ಧಾರವಾಡ 20: ಬೆಂಗಳೂರಿನ
ಮಕ್ಕಳ ಸಹಾಯವಾಣಿ 1098ಗೆ, ಅಕ್ಟೋಬರ್
19 ರ ಸಂಜೆ ಬಂದ ಮಾಹಿತಿ
ಆಧರಿಸಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಇಂದು ಅ.20 ರಂದು
ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶಿವಳ್ಳಿ
ಗ್ರಾಮದ ಪ್ಲಾಟ್ ಪ್ರದೇಶದ ಬಾಲಕಿಯೊಬ್ಬಳನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನ ಸಂಬಂಧಿಕ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ
ಅಧಿಕಾರಿಗಳು, ಸ್ಥಳೀಯ ಅಂಗನವಾಡಿ ಕಾರ್ಯಕತರ್ೆಯರೊಂದಿಗೆ ಇಂದು ಬಾಲಕಿಯ ಮನೆಗೆ
ಭೇಟಿ ನೀಡಿ ವಿಚಾರಣೆ ನಡೆಸಿದರು.
ಬಾಲಕಿಯ ಪಾಲಕರು ತಮ್ಮ ಮಗಳಿಗೆ 18 ವರ್ಷ
ತುಂಬುವವರೆಗೂ ಮದುವೆ ಮಾಡುವದಿಲ್ಲ, ಕಾನೂನು ಉಲ್ಲಂಘಿಸುವದಿಲ್ಲ ಎಂದು ಒಪ್ಪಿ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ
ಯಾವುದೇ ಭಾಗದಲ್ಲಿ ಬಾಲ್ಯವಿವಾಹ, ಬಾಲಕಾಮರ್ಿಕ ಪದ್ಧತಿಗಳು ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವಂತಹ ಯಾವುದೇ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು
ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ
1098 ಗೆ ಮಾಹಿತಿ ನೀಡಬಹುದು. ಮಾಹಿತಿ ಒದಗಿಸಿದವರ ಹೆಸರನ್ನು ಗುಪ್ತವಾಗಿ ಇಡಲಾಗುವದು ಎಂದು ಜಿ.ಪಂ
ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಸತೀಶ.ಬಿ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.