ಕೊರೊನಾ ಸಮುದಾಯಕ್ಕೆ ಹರಡುವ ಮುನ್ನ ಜಾಗೃತರಾಗಿರಿ

ಲೋಕದರ್ಶನ ವರದಿ 

ಯರಗಟ್ಟಿ 01: ರಾಜ್ಯದಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿದೆ ಇದರಿಂದ ಸಮುದಾಯಕ್ಕೆ ಹರಡುವ ಭಯ ಉಂಟಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ, ಸೈನಿಟೈಜರ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಾಗೃತದಿಂದ ಇರಬೇಕು  ಎಂದು ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಸಾರ್ವಜನಿಕರಿಗೆ ಸಲಹೆ ನೀಡಿದರು.

ಇಲ್ಲಿನ ಹೊಟೇಲ್ ರತ್ನ ಸಂಗಮ ಗಂಗಾ ಸಭಾ ಭವನದಲ್ಲಿ ನಡೆದ ಹೆಸ್ಕಾಂ ಮೇಲ್ವಿಚಾರಕ ಎನ್.ಎಂ.ಅಂತನ್ನವರ ನಿವೃತ್ತ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯುತ್ ಇಲಾಖೆಯಲ್ಲಿ ಪ್ರತಿಯೊಬ್ಬ ಲೈಮನ್ ಕಣ್ಣಿಗೆ ಕಾಣದ ಕರೆಂಟ್ ಜೊತೆ ಹೋರಾಟ ಮಾಡುತ್ತಾ ಸಮಾಜಕ್ಕೆ ಬೆಳಕನ್ನು ನಿಡುವ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರು ಹ್ಯಾಂಡ್ಗ್ಲೋಜ್, ಹೆಲ್ಮೆಟ್, ಶೂಜ್ ಧರಿಸಿಕೊಂಡು ಅಪಘಾತ ರಹಿತ ಸೇವೆಗೆ ಒತ್ತು ನೀಡಬೇಕು ಎಂದು ಲೈಮನ್ಗಳಿಗೆ ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ಉಪಸಭಾಪತಿಗಳು ಹಾಗೂ ಸಾರ್ವಜನಿರು ಹೆಸ್ಕಾಂ ಮೇಲ್ವಿಚಾರಕ ಎನ್.ಎಂ.ಅಂತನ್ನವರ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಸಿ.ಎ.ಮಠಪತಿ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಅಧ್ಯಕ್ಷ ವಿನಯ್ಕುಮಾರ ದೇಸಾಯಿ, ಗ್ರಾ.ಪಂ.ಅಧ್ಯಕ್ಷರಾದ ಸುರೇಶ ಬಂಟನೂರ, ನಾಗರಾಜ ದೇಸಾಯಿ, ಶಾಖಾಧಿಕಾರಿ ಟಿ.ಕೆ.ಹಳ್ಳಿ, ಎನ್.ಬಿ.ಕುಂಬಾರ, ಜಗದೀಶ ಶಿರವಂತಿ, ಕೆ.ಯು.ಸೇಗಣಿ, ಆರ್.ಎಸ್.ಬಾರಿಮರದ, ಎಮ್.ಎಸ್.ಹಿರೇಮಠ, ಬಿ.ಎ.ಗಾಣಿಗೇರ, ಎ.ಕೆ.ಬೂಟ್ಯಾಳ ಸಿಬ್ಬಂದಿ ವರ್ಗ ಹಾಗೂ ಮುಂತಾದವರಿದ್ದರು. ಮಂಜು ಕುಂಬಾರ ಸ್ವಾಗತಿಸಿದರು, ಶಿವಾನಂದ ಬಳಿಗಾರ ನಿರೂಪಿಸಿದರು, ಕರೆಪ್ಪ ಸೂರನ್ನವರ ವಂದಿಸಿದರು.