ಬಾಂಗ್ಲಾದೇಶ: ಘರ್ಷಣೆಯಲ್ಲಿ ವಕೀಲರೊಬ್ಬರ ಹತ್ಯೆ

ತ್ಯೆಗೀಡಾಗಿದ ವಕೀಲ

ಬಾಂಗ್ಲಾದೇಶ 27: ಇಸ್ಕಾನ್  ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನ ಖಂಡಿಸಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. 

ಇದೀಗ ಭದ್ರತಾ ಸಿಬ್ಬಂದಿ ಮತ್ತು ಹಿಂದೂ ಸಮುದಾಯದ ನಾಯಕನ ಅನುಯಾಯಿಗಳ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಹತ್ಯೆಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.ಮೃತ ವಕೀಲನನ್ನು 35 ವರ್ಷದ ಸೈಫುಲ್ ಇಸ್ಲಾಂ ಅಲಿಫ್ಎಂದು ಗುರುತಿಸಲಾಗಿದೆ. ಈತ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಚಟ್ಟೋಗ್ರಾಮ್ ಜಿಲ್ಲಾ ವಕೀಲರ ಸಂಘದ ಸದಸ್ಯ ಎಂದು ಢಾಕಾದ ಪತ್ರಿಕೆಯೊಂದು ವರದಿ ಮಾಡಿದೆ. ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಉಪ ಆಯುಕ್ತ ಲಿಯಾಕತ್ ಅಲಿ ತಿಳಿಸಿದ್ದಾರೆ.

ಕುರಿತು ಚಿತ್ತಗಾಂಗ್ ವಕೀಲರ ಸಂಘದ ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಮಾತನಾಡಿ, ಪ್ರತಿಭಟನಾ ಸಂದರ್ಭದಲ್ಲಿ ಪೊಲೀಸರ ತಂಡವೊಂದು ವಕೀಲನನ್ನು ಎಳೆದೊಯ್ದು ಕೊಂದಿದ್ದಾರೆ ಎಂದು ಆರೋಪಿದ್ದಾರೆ.