ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ: ಪಾಟೀಲ

    ತಾಳಿಕೋಟೆ 12:  ಯಾವುದೇ ಸಹಕಾರಿ ಬ್ಯಾಂಕುಗಳು ಹಂತ ಹಂತವಾಗಿ ಬೆಳವಣಿಗೆ ಹೊಂದಬೇಕಾದರೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಹೊಂದಿದ್ದರೆ ಆ ಬ್ಯಾಂಕುಗಳು ಆಥರ್ಿವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್.ಪಾಟೀಲ(ಯಾಳಗಿ) ಅವರು ನುಡಿದರು.

ಪಟ್ಟಣದ ಎಪಿಎಂಸಿ ಮಾಕರ್ೇಟ್ ಯಾರ್ಡನಲ್ಲಿರುವ ಶ್ರೀಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ,ದ 11 ನೇ ವಾಷರ್ಿಕ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬ್ಯಾಂಕುಗಳ ಉನ್ನತಿಕರಣಕ್ಕೆ ಸಿಬ್ಬಂದಿಗಳ ಹಾಗೂ ಆಡಳಿತ ಮಂಡಳಿಯ ಪಾತ್ರ ಬಹಳೇ ಮಹತ್ವದ್ದಾಗಿದೆ ಯಾವುದೇ ವ್ಯಕ್ತಿಗೆ ಸಾಲ ನೀಡುವ ಮೊದಲು ಸಾಲಪಡೆದ ವ್ಯಕ್ತಿಯು ಯಾವ ಉದ್ದೇಶಕ್ಕಾಗಿ ಎಂಬುದನ್ನು ಅರೀತುಕೊಳ್ಳಬೇಕು ಅದರ ಜೊತೆಗೆ ಆ ವ್ಯಕ್ತಿಗೆ ಹಣದ ಸದ್ಭಳಿಕೆ ಹಣವನ್ನು ದ್ವಿಗುಣ ಗೊಳಿಸಿಕೊಂಡು ಮರುಪಾವತಿ ಮಾಡಿ ಆಥರ್ಿಕ ಸ್ಥಿತಿಯನ್ನು ಸುದಾರಿಸಿಕೊಳ್ಳಲು ತಿಳಿ ಹೇಳುವಂತಹ ಕಾರ್ಯವಾಗಬೇಕು ಇದರಿಂದ ಸಾಲಪಡೆದ ವ್ಯಕ್ತಿಯ ಹಣದ ಸದ್ಭಳಿಕೆಯ ಜ್ಞಾನ ಹೆಚ್ಚಿಸಿದಂತಾಗುತ್ತದೆ ಅಲ್ಲದೇ ಬ್ಯಾಂಕಿನ ಮೇಲೆ ವಿಸ್ವಾಸವೆಂಬುದು ಹೆಚ್ಚುತ್ತದೆ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ,ವು ವರ್ಷ ದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಾ ಸಾಗಿದೆ ಇದಕ್ಕೆ ಕಾರಣ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಪ್ರೀತಿ ಪ್ರೇಮ ಬೆಳಸಿಕೊಂಡಿದ್ದೆ ಕಾರಣವಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಪಾಟೀಲ ಅವರು ಮಾತನಾಡಿ ಸಾಲಪಡೆದ ವ್ಯಕ್ತಿಯು ಉತ್ತಮ ಉದ್ದೇಶಕ್ಕಾಗಿ ಪಡೆದುಕೊಳ್ಳಬೇಕು ತಾಳಿಕೋಟೆ ಪಟ್ಟಣದಲ್ಲಿಯ ಏಷ್ಟೋ ಶಿಕ್ಷಣ ಸಂಸ್ಥೆಗಳು ಸಾಲ ಪಡೆದು ಸದ್ಭಳಿಕೆ ಮಾಡಿಕೊಂಡಿದ್ದರಿಂದಲೇ ಹೆಮ್ಮರವಾಗಿ ಬೆಳೆದು ನಿಂತಿವೆ ಅಲ್ಲದೇ ತಾಳಿಕೋಟೆ ಪಟ್ಟಣವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದುನಿಂತಿದೆ ಸಾಲಪಡೆದ ವ್ಯಕ್ತಿಯು ಉತ್ತಮ ಉದ್ದೇಶಕ್ಕಾಗಿ ಸಾಲವನ್ನು ಪಡೆದುಕೊಳ್ಳಬೇಕು ಅಲ್ಲದೇ ಪ್ರಗತಿಯ ಹಾದಿಯತ್ತ ಸಾಗಬೇಕು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕಿನ ವಿಶ್ವಾಸವನ್ನು ಗಳಿಸಬೇಕು ಇದರಿಂದ ಬ್ಯಾಂಕು ಏಳಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ,ದ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಬೆಳೆಸಿಕೊಂಡ ಉತ್ತಮ ಬಾಂದವ್ಯ ಕುರಿತು ಕೊಂಡಾಡಿದರು.

ಇನ್ನೋರ್ವ ಅತಿಥಿ ಗಣ್ಯರಾದ ಎಸ್.ಪಿ.ಸರಶೆಟ್ಟಿ ಅವರು ಮಾತನಾಡಿ 25 ಲಕ್ಷ ಬಂಡವಾಳದೊಂದಿಗೆ ಪ್ರಾರಂಭಗೊಂಡ ಶ್ರೀಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ,ವು 18 ಕೋಟಿ ಬಂಡವಾಳ ಹೊಂದಿದೆ ಅದರ ಜೊತೆಗೆ ಈ ವರ್ಷವೂ 22 ಲಕ್ಷ ರೂ. ಲಾಭದಾಯಕದೊಂದಿಗೆ ಮುನ್ನಡೆದಿದೆ ಇದನ್ನು ಗಮನಿಸಿದರೆ ಬ್ಯಾಂಕಿನ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಎದ್ದು ಕಾಣುತ್ತಿದ್ದು ಮುಂದೆ ಈ ಬ್ಯಾಂಕು ಎತ್ತರಮಟ್ಟದಲ್ಲಿ ಬೆಳೆದು ಸಹಕಾರಿ ಕ್ಷೇತ್ರದಲ್ಲಿಯೇ ಮುನ್ನುಡಿ ಬರೆಯಲಿ ಎಂದು ಆಶಿಸಿದರು.

ಈ ಸಭೆಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ವಹಿಸಿ ಬ್ಯಾಂಕು ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ನಿ,ದ ಅಧ್ಯಕ್ಷ ಜಿ.ಎಸ್.ಕಶೆಟ್ಟಿ ಅವರು ವಹಿಸಿದರು.ವೇದಿಕೆಯ ಮೇಲೆ ಸಹಕಾರಿಯ ಉಪಾಧ್ಯಕ್ಷ ಎಂ.ಎಸ್.ಸರಶೆಟ್ಟಿ, ಗಣ್ಯರಾದ ವಿಠ್ಠಲಸಿಂಗ್ ಹಜೇರಿ, ವ್ಹಿ.ಸಿ.ಹಿರೇಮಠ, ಬಿ.ಎಸ್.ಕಿಣಗಿ, ಜಿ.ಜಿ.ಯರನಾಳ, ಎ.ಆಯ್.ಜಾಲವಾದಿ, ಕೆ.ಕೆ.ಹೂಗಾರ, ಆಯ್.ಸಿ.ಸಜ್ಜನ, ಸಿ.ಬಿ.ರೂಡಗಿ, ಎಂ.ಜಿ.ಯರನಾಳ, ಎಸ್.ಎಸ್.ಸುರಪೂರ, ಮೊದಲಾದವರು ಉಪಸ್ಥಿತರಿದ್ದರು. ಶೃಷ್ಠಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಕೆ.ಎಸ್.ಮುರಾಳ ಸ್ವಾಗತಿಸಿದರು. ವ್ಯವಸ್ಥಾಪಕ ಸಂತೋಷ ಯಡ್ರಾಮಿ ನಿರೂಪಿಸಿ ವಂದಿಸಿದರು.

ಹಿಂದೂ ಮಹಾಗಣಪತಿ ಮಹಾಮಂಡಳದ ವತಿಯಿಂದ ಗಣೇಶೋತ್ಸವ ಅಂಗವಾಗಿ ಪ್ರಚಾರಾರ್ಥವಾಗಿ ತಯಾರಿಸಲಾದ ಮಹಾರಥಕ್ಕೆ ವೇ.ಸಂತೋಷಬಟ್ ಜೋಶಿ ಅವರು ಚಾಲನೆ ನೀಡಿದರು.

_______________________