ಬೆಳಗಾವಿಯ ಸಕ್ಕರೆ ಮಹಾವಿದ್ಯಾಲಯದ ಪ್ರಥಮ ವಾರ್ಷಿ ಕೋತ್ಸವ

ಲೋಕದರ್ಶನ ವರದಿ

ಬೆಳಗಾವಿ, 15: ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ, ಬಿ.ಎಸ್ಸಿ (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ) ಮಹಾವಿದ್ಯಾಲಯದ ಮೊದಲ ವಾರ್ಷಿ ಕೋತ್ಸವ ಸಮಾರಂಭವನ್ನು ದಿ.12.04.2019 ರಂದು ಜರುಗಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಡಾ. ಎಸ್. ಪಿ. ಅಲಗೂರ, ಕುಲಸಚಿವರು (ಆಡಳಿತ), ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇವರು ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಡಾ. ಸೀಮಾ ಪರೋಹಾ, ಮುಖ್ಯಸ್ಥರು, ಮದ್ಯಸಾರ ವಿಭಾಗ, ರಾಷ್ಟ್ರೀಯ ಸಕ್ಕರೆ ಸಂಸ್ಥೆ, ಕಾನಪುರ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆರ್. ಬಿ. ಖಾಂಡಗಾವೆ, ನಿದರ್ೆಶಕರು, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯವರು ವಹಿಸಿದ್ದರು.

ಮುಖ್ಯ ಅತಿಥಿಗಳಾದ ಡಾ. ಎಸ್. ಪಿ. ಅಲಗೂರ ಇವರು ತಮ್ಮ ಭಾಷಣದಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯು ಸಕ್ಕರೆ ಉದ್ದಿಮೆ ಹಿತದೃಷ್ಟಿಯಿಂದ ರಾಜ್ಯದಲ್ಲಿ ಪ್ರಥಮವಾಗಿ ಬಿ.ಎಸ್ಸಿ. (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ) ಪದವಿ ಮಹಾವಿದ್ಯಾಲಯವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಸಂಯೋಜನೆಯೊಂದಿಗೆ ಪ್ರಾರಂಭವಾಗಿದೆ ಎಂದು ಹೇಳಿದರು. ಬಿ.ಎಸ್ಸಿ. (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ) ಕೋರ್ಸ ಇದು ವೃತ್ತಿಪರ ಕೋರ್ಸ ಇರುವುದರಿಂದ ಇಲ್ಲಿಯ ವಿದ್ಯಾಥರ್ಿಗಳಿಗೆ ಪದವಿ ಪೂರ್ಣಗೊಂಡ ನಂತರ ಹೆಚ್ಚಿನ ಮಹತ್ವ ಬರಲಿದೆ ಎಂದು ತಿಳಿಸಿದರು. ಈಗಾಗಲೇ ಸಕ್ಕರೆ ಉದ್ಯಮಕ್ಕೆ ಅವಶ್ಯವಿರುವ ಪಠ್ಯಕ್ರಮವನ್ನು ಸದರಿ ಕೋರ್ಸನಲ್ಲಿ ಅಳವಡಿಸುವುದರಿಂದ ಈ ಕೋರ್ಸ ಪೂರ್ತಿ ಯಾದ ನಂತರ ವಿದ್ಯಾರ್ಥಿ ಗಳಿಗೆ ಸಕ್ಕರೆ ಉದ್ಯಮೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶಗಳು ಹೆಚ್ಚಿಗೆ ದೊರೆಯುತ್ತವೆ ಎಂದು ಹೇಳಿದರು. ಮುಂದುವರೆದು, ಸದರಿ ಕೋರ್ಸಗೆ ಈಗಾಗಲೇ ಹಲವಾರು ಸೌಲಭ್ಯಗಳನ್ನು ಒದಗಿಸಿರುವುದರಿಂದ ಈ ರೀತಿ ತ್ವರಿತಗತಿಯಲ್ಲಿ ಆಗಿರುವ ಪ್ರಗತಿಯ ಚಟುವಟಿಕೆಗಳ ಬಗ್ಗೆ ಪ್ರಶಂಸಿಸಿದರು. ಪ್ರತಿಯೊಬ್ಬ ವಿದ್ಯಾಥರ್ಿಯು ತಮ್ಮ ಜೀವನಲ್ಲಿ ಸಾಧನೆಯನ್ನು ಕೈಕೊಳ್ಳಬೇಕಾದರೆ ಪ್ರಾಮಾಣಿಕತೆಯನ್ನು ಹೊಂದಿರಬೇಕು ಎಂದು ಹೇಳಿದರು       

  ನಂತರ ಗೌರವ ಅತಿಥಿಗಳಾದ ಡಾ. ಸೀಮಾ ಪರೋಹಾ ರವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿ ಗಳ ಭವಿಷ್ಯಕ್ಕೆ ಸಹಾಯವಾಗುವ ಸಲಹೆಗಳನ್ನು ನೀಡಿದರು. ಸಣ್ಣ ಸಣ್ಣ ಸಾಧನೆಗಳನ್ನು ನಿತ್ಯವೂ ಮಾಡುತ್ತಾ ದೊಡ್ಡ ಸಾಧನೆಯತ್ತ ಮುನ್ನಡೆಯಿರಿ ಎಂದು ಕರೆ ಕೊಟ್ಟರು. ರಾಷ್ಟ್ರೀಯ ಸಕ್ಕರೆ ಸಂಸ್ಥೆ, ಕಾನಪುರ ಹಾಗೂ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಸಂಸ್ಥೆಗಳ ಸಂಬಂಧವು ತುಂಬಾ ಚೆನ್ನಾಗಿರುವುದಾಗಿ ತಿಳಿಸಿದರು. 

ಸಂಸ್ಥೆಯ ನಿದರ್ೆಶಕರು ಹಾಗೂ ಪ್ರಾಂಶುಪಾಲರಾದ ಡಾ. ಆರ್. ಬಿ. ಖಾಂಡಗಾವೆ ಇವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಹೊಸ ಕಾಲೇಜನ್ನು ಪ್ರಾರಂಭಿಸಲು ನೆರವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಇತರ ಸದಸ್ಯರಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಯವರಿಗೆ ಧನ್ಯವಾದಗಳನ್ನು ಅಪರ್ಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯ ವಿದ್ಯಾರ್ಥಿ ಗಳಿಗೆ ಅವಶ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸುವ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. 

ಪ್ರಸ್ತುತ ಸಾಲಿನ ವಾರ್ಷಿ ಕ ವರದಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ವಾರ್ಷಿ ಕ ವರದಿಯನ್ನು ಕಾಲೇಜಿನ ಉಪನ್ಯಾಸಕಿಯಾದ ಕು. ಧನಶ್ರೀ ಅಂಗಡಿಯವರು ಪ್ರಸ್ತುತಪಡಿಸಿದರು. ಪ್ರಸಕ್ತ ಸಾಲಿನ ಎಲ್ಲ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜಯಗಳಿಸಿದ ವಿದ್ಯಾರ್ಥಿ ಗಳಿಗೆ ಅತಿಥಿಗಳು ಪ್ರಶಸ್ತಿ ಪ್ರಧಾನ ಮಾಡಿದರು. ಸಮಾರಂಭವನ್ನು ಕಾಲೇಜಿನ ವಿದ್ಯಾರ್ಥಿ ಗಳಾದ ಕುಮಾರಿ. ರುಚಿತಾ ಪಾಟೀಲ ಮತ್ತು ಕುಮಾರ. ವೈಭವ ಪಾಟೀಲ ಇವರು ನಿರೂಪಿಸಿದರು. ಸ್ವಾಗತ ಭಾಷಣ ಹಾಗೂ ಅತಿಥಿಗಳ ಪರಿಚಯವನ್ನು ಸಂಯೋಜಕರಾದ ಎ. ಆರ್. ತಾರದಾಳೆ ಇವರು ನೆರವೇರಿಸಿದರು. ರಮೇಶ ಹನಸಿ, ವ್ಯವಸ್ಥಾಪಕರು ಇವರು ಕಾರ್ಯಕ್ರಮವನ್ನು ವಂದಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿದವು.