ಬ್ಯಾಡಗಿ: ಹೋಬಳಿ ಮಟ್ಟದ ಜನಸ್ಪಂದನಾ ಸಭೆ

ಲೋಕದರ್ಶನವರದಿ

ಬ್ಯಾಡಗಿ: ತಾಲೂಕಿನ ಶಿಡೇನೂರ ಗ್ರಾಮದ ಸವರ್ೆ ನಂಬರ್ 244 ಹಾಗೂ 245 ರಲ್ಲಿ 29 ರೈತರಿಗೆ ಪಟ್ಟಾ ವಿತರಿಸಿದ್ದು, ಇದಕ್ಕೆ ಕೆಜೆಪಿ ಆಗದೇ ಇರುವ ಕಾರಣ ಒಂದೇ ಆರ್ಟಿಸಿ ಯಲ್ಲಿ ಎಲ್ಲರ ಹೆಸರು ಸಾಮೂಹಿಕವಾಗಿ ಬರುತ್ತಿರುವ ಕಾರಣ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೇ ಪರದಾಡುವಂತಾಗಿದೆ ಎಂದು ರೈತರು ತಮ್ಮ ಗೋಳನ್ನು ತೋಡಿಕೊಂಡ ಪ್ರಸಂಗ ಜನಸ್ಪಂದನಾ ಸಭೆಯಲ್ಲಿ ಶನಿವಾರ ಜರುಗಿತು.

  ತಾಲೂಕಿನ ಶಿಡೇನೂರ ಗ್ರಾಮದ ಶಿವಾಜಿನಗರದಲ್ಲಿ ಜರುಗಿದ ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆಯಲ್ಲಿ ರೈತರು ಈ ಕುರಿತು ವಿಷಯ ಪ್ರಸ್ತಾಪಿಸಿ ಬಹು ವರ್ಷಗಳ ಹಿಂದೆಯೇ  ಶಿಡೇನೂರ ಗ್ರಾಮದ ಸವರ್ೆ ನಂಬರ್ 244 ಹಾಗೂ 245 ರಲ್ಲಿ 29 ರೈತರಿಗೆ ತಲಾ 1.15 ಎಕರೆದಂತೆ ಪಟ್ಟಾ ವಿತರಿಸಿ ಅದರ ಪ್ರಕಾರ ಆರ್ಟಿಸಿ ದಾಖಲಾಗಿರುತ್ತದೆ. ಆದರೆ ಈ ಜಮೀನಿಗೆ ಸಂಬಂಧಪಟ್ಟಂತೆ ಕೆಜೆಪಿ ಆಗದ ಕಾರಣ ಒಂದೇ ಆರ್ಟಿಸಿ ಯಲ್ಲಿ ಎಲ್ಲರ ಹೆಸರುಗಳು ಬರುತ್ತಿರುವುದರಿಂದ ಬ್ಯಾಂಕಿನ ಸೌಲಭ್ಯ ಸೇರಿದಂತೆ ಇತರೆ ಕೆಲಸಗಳಿಗೂ ಬಹಳಷ್ಟು ತೊಂದರೆಯಾಗುತ್ತಿದೆ. ಎಲ್ಲ ರೈತರಿಗೂ ಪ್ರತ್ಯೇಕ ಆರ್ಟಿಸಿ ಬರುವ ಹಾಗೆ ಕೆಜೆಪಿ ಮಾಡಿಸಿಕೊಡಬೇಕೆಂದು ರೈತರು ತಹಶೀಲ್ದಾರರನ್ನು ಒತ್ತಾಯಿಸಿದರು. 

  ಈ ಬಗ್ಗೆ ಉತ್ತರಿಸಿದ ತಹಶೀಲ್ದಾರ ಕೆ ಗುರುಬಸವರಾಜ, ಸದರಿ ಸವರ್ೇ ನಂಬರಿನ ಜಮೀನಿನಲ್ಲಿ ಪಟ್ಟಾ ಹೊಂದಿರುವ 29 ರೈತರು ಪ್ರತ್ಯೇಕವಾಗಿ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಿದಲ್ಲಿ ಎಲ್ಲ ರೈತರಿಗೆ ಪ್ರತ್ಯೇಕ ಆರ್ಟಿಸಿ ಬರುವ ಹಾಗೆ ಕೆಜೆಪಿ ಮಾಡಿ ಕೊಡುವುದಾಗಿ ತಿಳಿಸಿದರು.

 ಗ್ರಾಮಸ್ಥರಾದ ಮಲ್ಲಿಕಾಜರ್ುನ ದುರ್ಗದ ಮಾತನಾಡಿ, ಶಿಡೇನೂರ ಗ್ರಾಮದ ಸವರ್ೆ ನಂಬರ್ 59/ಎ ನಲ್ಲಿ ಕಳೆದ 30 ವರ್ಷಗಳಿಂದ ಮನೆಗಳು ನಿಮರ್ಾಣವಾಗಿ ಬಹಳಷ್ಟು ಕುಟುಂಬಗಳು ವಾಸವಾಗಿದ್ದರೂ ಸಹ ಯಾವುದೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯತಿಗೆ ತಿಳಿಸಿದರೂ ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಗುಡ್ಡಪ್ಪ ನಾಯಕ, ಸದರಿ ಪ್ಲಾಟಿನಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಿಯಾಯೋಜನೆಯನ್ನು ತಯಾರಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಹಿರಿಯ ನಾಗರೀಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಸೂಕ್ತ ಪರಿಹಾರ ಮತ್ತು ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವೃದ್ಧಾಪನ ಕೇಂದ್ರ ಸ್ಥಾಪಿಸಬೇಕೆಂದು ಗ್ರಾಮಸ್ಥರಾದ ತಿರಕಪ್ಪ ನಾಯಕ್ ತಹಶೀಲ್ದಾರರನ್ನು ಒತ್ತಾಯಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಸಮಸ್ಸೆಗಳ ಕುರಿತು ಮನವಿ ಸ್ವೀಕರಿಸಲಾಯಿತು. 

ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಗ್ರಾ.ಪಂ ಸದಸ್ಯರುಗಳಾದ ಬಸವರಾಜ ಆಲದಕಟ್ಟಿ, ಕೆ.ಜಿ.ಲಮಾಣಿ, ಗಿರಿಜವ್ವ, ಟಿಈಓ ಅಬೀದ್ ಗದ್ಯಾಳ, ಬಿಈಓ ಡಿಕೆ ರುದ್ರಮುನಿ, ಬಿಸಿಎಮ್ ಅಧಿಕಾರಿ ಗೀತಾ ಕುಂದಾಪುರ, ಸಮಾಜ ಕಲ್ಯಾಣ ಅಧಿಕಾರಿ ಪುಂಡಲೀಕ ಮಾನವರೆ, ಪಶು ಸಂಗೋಪನಾಧಿಕಾರಿ ಡಾ|| ಗೋಪಿನಾಥ್, ಹೆಸ್ಕಾಂ ಎಇಇ ಹಾಲೇಶ್ ಅಂತರವಳ್ಳಿ, ಕೃಷಿ ಅಧಿಕಾರಿ ಜಿ.ಎಮ್. ಹಿಮಾಚಲ, ಇಂಜಿನೀಯರುಗಳಾದ ಆನಂದ ದೊಡ್ಮನಿ, ಆರೀಫ್ ಹಿರೇಹಾಳ, ವಾಯ್.ಕೆ. ಮಟಗಾರ, ರೇಷ್ಮೆ ವಿಸ್ತರಣಾಧಿಕಾರಿ ಪಿ.ಹೆಚ್. ಪೂಜಾರ, ಅಕ್ಷರ ದಾಸೋಹ ಅಧಿಕಾರಿ ತಿಮ್ಮಾರೆಡಿ,್ಡ ಮಂಜುಳಾ ಮನ್ನಣ್ಣನವರ, ಗ್ರಾಮಸ್ಥರಾದ ಟಿ.ಎಸ್. ವಡ್ಡರ, ಎಮ್.ಎಮ್.ಕಬ್ಬೂರ, ಗ್ರಾಮ ಲೆಕ್ಕಾಧಿಕಾರಿ ಕೆ.ಎನ್. ಹುಚ್ಚೇರ, ಅದ್ವಿತ್ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.