ಬಳ್ಳಾರಿ: ಶಿವರಾತ್ರಿಗೆ ಪೌರಾಣಿಕ ಹಿನ್ನೆಲೆ ಇದೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿಕೆ

ಲೋಕದರ್ಶನ ವರದಿ

ಬಳ್ಳಾರಿ 22: ತೇರುಬೀದಿಯ ದೊಡ್ಡ ಮಾರ್ಕೆಟ್ ಹತ್ತಿರ ನವ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮವನ್ನು ಶುಕ್ರವಾರದಂದು ರಾತ್ರಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಉದ್ಘಾಟಿಸಿ ಮಾತನಾಡಿ, ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಮಹಾಶಿವರಾತ್ರಿಗೆ ಪೌರಾಣಿಕ ಹಿನ್ನೆಲೆ ಇದೆ. ಇಂತಹ ಆಚರಣೆಗಳಿಂದ ಸಮುದಾಯಗಳಿಗೆ ಹಲವು ರೀತಿಯಲ್ಲಿ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನವಕನರ್ಾಟಕ ಯುವಶಕ್ತಿ ಸಂಘಟನೆಯವರು ಇಂತಹ ಮನೋರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು. 

ಬಳ್ಳಾರಿಯ ಅಣ್ಣಾ ಫೌಂಡೇಶನ್ನಿನ ರಾಜೇಶ್ ಮೂಲಾಲಿ ಮಾತನಾಡಿ ಬಳ್ಳಾರಿಯಲ್ಲಿ ನವಕನರ್ಾಟಕ ಯುವಶಕ್ತಿ ಸಂಘಟನೆಯವರು ಕನ್ನಡ ನಾಡು, ನುಡಿ, ನೆಲ, ಜಲ ಸೇರಿದಂತೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯವನ್ನು ಶ್ಲಾಘಿಸಬೇಕಾಗಿದೆ ಎಂದು ತಿಳಿಸಿದರು. 

ಅಭಿನಯ ಕಲಾಕೇಂದ್ರದ ಅಧ್ಯಕ್ಷರಾದ ಕೆ.ಜಗದೀಶ್ ಅವರು ಮಾತನಾಡಿ ಬಳ್ಳಾರಿಯ ಎಲೆ ಬಜಾರ್ನಲ್ಲಿ ಗಣೇಶ ಉತ್ಸವದ ಸಂದರ್ಭದಲ್ಲಿ ನಾವು ವೇದಿಕೆಯನ್ನು ಹತ್ತಿದ ಮೇಲೆ ಅನೇಕ ಪ್ರತಿಭಾವಂತ ವಿದ್ಯಾಥರ್ಿಗಳನ್ನು ನಾಟಕ ಕ್ಷೇತ್ರಕ್ಕೆ ಸೆಳೆದಿರುವುದಾಗಿ ತಿಳಿಸಿದರಲ್ಲದೆ ಶಿವರಾತ್ರಿಯಂತಹ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಜನರಲ್ಲಿ ಭಕ್ತಿಗೀತೆ ಸೇರಿದಂತೆ ಹಲವು ಪ್ರಕಾರದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸಂತೋಷದ ಸಂಗತಿ ಎಂದರು. 

ಸರಳಾದೇವಿ ಕಾಲೇಜಿನ ಉಪನ್ಯಾಸಕ ಡಾ.ಕೆ.ಬಸಪ್ಪ ಅವರು ಮಾತನಾಡಿ ಬಳ್ಳಾರಿಯಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆಯು ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಬಳ್ಳಾರಿ ಮಹಾನಗರ ಪಾಲಿಕೆಗೆ ಸಾಕಷ್ಟು ತೆರಿಗೆ ಪಾವತಿಯಾಗುವಂತೆ ಮಾಡಿ ಅದರ ಕಂದಾಯವನ್ನು ಹೆಚ್ಚಿಸಿದೆ ಎಂದು ಹೇಳಿದರು. 

ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಬ್ರೂಸ್ ಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ನಾಗರಾಜ್ ಅವರು ವಹಿಸಿ ಮಾತನಾಡಿ ಈ ಸಂಘಟನೆಯ ಮುಖಂಡರು ನಮ್ಮಲ್ಲಿ ಬಂದು ಪರವಾನಿಗಿಯನ್ನು ಪಡೆದಿದ್ದು, ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು ಹೇಳಿದರು. 

ವೇದಿಕೆಯ ಮೇಲೆ ಕನ್ನಡ ಪರ ಹೋರಾಟಗಾರರಾದ ಜಿ.ಬಸವರಾಜ್ ಅವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಕೆ.ರಮೇಶ್, ಸಿದ್ಮಲ್ಮಂಜುನಾಥ, ಮಾದೆಗೊಂಡ ಮಂಜುನಾಥ, ಗಿರಿಬಾಬು, ರವಿಕುಮಾರ್, ಜೆ.ಪಿ.ಮಂಜುನಾಥ, ದೇವೇಶ್, ಮಹೇಶಕುಮಾರ್, ರಾಮಚಂದ್ರ, ಕೆ.ಮಂಜುನಾಥ, ಕೇದಾರನಾಥ, ಪಂಪಾಪತಿ, ಯಮುನಪ್ಪ ಮುಂತಾದವರು ಹಾಜರಿದ್ದರು. ಆರಂಭದಲ್ಲಿ ಮಾರೇಶ್ ಪ್ರಾಥರ್ಿಸಿದರು. ಕೇಣಿ ಬಸವರಾಜ್ ಸ್ವಾಗತಿಸಿ, ನಿರೂಪಿಸಿದರು. 

ಮನೋರಂಜನೆ ಕಾರ್ಯಕ್ರಮ 

ಕೊಪ್ಪಳದ ಸೃಷ್ಟಿ ಮೆಲೋಡಿಸ್ ಆರ್ಕೆಸ್ಟ್ರಾದ ಮಾರೇಶ್, ನಾಗರಾಜ್, ರೇಷ್ಮಾ, ಎಸ್.ಅಲಿಗೇರಿ ಕೊಟ್ರೇಶ್ ಇವರು ಹಾಸ್ಯ ಕಾರ್ಯಕ್ರಮಗಳು, ಸಂಗೀತ, ಚಲನಚಿತ್ರ ಸಂಗೀತ, ಜನಪದ ಸಂಗೀತ, ತತ್ವಪದಗಳ ಗಾಯನವನ್ನು ಮಾಡಿ ಜನರನ್ನು ರಾತ್ರಿಯಿಡೀ ರಂಜಿಸಿದರು. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.