ಪೆಟ್ರೋಲ್ ದರ ಇಳಿಸುವಂತೆ ಒತ್ತಾಯಿಸಿಃ ಬಿಜೆಪಿ ಪ್ರತಿಭಟನೆ

ಶಿಗ್ಗಾವಿ 06ಃ- ರಾಜ್ಯದಲ್ಲಿ ಪೆಟ್ರೋಲ್ ತೆರಿಗೆ ಹೆಚ್ಚಿಸಿರುವ ಸಮ್ಮಿಶ್ರ ಸಕರ್ಾರದ ಕೂಡಲೆ ಪೆಟ್ರೋಲ್ ದರ ಇಳಿಸುವಂತೆ ಒತ್ತಾಯಿಸಿ ತಾಲೂಕ ಬಿಜೆಪಿ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಪುರಸಭೆ ವೃತ್ತದಲ್ಲಿ ಕಾರು ತಳ್ಳುವ ಮೂಲಕ ಅಣಕು ಪ್ರದರ್ಶನ ಮಾಡಿ ರಾಜ್ಯ ಸಕರ್ಾರದ ದರ ಏರಿಕೆ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

  ಪಟ್ಟಣದ ಪುರಸಭೆ ವೃತ್ತದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಾನಂದ ಮ್ಯಾಗೇರಿ ಮಾತನಾಡಿ, ಕೇಂದ್ರ ಸಕರ್ಾರ ಪೆಟ್ರೋಲ್ ದರವನ್ನು ಇಳಿಸಿದರೆ ರಾಜ್ಯಸಕರ್ಾರ ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಿಸಿ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಕೂಡಲೆ ದರ ಇಳಿಸಬೇಕು ಹಾಗೂ ಭ್ರಷ್ಟಾಚಾರದಲ್ಲಿ ಸಿಲುಕಿರುವ ಸಚಿವ ಪುಟ್ಟರಂಗ ಶೆಟ್ಟಿಯವರು ಕೂಡಲೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

     ಯುವಮೋಚರ್ಾ ಅಧ್ಯಕ್ಷ ರೇಣುಕನಗೌಡ ಪಾಟೀಲ ಮಾತನಾಡಿ, ರಾಜ್ಯ ಸಕರ್ಾರ ಭ್ರಷ್ಟಾಚಾರದಿಂದ ಕೂಡಿದೆ ಭ್ರಷ್ಟಾಚಾರದಲ್ಲಿ ಸಿಲುಕಿರುವ  ಸಚಿವ ಪುಟ್ಟರಂಗ ಶೆಟ್ಟಿಯವರ ಮೇಲೆ ಕ್ರಮ ಜರುಗಿಸಲು ರಾಹುಲ ಗಾಂದಿಯವರ ಸಲಹೆ ಇನ್ನು ರಾಜ್ಯ ಸಕರ್ಾರಕ್ಕೆ ದೊರೆತಂತಿಲ್ಲ ಎಂದು ಗೇಲಿ ಮಾಡಿದರು, ಹಾಗೂ ರಾಜ್ಯ ಸಕರ್ಾರ ಪೆಟ್ರೋಲ ಮೇಲಿನ ತೆರಿಗೆ ಇಳಿಸದಿದ್ದರೆ ಉಗ್ರಹೋರಾಟ ಮಾಡುವದಾಗಿ ಎಚ್ಚರಿಸಿದರು.

   ಗೋಪಾಲ ಪಾಯಣ್ಣವರ, ಯಲ್ಲಪ್ಪ ಬಗಾಡೆ, ಶಂಕ್ರಪ್ಪ ಮುಂದಿನಮನಿ, ದಯಾನಂದ ಅಕ್ಕಿ, ಅಜ್ಜಪ್ಪ ಲಮಾಣಿ, ಕರಿಯಪ್ಪ ಕಟ್ಟಿಮನಿ, ಸಂಜನಾ ರಾಯ್ಕರ್, ಮಲ್ಲಮ್ಮ ಸೋಮನಕಟ್ಟಿ, ಕಾಳಪ್ಪ ಬಡಿಗೇರ, ನಾಗರಾಜ ಗುಡ್ಡಣ್ಣವರ, ಪ್ರತೀಕ ಕೋಳೆಕರ್, ಸಿದ್ದು ಆಡಿನ, ರಾಜೇಶ ದೊಡ್ಡಮನಿ, ಫಕ್ಕೀರಗೌಡ ಬರಮಗೌಡ್ರ, ಪ್ರಸಾದ ಮಡ್ಡಿ, ವೀರೇಶ ಹಡಪದ, ರವಿ ಮೋಟೆನವರ, ಶಿವು ಬುಡ್ಡಣ್ಣವರ, ಮುತ್ತು ಕಟ್ಟಿಮನಿ, ಮಾಲತೇಶ ಗುಡಗೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.