ಬಸವೇಶ್ವರ ಪತ್ತಿನ ಸಂಘ ಚನ್ನಮ್ಮಾ ವೃತ್ತಕ್ಕೆ ಸ್ಥಳಾಂತರ

ದಾಂಡೇಲಿ 27: ನಗರದಲ್ಲಿ 2001 ರಲ್ಲಿ ಸ್ಥಾಪನೆಯಾದ ಬಸವೇಶ್ವರ ಪತ್ತಿನ ಸಹಕಾರಿ ಸಂಘವು ಅನೇಕ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಶಕ್ತ್ಯಾನುಸಾರ ಜಾಮೀನು ಸಾಲ ನೀಡುವ ಮೂಲಕ ಅನೂಕೂಲಕರವಾಗಿತ್ತು. 

ಆದರೆ ಮಾಜಿ ಮ್ಯಾನೇಜರ್ ಸಂಜಯ ಚೌಗಲಾ ರವರ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಕಾರಣದಿಂದ ಸಂಘವು ಕುಂಟುತ್ತಾ ಸಾಗಿತ್ತು. ಈಗ ಅವರ ರಾಜಿನಾಮೆಯನ್ನು ಆಧರಿಸಿ ಅವರನ್ನು ಕೆಲಸದಿಂದ ಅಧೀಕೃತವಾಗಿ ಬಿಡುಗಡೆಗೊಳಿಸಲಾಗಿದೆ. ಸಂಘದ ಮುಂದಿನ ವ್ಯವಹಾರಗಳನ್ನು ಎಲ್ಲ ಗ್ರಾಹಕರು ಜನೇವರಿ 1 ರಿಂದ ನಗರದ ಕಿತ್ತೂರು ಚನ್ನಮ್ಮಾ ವೃತ್ತದಲ್ಲಿ ಆರಂಭವಾಗುವ ನೂತನ ಕಛೇರಿಯಲ್ಲಿ ನಡೆಸಬೇಕಾಗಿ ಸಂಘದ ಪ್ರಭಾರಿ ಅಧ್ಯಕ್ಷ ಅಶೋಕ ರುದ್ರಗೌಡಾ ಪಾಟೀಲ ತಿಳಿಸಿದರು. 

ಅವರು ಕಿತ್ತೂರು ಚನ್ನಮ್ಮಾ ವೃತ್ತದಲ್ಲಿನ ಸಂಘದ ಹೊಸ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ ಈಗಾಗಲೇ ವಿಜಯಲಕ್ಷ್ಮೀ ಹೊಸಮಠರನ್ನು ಕಾರ್ಯನಿವರ್ಾಹಕರು ವ ಕಾರ್ಯದಶರ್ಿಯ ಹುದ್ದೆಗೆ ನೇಮಕಾತಿ ಮಾಡಿಕೊಂಡು ಮಾಜಿಯವರಿಂದ ಸಂಪೂರ್ಣ ಚಾಜರ್್ ಪಡೆಯಲಾಗಿದೆ. 

ಯಾವುದೇ ಗ್ರಾಹಕರು ಹಿಂದಿನ ಕಾರ್ಯನಿವರ್ಾಹಕ ಸಂಜಯ ಚೌಗಲಾ ಜೊತೆಗೆ ವ್ಯವಹರಿಸಿ ಮೋಸ ಹೋದರೆ ಸಂಘದ ಆಡಳಿತ ಮಂಡಳಿಯಾಗಲಿ, ಸಿಬ್ಬಂದಿಯಾಗಲಿ ಜವಾಬ್ದಾರರಾಗಿರುವುದಿಲ್ಲಾ. ಸಂಘದ ಶ್ರೇಯೋಭಿವೃದ್ಧಿಗೆ ಸರ್ವರು ಸಹಕರಿಸಬೇಕಾಗಿ ಕೋರಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿದರ್ೇಶಕರಾದ ಮಹಾದೇವ ಸನ್ನತಮ್ಮಣ್ಣವರ, ಶರಣಪ್ಪಾ ಮುರಡಿ, ಶರಣಯ್ಯಾ ಎ ಕೋನಾಪುರ, ಬಸಯ್ಯಾ ಹಿರೇಮಠ, ಚಂದ್ರಯ್ಯಾ ಅಂಧಾಕಾರಿಮಠ, ಸಂಗಮೇಶ ಹಿರೇಮಠ, ಮಂಜುನಾಥ ಸುಂಕದ ಮತ್ತು  ಪರವೀನ ಯರಗಟ್ಟಿ ಮಾಜಿ ನಿದರ್ೇಶಕರಾದ ಚಂದ್ರಶೇಖರ್ ವಸ್ತ್ರದ, ನಿಂಗನಗೌಡಾ ಪಾಟೀಲ ಮತ್ತು ಅಪ್ಪಾಜಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.