ಬಳ್ಳಾರಿ: ಜಿಲ್ಲಾ ಮಟ್ಟದ ಕ್ರಿಕೇಟ್ ಸ್ಪರ್ಧೆ

ಲೋಕದರ್ಶನ ವರದಿ

ಬಳ್ಳಾರಿ 19: ಜಿಲ್ಲೆಯ ಆರ್ಯವೈಶ್ಯ ಸಂಘದವರು ಬಳ್ಳಾರಿ ನಗರದಲ್ಲಿ ಕನ್ನಿಕ ಪರಮೇಶ್ವರಿ ದೇವಸ್ಥಾನದ ಶತಮಾನೋತ್ಸವದ ಪ್ರಯುಕ್ತವಾಗಿ ಜಿಲ್ಲಾ ಮಟ್ಟದ ಕ್ರಿಕೇಟ್ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಯು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಕ್ರೀಡಾಂಗಣದಲ್ಲಿ ನಡೆಯಿತು, ಈ ಕ್ರಿಕೇಟ್ ಸ್ಪರ್ಧೆಯನ್ನು ಚೇಂಬರ್ ಅಫ್ ಕಾಮಾರ್ಸ್ನ ಮಾಜಿ ಅಧ್ಯಕ್ಷರಾದ ಡಾ.ಡಿ.ಎಲ್.ರಮೇಶ ಕುಮಾರ್ ಉದ್ಘಾಟಿಸಿ ಮಾತನಾಡಿದರು.  

ಕನ್ನಿಕ ಪರಮೇಶ್ವರಿ ಶತಮಾನೋತ್ಸವಾಗಿ ಅಂಗವಾಗಿ ಸಂಘದ ವತಿಯಿಂದ ಪ್ರತಿ ತಿಂಗಳು ಒಂದು ಸ್ಪಧರ್ೆಯನ್ನು ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಮತ್ತು ಕ್ರಿಕೇಟ್ ಸ್ಪರ್ಧೆಯಲ್ಲಿ 15 ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿವೆ ಬಳ್ಳಾರಿ, ಸಂಡೂರು, ಹೊಸಪೇಟೆ, ತೋರಣಗಲ್ಲು, ಚೋರನೂರು, ಕಂಪ್ಲಿ, ಮುಂತಾದ ಕ್ರಿಕೇಟ್ ತಂಡಗಳು ಭಾಗವಹಿಸಿವೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕ, ಪ್ರಶಸ್ತಿ ಪತ್ರ ನೀಡಲಾಗುವುದು. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಳಿಸಿದರು. 

ಕ್ರಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟಿಯಾದ ಬೈರಾಪುರ ನಾರಾಯಣ ಶೆಟ್ಟಿ, ಆಶ್ವತ್ ನಾರಾಯಣ, ಗಾದೆಂ ಗೋಪಾಲಕೃಷ್ಣ, ಪೋಲಾ ರಾಧಾಕೃಷ್ಣ, ಕಿಶೋರ್ ಕುಮಾರ್. ಜೆ, ಜಯಗುಪ್ತ, ಸ್ವಂತಗಿರಿ, ನಾಮಕಾರ್ತಿಕ್, ರಾಮಕೃಷ್ಣ, ಬಾಲಾ ನಾಗರಾಜು, ವೇಣುಗೋಪಾಲ, ಅರ್ಜುನ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.