ಹುಕ್ಕೇರಿ 11: ತಾಲೂಕಿನ ಬಸ್ತವಾಡ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ತೆರವು ಗೊಂಡಿತ್ತು ಆಸ್ಥಾನಕ್ಕೆ ಇಂದು ಅವಿರೋಧವಾಗಿ ದಾವಲ್ ಸಾಬ್ ಮೈಬೂಬ್ ಸಾಬ್ ಬಾಡ್ಕರ್ ಇವರು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ನೋಡಲ್ ಚುನಾವಣೆ ಅಧಿಕಾರಿ ಎಚ್ ಹೊಳೆಪ್ಪುಗೋಳ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕಂಠಿ ಅಧಿಕಾರಿಗಳ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಎಂದು ಚುನಾವಣಾಧಿಕಾರಿ ಎಚ್ ಹೊಳೆಪ್ಪ ಗೋಳ ಹೇಳಿದರು.
ನೂತನ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಾವಲ್ ಸಾಬ್ ಬಾಡಕರ್ ಮಾಧ್ಯಮದವರೊಂದಿಗೆ ಮಾತನಾಡಿ ಬಸ್ತವಾಡ ಗ್ರಾಮದ ಅಭಿವೃದ್ಧಿಗೋಸ್ಕರ ನಾನು ಶ್ರಮಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪರರ್ವೀನ್ ಈ ಪಕಾಲಿ, ನಾಗರಾಜ್ ವಂಟಮುರಿ ಶಂಶೇರ್ ಬೇಗ ಇನಾಂದಾರ್. ಭೀಮ ಗೌಡ ಪಾಟೀಲ್. ಹುಸೇನ್ ಬೇಕು ಇನಾಮ್ದಾರ್. ಅಬೇ ದಾಬಿ ಮಲ್ಲಾಪುರೆ. ಅಬ್ದುಲ್ ಅಜೀಜ ಮುಲ್ಲಾ. ಎಲ್ಲವ್ವಾ ಸನದಿ. ಸುಧಾರಾಣಿ ವಾಜಂತ್ರಿ. ಹಾಗೂ ಬಸ್ತವಾಡ ಗ್ರಾಮದ ಗುರುಹಿರಿಯರು ಮುಖಂಡರು ಮಹಿಳೆಯರು ಯುವಕರು ಹಾಗೂ ಗೆಳೆಯರ ಬಳಗದಿಂದ ನೂತನ ಅಧ್ಯಕ್ಷರಿಗೆ ಶಾಲು ಮಾಲಿಯೊಂದಿಗೆ ಸಿಹಿ ಹಂಚಿದರು ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು..