ಲೋಕದರ್ಶನ ವರದಿ
ಬಳ್ಳಾರಿ 29: ಹೊಸಪೇಟೆಯಲ್ಲಿ ರಾಜ್ಯ ಮಟ್ಟದ ಬುದ್ದಿಮಾಂದ್ಯ ಮಕ್ಕಳ ಸ್ಪೇಷಲ್ ಓಲಿಂಪಿಕ್ಸ್ ಕ್ರೀಡಾ ಕೂಟ ಹಾಗೂ ಆಯ್ಕೆ ಶಿಬಿರವನ್ನು ಸಾಧ್ಯ ವಿಶೇಷ ಮಕ್ಕಳ ಶಾಲೆ, ದಯಾನಂದ್ ಸ್ಪೋಟ್ಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟ ಮತ್ತು ಆಯ್ಕೆ ಶಿಬಿರದಲ್ಲಿ ಪವರ್ ಲಿಪ್ಟಿಂಗ್, ಬಾಸ್ಕೆಟ್ ಬಾಲ್, ಫುಟ್ಬಾಲ್ ಆಟಗಾರರ ಆಯ್ಕೆಯು ರಾಷ್ಟ್ರ ಹಾಗೂ 2023 ರಲ್ಲಿ ಬೆಲರ್ಿನ್ನಲ್ಲಿ ನಡೆಯಲಿರುವ ಸ್ಪೆಷಲ್ ಓಲಿಂಪಿಕ್ಸ್ ವಲ್ಡರ್್ ಗೇಮ್ಸ್ನ ಆಯ್ಕೆ ಪ್ರಕ್ರೀಯೆಯಾಗಿದ್ದು 200 ಅಥ್ಲೀಟ್ಗಳು 15 ಜಿಲ್ಲೆಯಿಂದ ಬಾಗವಹಿಸಿದ್ದರು.
ಮುನ್ಸಿಪಲ್ ಗ್ರೌಂಡ್ ಆಡಿಟೋರಿಯಂನಲ್ಲಿ ಉದ್ಘಾಟನ ಕಾರ್ಯಕ್ರಮವನ್ನು ಪೂಣರ್ಿಮ ಯಾದವ್ ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆ.ಎಂ.ಎಪ್.ಸಿ ಹೊಸಪೇಟೆ ನೆರವೆರಿಸುದರು. ಉದ್ಘಾಟನಾ ಭಾಷಣದಲ್ಲಿ ವಿಶೇಷ ಮಕ್ಕಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಈ ಮಕ್ಕಳಿಗೆ ತರಬೇತಿ ಶಿಕ್ಷಣ ಕೊಡುವುದು ಬಹಳ ಕಠಿಣ ಕೆಲಸವಾಗಿರುತ್ತದೆ. ಸರಕಾರ ಮಟ್ಟದಲ್ಲೆ ಏನಾದರು ಕೆಲಸ ಕಾರ್ಯಗಳು ಆಗಬೇಕಿದ್ದರೆ ತಮ್ಮ ಸಹಕಾರವು ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿವಾಕರ್ ಚೀಫ್ ಡಿವಿಸನಲ್ ರಿಟೇಲ್ ಸೇಲ್ಸ್ ಮ್ಯಾನೆಜರ್, ಇಂಡಿಯನ್ ಆಯಿಲ್ ಕಾಪರ್ೋರೇಶನ್ ಲಿಮಿಟೆಡ್, ಬಳ್ಳಾರಿ ಡಿವಿಜನ್ ಮಾತನಾಡಿ ಇಂತಹ ವಿಶೇಷ ಮಕ್ಕಳ ಕಾರ್ಯಕ್ರಮಕ್ಕೆ ಸಂಸ್ಥೆ ಸದಾ ಸಿದ್ದವಿರುತ್ತದೆ ಎಂದು ತಿಳಿಸಿದರು.
ಎಂ.ಡಿ ಕಿರಣ್ ಕುಮಾರ್, ಸೀನೀಯರ್ ಮ್ಯಾನೇಜರ್, ಇಂಡಿಯನ್ ಆಯಿಲ್ ಕಾರ್ಪ್ಯೂರೇಶನ್ ಲಿಮಿಟೆಡ್, ಡಿವಿಜನ್ ಅಮರೇಂದ್ರ ಅಂಜನಪ್ಪ, ಕ್ರೀಡಾ ನಿದರ್ೇಶಕರು, ಸ್ಪೇಷಲ್ ಓಲಿಂಪಿಕ್ಸ್ ಭಾರತ್ ಕನರ್ಾಟಕ ಉಪಸ್ಥಿತರಿದ್ದರು.