋಧನಾ ವಿದ್ಯಾಥರ್ಿಗಳೊಂದಿಗೆ ಚರ್ಚಿಸಿದರು