ಲೋಕದರ್ಶನ ವರದಿ
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಮೂಡಲಗಿ 25:ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಖಂಡಿಸಿ ಮಂಗಳವಾರದಂದು ಮೂಡಲಗಿಯ ಕಲ್ಮೇಶ್ವರ ವೃತ್ತದಲ್ಲಿ ಬಿಜೆಪಿ ಅರಭಾವಿ ಮಂಡಲ ವತಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿ ಡಿ.ಕೆ.ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮಾತನಾಡಿ, ಬಹು ಸಂಖ್ಯಾತ ಹಿಂದುಗಳಿಗೆ ಅನ್ಯಾಯ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಮ್ಮ ಸ್ಥಾನಕ್ಕೆ ತಕ್ಷ ರಾಜೀನಾಮೆ ಕೋಡಬೇಕು ಹಾಗೂ ಕಾಂಗ್ರೇಸ್ ಪಕ್ಷ ಡಿಕೆಸಿ ಅವರನ್ನು ವಜಾ ಮಾಡುವರಿಗೆ ರಾಜ್ಯ ಹಾಗೂ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಉಗ್ರ ಹೋರಾಟ ಮಾಡುತ್ತದೆ ಎಂದ ಅವರು ಡಿ.ಕೆ.ಶಿವಕುಮಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಹಾಂತೇಶ ಕುಡುಚಿ ಪಾಂಡು ಮಹೇಂದ್ರಕರ. ಪುರಸಭೆ ಮಾಜಿ ಅಧ್ಯಕ್ಷರು ಹಾಘೂ ಹಾಲಿ ಸದಸ್ಯರಾದ ರವಿ ಸಣ್ಣಕ್ಕಿ, ಹನಮಂತ ಗುಡ್ಲಮನಿ, ಬಿಜೆಪಿ ಪದಾಧಿಕಾರಿಗಳಾದ ಪರ್ಪ ಹಡಪದ್, ಡಾ. ಬಸವರಾಜ್ ಪಾಲಬಾವಿ, ಪ್ರಮೋದ ನುಗ್ಗಾನಟ್ಟಿ, ಯಲ್ಲಾಲಿಂಗ ವಾಳದ್, ಈಶ್ವರ್ ಮುರಗೋಡ್, ಹನಮಂತ್ ಸತರಡ್ಡಿ, ಕುಮಾರ ಗಿರಡ್ಡಿ, ಸಿದ್ದಣ್ಣ ದುರದುಂಡಿ, ಮಲ್ಲಪ್ಪ ನೇಮಗೌಡರ್, ಜಗದೀಶ್ ತೇಲಿ ಮಲ್ಲು ಯಾದವಾಡ, ಓಂಪ್ರಕಾಶ್ ಕುಳ್ಳೂರ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.