ಅಥಣಿ 24: ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಒದಗಿಸುವುದಾಗಿ ಶಂಕರ ಗಡದೆ ಹೇಳಿದರು.
ಅವರು ಅಥಣಿ ಗ್ರಾಮೀಣ ಗ್ರಾಮ ಪಂಚಾಯತನ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಶುಕ್ರವಾರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಅಥಣಿ ಗ್ರಾಮೀಣ ಪಂಚಾಯತಗೆ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿರುವುದು ನನಗೆ ಸಂತಸ ತಂದಿದೆ ಎಂದ ಅವರು ನನ್ನ ಆಯ್ಕೆಗೆ ಸಹಕಾರ ನೀಡಿದ ಯುವ ಧುರೀಣ ಚಿದಾನಂದ ಸವದಿ ಹಾಗೂ ಮುಖಂಡರನ್ನು ಅಭಿನಂದಿಸಿದರು. ಅಧಿಕಾರ ಸ್ವೀಕಾರಕ್ಕಿಂತ ಮೊದಲು ಶಂಕರ ಗಡದೆ ಇವರನ್ನು ಗ್ರಾಮ ಪಂಚಾಯತ ಸದಸ್ಯರು, ಮುಖಂಡರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ನಾಯಿಕ, ಧರಮು ಹಲ್ಯಾಳೆ, ರಾವಸಾಹೇಬ ನಾಯಿಕ, ಉಪಾಧ್ಯಕ್ಷೆ ರೂಪಾ ಸೋನಕರ, ಪರಶುರಾಮ ಪೋಳ, ಜಯಶ್ರೀ ಆಲಬಾಳ, ಸುನೀಲ ಅಪರಾಜ, ಜಗದೀಶ ಕಿವಡಿ, ಪುಟ್ಟು ಶಿಂದೆ, ಅನೀಲ ನರೋಡೆ, ಸುವರ್ಣಾ ಸಾಳುಂಕೆ, ಅರುಣ ಭಾಸಿಂಗಿ, ಅಪ್ಪಾಸಾಬ ಕೋರಿಶೆಟ್ಟಿ, ರಾಜೇಶ್ವರಿ ವಣಜೋಳಿ, ಪರಶುರಾಮ ಸೋನಕರ, ಹಣಮಂತ ಭಜಂತ್ರಿ, ಸವೀತಾ ಕಲಾಟೆ, ಪ್ರಭಾಕರ ಚಮಕೇರಿ, ಜಯಶ್ರೀ ಮಾನೆ, ಅಮೀನಾ ಜಮಾದಾರ, ಮೈಬುಬ ಮಕಾನದಾರ, ಸಂಜಯ ಹಣಮಾಪುರೆ, ಸಾವಿತ್ರಿ ಗಬಚಿ, ಪರಮಾನಂದ ನಾಯಿಕ, ಗುಣವಂತಿ ಶಿರಗುಪ್ಪಿ, ಭರತೇಶ ನಾಯಿಕ, ಸುಜಾತಾ ನಾಯಿಕ, ಸಂಗಪ್ಪ ಧರಿಗೌಡ, ಸಂಗೀತಾ ನಂದಿವಾಲೆ, ಜಯಶ್ರೀ ಮುಗುಳಖೋಡ, ಮೀನಾಕ್ಷಿ ಇಂಗಳಗಾಂವಿ, ಬಿಯಾಮಾ ನದಾಫ, ಅಶೋಕ ಕೌಜಲಗಿ, ಶೋಭಾ ಬಸರಿಖೋಡಿ, ಸಂಗೀತಾ ಆಚಾರಟ್ಟಿ, ಸಂಗೀತಾ ಕರಬಸಪ್ಪಗೋಳ, ಗೀತಾ ಬೆಳ್ಳಂಕಿ, ಗೋಪಾಲ ಅಸ್ಕಿ, ಮಹಾಂತೇಶ ಸಿಂದೂರ, ಜಯಶ್ರೀ ಅಲಬಾಳ, ಸುಧಾ ದೀವಾನಮಳ, ರಮ್ಯಾ ಮಾನೆ, ಆಕಾಶ ಬುಟಾಳೆ, ಮಹಾಂತೇಶ ಕೋರಿ, ರೇಣುಕಾ ಲಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.