ಸಂಘಟನೆ ಸಮಾಜಕ್ಕೆ ಮಾದರಿಯಾಗಲಿ: ಮುಕ್ಕುಂದ

ಗುಲರ್ಾಪೂರ 02: ಸಂಘಟನೆ ಹುಟ್ಟುಹಾಕುವುದು ಮುಖ್ಯವಲ್ಲ, ಅದು ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಬೇಕು. ಸಂಘಟನೆಯನ್ನು  ಉಳಿಸಿ ಬೆಳೆಸಿ ಹೆಮ್ಮರವಾಗಿ ಬೆಳೆಸುವುದು ಕಷ್ಟ, ಕಾರಣ ಯುವಕರು ಯಾವುದೇ ಸ್ವಾರ್ಥಕ್ಕೆ ಬಲಿಯಾಗದೆ ನಿಸ್ವಾರ್ಥವಾಗಿ ಸಂಘಟಣೆಯಲ್ಲಿ ತೊಡಗಿದರೆ, ಗ್ರಾಮಕ್ಕೂ ಹಾಗೂ ದೇಶಕ್ಕೂ ಮಾದರಿಯಾಗಬಹುದು ಎಂದು ಗ್ರಾಮದ ಲಕ್ಷ್ಮೀ ಕೃಷಿಪತ್ತಿನ ಸಂಘದ ವ್ಯವಸ್ಥಾಪಕ ಮಹಾದೇವ ಮುಕ್ಕುಂದ ಹೇಳಿದರು.  

ಅವರು ದಿ. 1ರಂದು ವಿಶ್ವವಿಚೇತನ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ ಯುವಕರು ನೊಂದವರನ್ನು ಗುರುತಿಸಿ, ಅವರಿಗೆ ಸರಕಾರದಿಂದ ಸಿಗುವ ಸಹಾಯ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕು ಎಂದರು. 

ಹಿರಿಯರಾದ ಎಮ್.ಜಿ. ಮುಗಳಖೋಡ ಸಭೆಯ ಅದ್ಯಕ್ಷತೆ ವಹಿಸಿದ್ದರು. ಶಿವಾನಂದ ಹಿರೇಮಠ ಸಾನಿಧ್ಯ ವಹಿಸಿದ್ದರು ಹಾಗೂ ಶಿವರುದ್ರಯ್ಯಾ ಹಿರೇಮಠ, ಚಿದಾನಂದ ಹಿರೇಮಠ, ಶಿವಲಿಂಗ ಪುಠಾಣಿ, ಪಾವಾಡೆಪ್ಪಾ ದೇವರಮನಿ, ಸುರೇಶ ಮುಗಳಖೋಡ, ರವಿ ಶಾಬಣ್ಣವರ, ಸುರೇಶ ನೇಮಗೌಡರ, ದುಂಡಪ್ಪಾ ವಾಲಿಕಾರ, ಪ್ರಕಾಶ ಮುಗಳಖೋಡ, ಭೀಮಪ್ಪಾ ದೇವರಮನಿ, ಶ್ರೀನಿವಾಸ ಗಾಣೆಗೇರ, ಶಿವಾನಂದ ಕಂಬಾರ ಹಾಗೂ ವಿಶ್ವವಿಚೇತನ ಯುವಕ ಸಂಘದ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.