ಶೇಡಬಾಳ 06: ಅಂಗನವಾಡಿ ಎಂದರೆ ಕಟ್ಟಡದ ಸುತ್ತಲೂ ಕೊಳಚೆ ನೀರಿನ ದುವರ್ಾಸನೆ, ಹಂದಿ ನಾಯಿಗಳ ತಾನ, ಸೆ ೂಳ್ಳೆಗಳ ತವರೂರು ಎಂದು ಮೂಗು ಮುರಿಯುವವರೇ ಹೆಚ್ಚು, ಆದರೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಅಂಗನವಾಡಿ ಕೇಂದ್ರ ಇದಕ್ಕೆ ತದ್ವಿರುದ್ಧವಾಗಿದೆ. ಮನಸ್ಸು ಮಾಡಿದರೆ ಉತ್ತಮವಾಗಿಸಬಹುದು ಎನ್ನುವುದಕ್ಕೆ ಉಗಾರ ಬುದ್ರುಕ್ ಅಂಗನವಾಡಿ ಕೇಂದ್ರವೇ ಸಾಕ್ಷಿಯಾಗಿದೆ.
ಅಂಗನವಾಡಿ ಕಾರ್ಯಕತರ್ೆ ದೀಪಾ ಸೋನಾರ ಅವರು ಸರಕಾರದ ಬಾಲಸ್ನೇಹಿ ಯೋಜನೆಯಡಿಯಲ್ಲಿ 10 ಸಾವಿರ ರೂ ಅನುದಾನವನ್ನು ಬಳಸಿ ಕೇಂದ್ರಕ್ಕೆ ಸೂಜಿಗಲ್ಲಿನಂತೆ ಮಕ್ಕಳನ್ನು ಸೆಳೆಯುವಂತೆ ಮಾಡಿದ್ದಾರೆ. ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದ ಅರಿವು ಮೂಡಿಸುವುದು ಅಂಗನವಾಡಿ ಕೇಂದ್ರಗಳು. ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ತಾಯಂದಿರ ಪಾತ್ರದಷ್ಟೆ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕಿಯರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ ಎಂದು ತಿಳಿದು ಮಕ್ಕಳ ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಉಗಾರ ಬುದ್ರುಕ್ ಅಂಗನವಾಡಿ ಕೇಂದ್ರ ಸಂಖ್ಯೆ 5 ರಲ್ಲಿ ಕಾರ್ಯಕತರ್ೆಯಾಗಿ ಸೇವೆ ಸಲ್ಲಿಸುತ್ತಿರುವ ದೀಪಾ ಸೋನಾರ ಅವರು ಅಂಗನವಾಡಿ ಕೇಂದ್ರಕ್ಕೆ ವಿವಿಧ ಬಣ್ಣಗಳಿಂದ ಸಿಂಗರಿಸಿದ್ದಾರೆ. ಅದು ಈಗ ಮಾದರಿ ಕೇಂದ್ರವಾಗಿ ಹೊರಹೊಮ್ಮಿದೆ.
ಕಳೆದ ಹಲವಾರು ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಕೇಂದ್ರ ಆರಂಭದಲ್ಲಿ ಎಲ್ಲ ಅಂಗನವಾಡಿ ಕೇಂದ್ರದಂತೆ ದುರ್ಬಲಾವಸ್ಥೆಯಲ್ಲಿತ್ತು. ಆದರೆ ಮಾದರಿ ಅಂಗನವಾಡಿ ಕೇಂದ್ರ ಮಾಡಲೇಬೇಕು ಎಂದು ದೃಢ ಸಂಕಲ್ಪ ತೊಟ್ಟ ಅವರು ಸರಕಾರದ ಜನಸ್ನೇಹಿ 10 ಸಾವಿರ ರೂ ಹಣ ಖಚರ್ು ಮಾಡಿ ಕಟ್ಟಡದ ಸುತ್ತಲೂ ಬಣ್ಣಗಳ ಚಿತ್ತಾರ ಬಿಡಿಸಿದ್ದಾರೆ. ಇದರಲ್ಲೇ ಮಕ್ಕಳನ್ನು ಆಕಷರ್ಿಸುವಂತೆ ಕನ್ನಡ ಮೂಲಾಕ್ಷರಗಳು, ಆಂಗ್ಲ ಅಕ್ಷರ, ಪ್ರಾಣಿ, ಪಕ್ಷಿಗಳ ಚಿತ್ರ, ಕಾಮನ ಬಿಲ್ಲಿನ ವಯ್ಯಾರವನ್ನು ಮನಮೋಹಕವಾಗಿ ಚಿತ್ರಿಸಿದ ಪರಿಣಾಮ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಕ್ಕೆ ಸದ್ಯ ಬರುವಂತಾಗಿದೆ.
ಅಂಗನವಾಡಿ ಕಟ್ಟಡದ ಮೇಲೆ ವರ್ಣಮಾಲೆಗಳು, ಪ್ರಾಣಿಗಳು, ಕೇಂದ್ರದ ಒಳ ಭಾಗದಲ್ಲಿ ಆಟಿಕೆಗಳ ಚಿತ್ರಗಳನ್ನು ಬಿಡಿಸಿ ಆಕಷರ್ಿಸುವಂತೆ ಮಾಡಲಾಗಿದೆ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಸುಸಜ್ಜಿತ ಅಡುಗೆ ಕೊಣೆ, ಜೊತೆಗೆ ನೀಡಲಾಗುವ ಆಟ-ಪಾಠಗಳು ಮಕ್ಕಳಿಗೆ ಮಾನಸಿಕ ಸ್ಥೈರ್ಯತುಂಬಿ ಕೊಡುತ್ತದೆ.
ಕೊಠಡಿ ತುಂಬಾ ಜೋಡಿಸಲಾದ ಬೋಧನಾ ಉಪಕರಣಗಳು,ಪುಟಾಣಿಗಳ ಸೃಜನಾತ್ಮಕ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಹಿರಿದಾಗಿದೆ. ಇಂಥಹ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರಗಳಜೊತೆಗೆ ಸಂಘ ಸಂಸ್ಥೆಗಳು ಪ್ರಗತಿಪರ ಸಂಘಟನೆಗಳು, ಸಮಾಜ ಸೇವಕರ ದೊರೆತಲ್ಲಿ ಸರಕಾರದ ಎಲ್ಲ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
----------------
ಅಥಣಿಯಿಂದ ಬೇರ್ಪಟ್ಟು ಕಾಗವಾಡ ಸ್ವತಂತ್ರ ತಾಲೂಕು ಆದ ನಂತರ ಕಾಗವಾಡ ತಾಲೂಕಿಗೆ ಸರಕಾರದ ಬಾಲಸ್ನೇಹಿ ಯೋಜನೆಯಡಿಯಲ್ಲಿ 10 ಸಾವಿರ ರೂ. 28 ಅಂಗನವಾಡಿಗಳಿಗೆ ಅನುದಾನ ಮಂಜೂರಾಗಿವೆ. ಬರುವ ದಿನಮಾನಗಳಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳು ಸ್ವಚ್ಛ ಸುಂದರಮಯವಾಗಲಿವೆ.
ಡಾ.ಸುರೇಶ ಕದ್ದು ಸಿಡಿಪಿಓ ಕಾಗವಾಡ.
---------------
ಯಾವುದೇ ಒಂದು ಸರಕಾರಿ ಶಾಲೆ, ಅಥವಾ ಅಂಗನವಾಡಿ ಕೇಂದ್ರಗಳು ಸ್ವಚ್ಛವಾಗಿರಬೇಕಾದರೆ ಕೇವಲ ಅಂಗನವಾಡಿ ಸಿಬ್ಬಂದಿಗಳಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಈ ಅಂಗನವಾಡಿ ಕೇಂದ್ರ ನಮ್ಮದು, ಇಲ್ಲಿ ನಮ್ಮ ಮಕ್ಕಳು ಕಲಿಯುತ್ತವೆ. ಇಲ್ಲಿ ಗಲೀಜು ಮಾಡಬಾರದು ಎಂಬ ಮನೋಭಾವ ಬಂದರೆ ಎಲ್ಲವು ಸ್ವಚ್ಛ ಹಾಗೂ ಸುಂದರವಾಗಿರಲು ಸಾಧ್ಯ.
ದೀಪಾ ಸೋನಾರ
ಅಂಗನವಾಡಿ ಕಾರ್ಯಕತರ್ೆ ಉಗಾರ.