ಬಳ್ಳಾರಿ: 'ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ

ಲೋಕದರ್ಶನ ವರದಿ

ಬಳ್ಳಾರಿ 10: ನಗರದ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ವತಿಯಿಂದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ನೇತೃತ್ವದಲ್ಲಿ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿರವರಿಗೆ ಮನವಿ ಸಲ್ಲಿಸಿದ ಪ್ರತಿಯ ಜೊತೆಗೆ ಹಿಂದೂಪುರಂ ಲೋಕಸಭಾ ಸದಸ್ಯ ಗೋರಂಟ್ಲ ಮಾಧವ ರವರಿಗೆ ಉಚ್ಛ ನ್ಯಾಯಾಲಯ ತೀರ್ಪು  ನೀಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳೆಂದು ನಿರ್ಧರಿಸಲು ತೀರ್ಮಾನಿಸಲು ಸ್ವತಂತ್ರ ಪೂರ್ವದ ದಾಖಲೆಗಳಿಗೆ ಹೆಚ್ಚಿನ ಮಹತ್ವ ಕೊಡಬೇಕೆಂದು ತೀರ್ಪು  ನೀಡಿದೆ. 

ಕರ್ನಾಟಕ ರಾಜ್ಯ ಸರ್ಕಾ ರ ದಿನಾಂಕ 23.01.1986ರ ಆದೇಶದಂತೆ 'ಕುರುಬ'ರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಉನ್ನತ ಮಟ್ಟದ ಸಮಿತಿ ರಚಿಸಿ, ಸಚಿವ ಸಂಪುಟ ಒಪ್ಪಿಗೆ ಪಡೆದು ತುರ್ತಾ ಗಿ ಕೇಂದ್ರ ಸಕರ್ಾರಕ್ಕೆ ಕಳುಹಿಸಬೇಕೆಂದು ಲೋಕಸಭೆಯಲ್ಲಿ ಅಂಗೀಕಾರ ಆಗುವವವರೆಗೂ ಸಹಕರಿಸಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಿ.ಎಂ.ಪಾಟೀಲ್, ಜಿಲ್ಲಾ ಗೌರವಾಧ್ಯಕ್ಷ ಕೆ.ಹೊನ್ನಪ್ಪ, ಸಂಘಟನಾ ಕಾರ್ಯದರ್ಶಿ  ಕಪ್ಪಗಲ್ಲು ಮಲ್ಲಿಕಾಜರ್ುನ, ಕುರುಗೋಡು ಚನ್ನಬಸವರಾಜ, ರಾಜ್ಯ ಸಂಘಟನಾ ಕಾರ್ಯದಶರ್ಿ ಅನಿಲ್ ಕುಮಾರ್, ಜಿಲ್ಲಾ ಕಾಯರ್ಾಧ್ಯಕ್ಷ ಕೆ.ಎನ್.ಯುಗಂಧರ್, ಖಜಾಂಚಿ ಕೆ.ಶಿವಕುಮಾರ್, ಸಂಗನಕಲ್ಲು ಜೋಗಿನ ಶಿವಕುಮಾರ್, ಸಿರುಗುಪ್ಪ ತಾಲೂಕು ಅಧ್ಯಕ್ಷ ಕೆ.ನಾಗರಾಜ, ಸಂಘಟನಾ ಕಾರ್ಯದಶರ್ಿ ಚಾಗನೂರು ಜಂಬಯ್ಯ, ಕೀರ್ತಿಬಾಬು, ಶಿವಸಾಗರ್ ಹಾಗೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.