ಅಪಾಯದ ಮಧ್ಯೆ ಸಹಜ ಸ್ಥಿತಿಯತ್ತ ಬಾಗಲಕೋಟೆ

ಬಾಗಲಕೋಟೆ 09: ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಯುತ್ತಿರುವ ಮಧ್ಯೆಯೇ ಬಾಗಲಕೋಟೆಯಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೋಪುರಕ್ಕೆ ಎಸೆದು ಮತ್ತೆ ಸಹಜ ಸ್ಥಿತಿಯತ್ತ ವ್ಯಾಪಾರ ವಹಿವಾಟು, ವಾಹನಗಳ ಓಡಾಟ ಶನಿವಾರ ಆರಂಭಿಸಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡಗಳನ್ನು ತೆರವುಗೊಳಿಸುವ ಕಾರ್ಯ ಶುಕ್ರವಾರ ನಡೆಸಿತ್ತು. ಬಹುತೇಕ ಅಂಗಡಿ ಮುಗ್ಗಟ್ಟುಗಳನ್ನು ಆರಂಭಿಸಲು ಅನುವು ಮಾಡಿದ ಹಿನ್ನಲೆಯಲ್ಲಿ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಎಂದಿಗಿಂತ ಹೆಚ್ಚು ಚುರುಕಾಗಿ ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿರುವುದು ಕಂಡು ಬಂದಿತು. ಇದುವರೆಗೂ ಮನೆ ಹಿಡಿದು ಕುಳಿತಿದ್ದ ವ್ಯಾಪಾರಸ್ಥರು, ಕಾಮರ್ಿಕ ವರ್ಗ ಮನೆ ಬಿಟ್ಟು ಹೊರ ಬಂದಿದೆ.

ಕೊರೋನಾ ಅಪಾಯದ ಮಧ್ಯೆಯೂ ವ್ಯಾಪಾರ,ವಹಿವಾಟು, ವಾಹನಗಳ ಓಡಾಟ ಆರಂಭಗೊಂಡಿರುವುದರಿಂದ ಜನತೆ ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆ ಅರಿತು ತಮ್ಮನ್ನು ತಾವು ಸ್ವಯಂ ಶಿಸ್ತಿಗೆ ಅಳವಡಿಸಿಕೊಳ್ಳಬೇಕು. ಮನಬಂದಂತೆ ನಡೆದುಕೊಳ್ಳದಂತೆ ಸ್ಥಳೀಯ ಶಾಸಕ  ವೀರಣ್ಣ ಚರಂತಿಮಠ ಎಚ್ಚರಿಕೆ ಕೊಟ್ಟಿದ್ದಾರೆ. ವ್ಯಾಪಾರ, ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿದ್ದ ಜನತೆ ಮುಂದೇನು ಎನ್ನುವ ಚಿಂತೆಯಲ್ಲಿರುವಾಗಲೇ ಎಲ್ಲವೂ ಎಂದಿನಂತೆ ಆರಂಭಗೊಂಡಿರುವುದು ಬಹುತೇಕ ಎಲ್ಲರಲ್ಲೂ ಸಂತಸದ ಛಾಯೆ ಕಂಡು ಬರುತ್ತಿದೆಯಾದರೂ ಮಹಾಮಾರಿ  ಯಾವುದೇ ಸಮಯದಲ್ಲಿಯೂ ತನ್ನ ಸ್ವರೂಪವನ್ನು ತೋರ್ಪಡಿಸುವ ಸಾಧ್ಯತೆಯ ಅಂಜಿಕೆ ಈಗಲೂ ಜನತೆಯನ್ನು ಕಾಡುತ್ತಲೆ ಇದ್ದರೂ ಭಂಡತನದೊಂದಿಗೆ ವ್ಯಾಪಾರ, ವಹಿವಾಟು ಆರಂಭಿಸಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಪಾಡುವ ಭರವಸೆಯೊಂದಿಗೆ ವ್ಯಾಪಾರ, ವಹಿವಾಟು ಆರಂಭಗೊಂಡಿದೆಯಾದರೂ ಇಂದಿನ ಮಾರುಕಟ್ಟೆ ಸ್ಥಿತಿ ಗಮನಿಸಿದ ಯಾರಿಗೆ ಆಗಲಿ ಸಾಮಾಜಿಕ ಅಂತರದ ಅರಿವೇ ಇಲ್ಲವೆನೋ ಎನ್ನುವಂತೆ ಜನತೆ  ನಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ವ್ಯಾಪಾರ, ವಹಿವಾಟುಗಳಿಗಾಗಿ ಆಗಮಿಸಿದ್ದ ಜನಸಾಮಾನ್ಯರು ಖರೀದಿಗಾಗಿ ಮುಗಿ ಬಿದ್ದಿದ್ದರು. ನಗರಸಭೆ ಕೂಡ ಮಾಸ್ಕ್ ಧರಿಸದೇ ಓಡಾಡುವವರಿಗೆ, ಸಾರ್ವಜನಿಕ ಸ್ಥಳದಲ್ಲಿ ಉಗಿಯುವವರಿಗೆ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದ್ದರೂ  ಬಹುತೇಕ ಜನತೆ ಅದಕ್ಕೆ ಕ್ಯಾರೇ ಎನ್ನುತ್ತಿಲ್ಲವಲ್ಲ ಎನ್ನುವುದಕ್ಕೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸ್ಥಿತಿ ಮುಖ ಸಾಕ್ಷಿಯಾಗಿತ್ತು. 

ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಜನತೆ ವಿಫಲವಾದಲ್ಲಿ ಭವಿಷ್ಯದಲ್ಲಿ ಜನತೆ ಮತ್ತೆ ಕಠಿಣ ಕ್ರಮಗಳಿಗೆ ಒಳಗಾಗಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಷ್ಟರ ಮಧ್ಯೆ ಜಿಲ್ಲೆಯಲ್ಲಿ  ಕೊರೋನಾ ಭೀತಿ ಇನ್ನೂ ತಪ್ಪಿಲ್ಲ ಎನ್ನುವುದು ಗಮನಾರ್ಹ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೊರೋನಾ ಗೋಜು ಇಲ್ಲದ ಚಾಲುಕ್ಯರ ನಾಡು ಬಾದಾಮಿಯಲ್ಲಿ ಗಭರ್ಿಣಿ ಮಹಿಳೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಷ್ಟೇ ಅಲ್ಲ ಅಕ್ಕಪಕ್ಕದ  ಕೊಪ್ಪಳ ಮತ್ತು ಧಾರವಾಡ ಜಿಲ್ಲೆಯನ್ನು ನಡುಗಿಸಿ ಬಿಟ್ಟಿದೆ.

ಬಾದಾಮಿ ತಾಲೂಕಿನ ಢಾಣಕಶಿರೂರಿನಲ್ಲಿ ಗಭರ್ಿಣಿ ಮಹಿಳೆಯಿಂದಾಗಿ ಒಟ್ಟು ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗೆ ಯುವತಿಯೊಬ್ಬಳಿಂದಾಗಿ ಬಾದಾಮಿ ಪಟ್ಟಣದಲ್ಲಿ ಕೊರೋನಾ ತನ್ನ ವ್ಯಾಪ್ತಿಗೆ ಮಿತಿಯಿಲ್ಲ ಎನ್ನುವುದನ್ನು ತೋರ್ಪಡಿಸಿದೆ. ಇದುವರೆಗೂ ಯುವತಿಯ ಸೋಂಕಿನ ಮೂಲ  ಪತ್ತೆ ಆಗಿಲ್ಲ. ಜತೆಗೆ ಢಾಣಕಶಿರೂರನಲ್ಲೇ ನಡೆದ ಮದುವೆಯೊಂದಲ್ಲಿ ಕೊಪ್ಪಳ ಜಿಲ್ಲೆಯ 12 ಜನ ಭಾಗಹಿಸುವ ಮೂಲಕ ಅಲ್ಲಿಗೂ ಅದು ವ್ಯಾಪಿಸುವಂತಾಗಿದೆ. ಈಗಾಗಲೇ ಜಿಲ್ಲೆಯ ಬಾಗಲಕೋಟೆ ಪಟ್ಟಣ, ಮುಧೋಳ ಮತ್ತು ಜಮಖಂಡಿಯಲ್ಲಿ ಜನರಲ್ಲಿ ಸೋಂಕು ದೃಢಪಟ್ಟಿದ್ದು,  ಇನ್ನಷ್ಟು ಜನರ ವರದಿ ಬರಬೇಕಿದೆ. ಏತನ್ಮಧ್ಯೆ ಬಾಗಲಕೋಟೆಯಲ್ಲಿ ವ್ಯಾಪಾರು, ವಹಿವಾಟು ಎಂದಿನಂತೆ ಆರಂಭಗೊಂಡಿವೆ. ಅಪಾಯವನ್ನು ಎದುರು ಹಾಕಿಕೊಂಡು ಹೆಜ್ಜೆ ಇಟ್ಟಿರುವ ಜನತೆ ಎಷ್ಟರ ಮಟ್ಟಿಗೆ ಸ್ವಯಂ ಶಿಸ್ತಿಗೆ ಒಳಪಡಲಿದ್ದಾರೆ ಎನ್ನುವುದರ ಮೇಲೆ ಪರಿಣಾಮಗಳು  ನಿಧರ್ಾರವಾಗಲಿವೆ.