ಲೋಕದರ್ಶನ ವರದಿ
ಬಳ್ಳಾರಿ 18: ನಗರದ ಸತ್ಯಂ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜು ಆವರಣದಲ್ಲಿ ದಿ 3ನೇ ಅಂತರ್ ಜಿಲ್ಲಾ ರೂಲರ್ ಸ್ಕೇಟಿಂಗ್ ಪಂಧ್ಯಾವಳಿಯನ್ನು ಏಕಲವ್ಯ ರೂಲರ್ ಸ್ಕೇಟಿಂಗ್ ಅಕಾಡಮಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಈ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಾದ ಕಲ್ಬುಗರ್ಿ, ಕೊಪ್ಪಳ, ಗದಗ, ಹುಬ್ಬಳ್ಳಿ, ಬೀದರ್, ಬಳ್ಳಾರಿಯಿಂದ ಸುಮಾರು 150 ಕ್ಕೂ ಹೆಚ್ಚು ರೂಲರ್ ಸ್ಕೇಟಿಂಗ್ ಕ್ರೀಡಾಪಟುಗಳು ಭಾಗವಹಿಸಿದ್ದರು.
ಸ್ಕೇಟಿಂಗ್ ಅಕಾಡಮಿ ಅಧ್ಯಕ್ಷರಾದ ಶ್ರೀ.ಆನಂದ್ ಪೋಲಾ ರವರು ಉದ್ಘಾಟಿಸಿ ಮಾತನಾಡಿ ಇಂತಹ ಕ್ರೀಡಾ ಚಟುವಟಿಕೆಗಲು ನಮ್ಮ ಹಿಂದುಳಿದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಅದಕ್ಕೆ ಜಿಲ್ಲಾಡಳಿತ ನಮ್ಮ ಅಕಾಡಮಿಗೆ ಸುಸಜ್ಜಿತ ಸ್ಕೇಟಿಂಗ್ ಮೈದಾನವನ್ನ ಆದಷ್ಟು ಬೇಗನೆ ಜಿಲ್ಲಾ ಕ್ರೀಡಾಂಗದಲ್ಲಿ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಹರಿಶಂಕರ್ ಅಗರ್ ವಾಲ್ ಸತ್ಯಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಗದೀಶ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರಾಮಾಂಜಿನೇಯಲು ಬಂಡಿಹಟ್ಟಿ ಮಹೇಶ್, ರಾಜು, ಶೇಖರ್, ಬಳ್ಳಾರಿ ಜಿಲ್ಲಾ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಚಂದ್ರಶೇಖರ್ಗೌಡ, ಕಾರ್ಯದಶರ್ಿಗಳಾದ ಚಂದ್ರಶೇಖರ್, ಸುಭಾಷ್ ಚಂದ್ರ, ಉಪಸ್ಥಿತರಿದ್ದರು, ಪ್ರಾಸ್ತಾವಿಕವಾಗಿ ಆಯೋಜಕರು ಹಾಗೂ ಸ್ಕೇಟಿಂಗ್ ಅಕಾಡಮಿಯ ಕಾರ್ಯದರ್ಶಿಗಳಾದ ಕಟ್ಟೇಸ್ವಾಮಿ ಮಾತನಾಡಿದರು, ಶಿವಶಂಕರಯ್ಯ ನಿರೂಪಣೆಯನ್ನು ನಡೆಸಿಕೊಟ್ಟರು.