ನೂತನ ಅತಿಥಿಗಳಿಗೆ ನಾಮಕರಣ ಮಾಡಿದ ಬಿಎಸ್ ವೈ

ಬೆಂಗಳೂರು,  ಮೇ 9, ಲಾಕ್ ಡೌನ್ ನಡುವೆ ಕಳೆದ ವಾರ ಹೊಸ ಅತಿಥಿಗಳನ್ನು ಬರಮಾಡಿಕೊಂಡಿದ್ದ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ನೂತನ ಅತಿಥಿಗಳಿಗೆ ನಾಮಕರಣ  ಮಾಡಿದ್ದಾರೆ.ಕಳೆದ ಶುಭ ಶುಕ್ರವಾರದಂದು ಯಲಹಂಕ  ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ಎಸ್‌.ಆರ್. ವಿಶ್ವನಾಥ್  ಅವರು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದರು.ಶನಿವಾರ ಹೊಸ ಅತಿಥಿಗಳಿಗೆ ನಾಮಕರಣ ಮಾಡಿದ ಮುಖ್ಯಮಂತ್ರಿಗಳು,  ಹಾಲು‌ ಕೊಡುವ ಹಸುವಿಗೆ ಕಾವೇರಿ ಹಾಗೂ ಇನ್ನೊಂದು ಹಸುವಿಗೆ ಕೃಷ್ಣೆ ಎಂದು ಮತ್ತು ಕರುವಿಗೆ ಭೀಮ ಎಂದು ನಾಮಕರಣ ಮಾಡಿದ್ದಾರೆ.
ಪ್ರತಿ ದಿನ ಬೆಳಗ್ಗೆ ಮುಖ್ಯಮಂತ್ರಿಗಳು  ವಾಯುವಿಹಾರಕ್ಕೆ  ಭೀಮನನ್ನು‌ ಒಂದು ರೌಂಡ್ ಕರೆದುಕೊಂಡು ಹೋಗುತ್ತಾರೆ. ಸದ್ಯ  ಹಸುಗಳು ಹೊಸ‌ ಮನೆಗೆ ಹೊಂದಿಕೊಳ್ಳುತ್ತಿದ್ದು,  ಅತಿಥಿಗಳಿಗಾಗಿ ಮುಖ್ಯಮಂತ್ರಿ ಗಳು  ಕಾವೇರಿ ನಿವಾಸದಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ ಆತ್ಮೀಯವಾಗಿ  ನೋಡಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಮುಖ್ಯಮಂತ್ರಿ ತಮ್ಮ ನಿವಾಸದಲ್ಲಿ ಬೆಕ್ಕಿಗೆ ಹಾಲು ನೀಡಿ, ಲಾಕ್‌ ಡೌನ್‌ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದರು.