ಬಿಜೆಪಿ ಹಿರಿಯ ಮುಖಂಡ ಶಿವಾನಂದ ಕಲ್ಲೂರ ಜನ್ಮದಿನದ ನಿಮಿತ್ಯ ರೋಗಿಗಳಿಗೆ ಹಾಲು, ಹಣ್ಣು ವಿರತರಣೆ


ಲೋಕದರ್ಶನ ವರದಿ

ಬಸವನಬಾಗೇವಾಡಿ 20: ಬಿಜೆಪಿ ಹಿರಿಯ ಮುಖಂಡ ಶಿವಾನಂದ ಕಲ್ಲೂರ ಅವರ ಜನ್ಮದಿನದ ನಿಮಿತ್ಯ ಕಲ್ಲೂರ ಅಭಿಮಾನಿ-ಸ್ನೇಹಿತರ ಬಳಗದಿಂದ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಿಸುವ ಜೊತೆಗೆ ಆಸ್ಪತ್ರೆ ಆವರಣ ಸೇರಿದಂತೆ ವಿವಿಧೆಡೆ ಸಸಿ ನೇಡುವ ಮುಖಾಂತರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗಣ್ಯ ವರ್ತಕ ಹಾಗೂ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಬಬಲು ಅಗರವಾಲ, ಡಾ.ಕರುಣಾಕರ ಚೌಧರಿ ಮಾತನಾಡಿ ಶಿವಾನಂದ ಕಲ್ಲೂರ ಅವರು ಎಬಿವಿಪಿ ಕಾರ್ಯಕರ್ತರಾಗಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ವಿದ್ಯಾಥರ್ಿಗಳ ಸಮಸ್ಯೆಗಳಿಗೆ ಧ್ವನಿಯಾಗಿ ಹಲವು ಹೋರಾಟದ ನೇತೃತ್ವವಹಿಸುವ ಜೊತೆಗೆ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡು ರಾಜಕೀಯ ಜೀವನ ಆರಂಭಿಸಿದರು ಎಂದು ಹೇಳಿದರು.

ಜಿಲ್ಲೆಯ ಬಿಜೆಪಿ ಜವಾಬ್ದಾರಿ ಮುಖಾಂತರ ರಾಜಕಾರಣದಲ್ಲಿ ಮುನ್ನಡೆದ ಅವರು ರಾಜ್ಯ ಕಾರ್ಯದಶರ್ಿವರೆಗೆ ಸುಧೀಘ ರಾಜಕೀಯ ಜೀವನದಲ್ಲಿ ನಡೆದಿದ್ದು ಕ್ರೀಯಾಶೀಲ ರಾಜಕಾರಣಿಯಾಗಿ, ಜನಪರ ಕಾಳಜಿಯೊಂದಿಗೆ ಎಲ್ಲ ಸಮುದಾಯದ ಜನತೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಅವರ ಆರೋಗ್ಯಯಲ್ಲಿ ಚೇತರಿಕೆಯಾಗಿ ಮರಳಿ ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತಾಗಲಿ ಎಂದು ಹೇಳಿದರು.

ಗಣ್ಯ ವರ್ತಕ ಭರತು ಅಗರವಾಲ, ಡಾ.ರಾಜಶೇಖರ ಚಿಂಚೋಳಿ, ಗೋಪಾಲ ಚಿಂಚೋಳಿ, ವಿನೂತ ಕಲ್ಲೂರ, ಶಿವಾನಂದ ನಾಗರಾಳ, ಗೋಪಾಲ ಕನಸೆ, ಶ್ರೀಕಾಂತ ಕೊಟ್ರಶೆಟ್ಟಿ, ಚಂದ್ರು ಸಿಂದಗಿ, ಮಲ್ಲಯ್ಯ ಹಿರೇಮಠ, ಮಲ್ಲಿಕಾಜರ್ುನ ಬಡಿಗೇರ, ಸಂಗಮೇಶ ಹುಜರತಿ, ಹಣಮಂತ ಮಾಲಗಾರ, ಡಾ. ಸಾಬೀರ ಪಟೇಲ, ಡಾ.ಮುತ್ತತ್ತಿ, ಡಾ.ಸಿಂಹಾಸನ, ಡಾ.ಪಟ್ಟಣಶೆಟ್ಟಿ ಆಸ್ಪತ್ರೆ ಸಿಬ್ಬಂದಿ ಖಾಜಂಬರ ಪಟೇಲ ಸೇರಿದಂತೆ  ಮುಂತಾದವರು ಇದ್ದರು.