ಬೆಳಗಾವಿ 03: ಸ್ಥಳೀಯ ಕಣಬರ್ಗಿ ರಸ್ತೆಯ ಶ್ರೀ ಚಾಂಗದೇವ (ಯಮನೂರ್ಪ) ಜಾತ್ರೆ ಮಾರ್ಚ್ 18 ರಿಂದ 23ರವರೆಗೆ ನಡೆಯಲಿದೆ.
ಮಾರ್ಚ್ 18ರಂದು ಶ್ರೀ ಚಾಂಗದೇವರ ಪಲ್ಲಕ್ಕಿ ಉತ್ಸವ ನಡೆಯುವುದು. ಕಣಬರ್ಗಿ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ನಂತರ ದೇವಸ್ಥಾನದಲ್ಲಿ ದೇವರಿಗೆ ಗಂದಾಭಿಷೇಕ ಉತ್ಸವ ನಡೆಯುವುದು.
ದಿನಾಂಕ 19 ರಂದು ಮಹಾಪೂಜೆ ಮಧ್ಯಾಹ್ನ ಮಹಾಪ್ರಸಾದ ನಡೆಯುವುದು. 20 ರಂದು ಸಂಜೆ 6 ಗಂಟೆಗೆ ಮಹಾಪೂಜೆ ಹಾಗೂ ಅಶ್ವಪೂಜೆ ನಡೆಯುವುದು. ಪಲ್ಲಕ್ಕಿ ದೇವಸ್ಥಾನ ಪ್ರದಕ್ಷಿಣೆ ಹಾಕುವುದು.
21 ರಂದು ಬೆಳಗ್ಗೆ ದಂಡವತ ಕಾರ್ಯಕ್ರಮ ಜರಗುವುದು . 22ರಂದು ಮಹಾಪ್ರಸಾದ ಕಾರ್ಯಕ್ರಮ ನಡೆಯುವುದು. ಸಂಜೆ ಗುರು ಪೂಜೆ, ಪಲ್ಲಕ್ಕಿ ದೇವಸ್ಥಾನ ಪ್ರದಕ್ಷಣೆ ನಂತರ ಭಜನೆ, ಕೀರ್ತನ ಕಾರ್ಯಕ್ರಮ ಜರುಗುವುದು. 23 ರಂದು ಮಧ್ಯಾಹ್ನ 1 ಗಂಟೆಗೆ ಗಾರಾಣಿ ಹಾಕುವ ಕಾರ್ಯಕ್ರಮ ನಂತರ ಭಂಡಾರ , ಹಬೀರ ಉತ್ಸವ ಇರುವುದು. ರಾತ್ರಿ ಮಹಾಪ್ರಸಾದ ಕಾರ್ಯಕ್ರಮ ನಡೆಯುವುದು. ವಿವರಗಳಿಗೆ ಮೊ ನಂ. 9880532238 ಗೆ ಸಂಪರ್ಕಿಸಲು ಕೋರಲಾಗಿದೆ.
ಶಿಂದಿಕುರಬೇಟದಲ್ಲೂ ಜಾತ್ರೆ :
ಗೋಕಾಕ್ ತಾಲೂಕಿನ ಶಿಂದಿಕುರಬೆಟ ಚಾಂಗದೇವ (ಯಮನೂರ್ಪ ) ದೇವರ ಜಾತ್ರೆ ಮಾರ್ಚ್ 18 ಹಾಗೂ 19ರಂದು ನಡೆಯಲಿದೆ.
18 ರಂದು ಗಂದಾಭಿಷೇಕ ಉತ್ಸವ ನಡೆಯುವುದು. ಈ ನಿಮಿತ್ತ ಮುತ್ತೈದೆಯರ ಕುಂಭ ಆರತಿ ಹಾಗೂ ವಾದ್ಯ ಮೇಳಗಳ ಮೆರವಣಿಗೆ ನಡೆಯುವುದು . ನಂತರ ಸಂಗೀತ ಕಾರ್ಯಕ್ರಮ ಹಾಗೂ ಮಹಾ ಪ್ರಸಾದ ಜರುಗುವುದು .
19 ರಂದು ಮುಖ್ಯ ಜಾತ್ರೆ ನಡೆಯುವುದು. ಭಕ್ತರು ಅಂದು ನೈವೇದ್ಯ ಅರ್ಿಸುವರು. ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಸತ್ಕಾರ ಸಮಾರಂಭ ಜರುಗುವುದು . ವಿವರಗಳಿಗೆ ಮೊ ನಂ. 9945920803 ಗೆ ಸಂಪರ್ಕಿಸಲು ಕೋರಲಾಗಿದೆ