ಲೋಕದರ್ಶನ ವರದಿ
ಬಳ್ಳಾರಿ 02: ನಗರದ ವಿರಶೈವ ವಿಧ್ಯವರ್ಧಕ ಸಂಘದ ಎಲ್ಲಾ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ನಗರದಲ್ಲಿ ಮೂರು ದಿನಗಳ ಕಾಲ ಪ್ರತಿಭಾ ಪ್ರದರ್ಶನದ ಸಾಂಸ್ಕೃತಿಕ ಉತ್ಸವ 2020 ಪೆಬ್ರವರಿ 04ರಿಂದ 06ರವರಗೆ ನಡೆಯಲಿದೆ. ಕುರಿತು ವಿವಿ ಸಂಘದ ಕಛೇರಿಯಲ್ಲಿ ಅಧ್ಯಕ್ಷ ಉಡೇದ್ ಬಸವರಾಜ್, ಕಾರ್ಯದಶರ್ಿ ಚೊರುನೂರು ಕೊಟ್ರಪ್ಪ ಅವರು ಮಾತಾನಾಡಿ ಫೆ.05 ಮತ್ತು 06 ರಂದು ನಗರದ ಕಪ್ಪಗಲ್ ರಸ್ತೆಯಲ್ಲಿರುವ ಶೆಟ್ರು ಗುರುಶಾಂತಪ್ಪ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಚಿಸಿರುವ ಬೃಹತ್ ವೇಧಿಕೆಯಲ್ಲಿ ದಿನನಿತ್ಯ ಸಾಯಂಕಾಲ 06ಗಂಟೆಗೆ 20 ತಂಡಗಳಿಂದ ಕಲಾಪ್ರದರ್ಶನ ನಡೆಯಲಿದೆ. ಸಂಘದ ವಿವಿಧ ವಿಧ್ಯಾಸಂಸ್ಥೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪ್ರತಿಭೆಯ ಅನಾವರಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದು ಎರಡನೇ ವರ್ಷದ ಕಲಾ ಪ್ರದರ್ಶನ ಎಂದು ಕೇಳಿದ ಪ್ರಶ್ನೆಗೆ ವಿವರಿಸಿದರು. ಪೆಬ್ರವರಿ 04ರಂದು ಬೆಳಗ್ಗೆ 9 ಗಂಟೆಗೆ ಮುನ್ಸಿಪಾಲ್ ಹೈಸ್ಕೂಲ್ ಮೈದಾನದಿಂದ ಆರಂಭಗೊಳ್ಳುವ ಸಾಂಸ್ಕೃತಿಕದ ಕಲಾ ಪ್ರದರ್ಶನದ ಮೆರವಣಿಗೆ ನಗರದ ಡಿವೈಎಸ್ ಪಿ ಕೆ.ರಾಮ್ರಾವ್ ಚಾಲನೆ ನೀಡಲಿದ್ದಾರೆ. ಈ ಮೆರವಣಿಗೆಯಲ್ಲಿ ವಿದ್ಯಾಸಂಸ್ಥೆಯ 3000 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಮೆರವಣಿಗೆ ಮುನ್ಸಿಪಾಲ್ ಮೈದಾನದಿಂದ ಗಡಿಗೆ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಜೈನ್ ಮಾರುಕಟ್ಟೆ ಹೆಚ್ ಆರ್ ಜಿ ವೃತ್ತದ ಮೂಲಕ ಹೊಸ ಬಸ್ ನಿಲ್ದಾಣದ ಎದುರಿಗಿರುವ ಹಿರೇಸೂಗಮ್ಮ ಪ್ರೌಢಶಾಲಾ ಅವರಣದಲ್ಲಿ ಬಂದು ಸೇರಲಿದೆ ಎಂದರು. ಪೆಬ್ರವರಿ 05ರಂದು ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಕಾರ್ಯಕ್ರಮ
ನಡೆಯಲಿದ್ದು, ಇದರ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಉದ್ಘಾಟಿಸಲಿದ್ದಾರೆ. ಹಂಪಿ ಸಾವಿರ ಮಠದ ವಾಸುದೇವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ನಂತರ ಸಾಂಸ್ಕೃತಿಕ ಉತ್ಸವ ನಡೆಯಲಿದೆ ಅದೇರೀತಿ ಮರುದಿನ ಪೆಬ್ರವರಿ 06 ಸಮಾರೋಪಾ ಸಮಾರಂಭ ಸಂಜೆ 06 ಗಂಟೆಗೆ ನಡೆಯಲಿದ್ದು ವಿಎಸ್ ಕೆ ಯು ಬಿ ಕುಲಪತಿ, ಪ್ರೋ.ಸಿದ್ದು ಪಿ. ಅಲಗೂರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದರಲ್ಲಿ ಎಡಿಸಿ ಮಂಜುನಾಥ ಮಹಾನಗರ ಪಾಲಿಕೆ ಆಯುಕ್ತೆ ತುಷಾರ್ ಮಣಿ, ಡಿಡಿಪಿಯು ಬಿ.ಆರ್.ನಾಗರಾಜಪ್ಪ, ಡಿಡಿಪಿಐ ರಾಮಪ್ಪ, ಇನ್ನೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಉತ್ಸವದಲ್ಲಿ ಈ ಹಿಂದೆ ಅಧ್ಯಕ್ಷ ಪದವಿ ಸ್ವಿಕರಿಸಿ ನಿವೃತ್ತರಾದ ಸಂಘದ ಎಲ್ಲಾ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಎಂ, ವೀರಭದ್ರ ಶರ್ಮ, ಖಚಾಂಚಿ ಕೋಳೂರು ಮಲ್ಲಿಕಾರ್ಜುನ ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ.ಶರಣ ಗೌಡ, ಡಾ.ಸೋಮಶೇಖರ್ ಗಡ್ಡಿ, ಕೆ.ಎಂ. ಮಹೇಶ್ವರ್ ಸ್ವಾಮಿ, ರಾಮನಗೌಡ, ಜಿ.ಎಸ್.ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.