'ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು'

ಬೈಲಹೊಂಗಲ 04:  2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ಯುವ ಮೋಛರ್ಾ ಕಾರ್ಯಕರ್ತರು ಸನ್ನದ್ದರಾಗಿ ಭೂತಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ರಾಜ್ಯ ಯುವ ಮೋಛರ್ಾ ಪ್ರಧಾನ ಕಾರ್ಯದಶರ್ಿ ಬಿ.ವಾಯ್.ವಿಜಯೇಂದ್ರ ಹೇಳಿದರು.

        ಅವರು ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ  ಬಿಜೆಪಿ ಯುವ ಮೊಛರ್ಾ ಗ್ರಾಮಾಂತರ ಜಿಲ್ಲೆಯ ವಿಜಯ ಲಕ್ಷ-2019 ಜಿಲ್ಲಾ ವಿಶೇಷ ಸಭೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಳೆದ ನಾಲ್ಕುವರೆ ವರ್ಷಗಳಲ್ಲಿ ಎನ್ಡಿಎ ನೇತೃತ್ವದ ಪ್ರಧಾನ ಮಂತ್ರಿ ನರೇಂದ್ರ ಮೋಧಿ ಅವರ ಸರಕಾರ ಯಾವುದೇ ಹಗರಣಗಳಿಲ್ಲದೆಯೇ ಅಧಿಕಾರ ಚಲಾಯಿಸಿ ಜನಮಾನಸದಲ್ಲಿ  ನೆಲೆಯೂರಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಾದ ಬೇಟಿ ಬಚಾವೋ ಬೇಟಿ ಪಡಾವೋ, ಫಸಲ ಭೀಮಾ ಯೋಜನಾ, ಸ್ಕೀಲ ಇಂಡಿಯಾ, ಮೇಕ ಇನ್ ಇಂಡಿಯಾ, ಜನಧನ್ ಯೋಜನೆ, ಕೃಷಿ ಸಿಂಚಾಯಿ, ಉಜ್ವಲ ಯೋಜನೆ, ಆಯುಷ್ಮಾನ ಭಾರತ ಬಡ ಜನರಿಗೆ ಅನೂಕೂಲವಾಗಿದೆ.

        ಪ್ರಧಾನ ಮಂತ್ರಿ  ಆಡಳಿತಯ ವೈಖರಿಯನ್ನು ಪ್ರಪಂಚವೇ ಮೆಚ್ಚುತ್ತಿದ್ದು ಮತ್ತೇ ಭಾರತ ದೇಶದ ಪ್ರಧಾನ ಮಂತ್ರಿಯಾಗಲೆಂದು ಆಶಿಸುತ್ತಿದ್ದಾರೆ. ಅವರು ವಿಶ್ವದ ವಿವಿಧ ರಾಷ್ರ್ಟಗಳನ್ನು ಸಂಪಕರ್ಿಸಿ ದೇಶದ ಆಥರ್ಿಕ ವ್ಯವಸ್ಥೆಯನ್ನು ಬಲಪಡಿಸಿ ಭಾರತದತ್ತ ತಿರುಗು ನೋಡುವಂತೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಈ ದೇಶವನ್ನು ಅತ್ಯಂತ ಹೀನಾಯವಾಗಿ ನೋಡುತ್ತಿರುವ ರಾಷ್ರ್ಟಗಳು ಇಂದು ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತಿದ್ದಾರೆ.

       ಜಿಎಸ್ಟಿ, ಡೀ ನೋಟಿಪಿಕೇಶನ್ ಕುರಿತು ಹಲವರು ಹಗರುವಾಗಿ ಮಾತನಾಡುತ್ತಿದ್ದಾರೆ. ಈ ಮೊದಲು ದೇಶದಲ್ಲಿ ಸುಮಾರು 3.50 ಕೋಟಿ. ಜನ ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದರು. ಪ್ರಸಕ್ತವಾಗಿ 6.50 ಕೋಟಿ ಜನ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.  ಯುಪಿಎ ಸರಕಾರದ ದುರಾಡಳಿತವನ್ನು ಧೇಶದ ಜನತೆ ಇನ್ನೂ ಮರೆತಿಲ್ಲ. ನರೇಂದ್ರ ಮೋದಿಯವರು ರಚಾನ್ಮಾತಕವಾಗಿ ಕಾರ್ಯ ನಿರ್ವಹಿಸಿ ಇತರರಿಗೆ ಮಾದರಿಯಾಗಿದ್ದಾರೆ.

  ರಾಜ್ಯದಲ್ಲಿ ಬಿಜೆಪಿ ಅಧಿಕಾರ ಅವಧಿಯಲ್ಲಿ ಪಕ್ಷ ಭೇದ ಮರೆತು ಎಲ್ಲ ಕ್ಷೇತ್ರಗಳಿಗೆ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಮಂತ್ರದಿಂದ ಅಭಿವೃದ್ದಿ ಕಾರ್ಯಗಳ ಮಹಾಪೂರವೇ ಹರಿದು ಬರುತ್ತಿತ್ತು. ಆದರೆ ಈಗಿನ ಸಮಿಶ್ರ ಸರಕಾರ  ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿ ಉತ್ತರ ಕನರ್ಾಟಕಕ್ಕೆ ಘೋರ ಅನ್ಯಾಯವೆಸಗುತ್ತಿದೆ. ರಾಜ್ಯದ 100 ಕ್ಕೂ ಹೆಚ್ಚು ತಾಲೂಕುಗಳು ಬರ ಎದುರಿಸುತ್ತಿದ್ದು ಈ ಕಡೆ  ಯಾರೂ ಕೂಡ ಗಮನ ಹರಿಸುತ್ತಿಲ್ಲ ಎಂದರು.

 ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಸಂಸದರನ್ನು ಆಯ್ಕೆಗೆ ಶ್ರಮವಹಿಸಬೇಕಾಗಿದೆ. ಈ ನಿಟ್ಟಿನ್ಲಲಿ ಕಾರ್ಯಕರ್ತರು ಪ್ರಧಾನ ಮತ್ರಿಯವರ ಕಾರ್ಯವೈಖರಿ, ಅಭಿವೃದ್ದಿಪರ ಯೋಜನೆಗಳನ್ನು ಜನರ ಮನ ಮುಟ್ಟುವುಂತೆ ಕೆಲಸ ನಿರ್ವಹಿಸಬೇಕೆಂದರು.

 ಮಾಜಿ ಶಾಸಕ ಸಂಜಯ ಪಾಟೀಲ, ಯುವ ಮೋಛರ್ಾ ರಾಜ್ಯ ಪ್ರಧಾನ ಕಾರ್ಯದಶರ್ಿ ತಮ್ಮೇಶಗೌಡ ಮಾತನಾಡಿದರು.

     ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ವೇದಿಕೆ ಮೇಲೆ ರಾಜು ಚಿಕ್ಕನಗೌಡರ, ಗುರುಪಾದ ಕಳ್ಳಿ, ಈರಣ್ಣ ಅಂಗಡಿ, ಮಡಿವಾಳಪ್ಪ ಹೋಟಿ, ಘೂಳಪ್ಪ ಹೊಸಮನಿ,  ಕೆ.ಎಸ್. ನಿಶ್ಚಿತಾ, ಯುವರಾಜ ಜಾಧವ ಇದ್ದರು.

 ಈ ಸಂದರ್ಭದಲ್ಲಿ ಯುವ ಮೋಛರ್ಾ ಕಾರ್ಯಕರ್ತರಿಂದ ಬಿ.ವಾಯ್.ವಿಜಯೇಂದ್ರ ಅವರನ್ನು  ಸತ್ಕರಿಸಲಾಯಿತು. ಪ್ರಕಾಶ ಭರಮಗೌಡರ, ಬಸವರಾಜ ನೇಸರಗಿ, ಚನ್ನಬಸು ಈಟಿ, ನಿಂಗಪ್ಪ ಚೌಡನ್ನವರ, ವಿಶಾಲ ಹೊಸೂರ, ಬಸವರಾಜ ಭಜಂತ್ರಿ, ಸುಧೀರ ವಾಲಿ, ಶಿವಾನಂದ ಕೋಲಕಾರ, ಉದಯ ಕೊಟಬಾಗಿ,  ಆನಂದ ಮೂಗಿ, ಬಸು ಧಾರವಾಡ, ಮುದಕಪ್ಪ ಗಾಯಕವಾಡ, ಸಂಜು ಗಿರೇಪ್ಪಗೌಡರ, ಚಂದ್ರು ಪಟ್ಟೆದ, ಸುನೀಲ ಈಟಿ, ರಾಜಕುಮಾರ ಟೋಪನ್ನವರ, ಕಿರಣ ಅರವಳ್ಳಿ, ಮಲ್ಲಿಕಾಜರ್ುನ ವಕ್ಕುಂದಮಠ, ಭರತ ಹುಣಶೀಕಟ್ಟಿ, ಶಿವಪ್ರಸಾದ ಪಾಟೀಲ, ಮಡಿವಾಳಪ್ಪ ಚಳಕೊಪ್ಪ, ನಿಂಗನಗೌಡ ಪಾಟೀಲ, ಬಸವರಾಜ ಮಠಪತಿ, ಪ್ರಕಾಶ ಜಾಣವೇಕರ, ಪ್ರಮೋದ ಸಾಣಿಕೊಪ್ಪ, ಮಹಾಂತೇಶ ಚಿನ್ನಪ್ಪಗೌಡರ, ಬಸವರಾಜ  ದುಗ್ಗಾಣಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

    ಇದಕ್ಕೂ  ಮುಂಚೆ ಬಿ.ವಾಯ್.ವಿಜಯೇಂದ್ರ ಅವರು ವೀರರಾಣಿ ಕಿತ್ತೂರು ಚನ್ನಮ್ಮಳ ಆಶ್ವಾರೂಡ ಮೂತರ್ಿ, ಸಂಗೊಳ್ಳಿ ರಾಯಣ್ಣ, ಚನ್ನಮ್ಮನ ಐಕ್ಯ ಸ್ಥಳಕ್ಕೆ ಭೇಟಿ ಹೂಮಾಲೆ ಹಾಕಿ ಗೌರವ ಸಮಪರ್ಿಸಿದರು.  ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ ರ್ಯಾಲಿ ನಡೆಸಿದರು. ಪ್ರಭು ಹೂಗಾರ ಸ್ವಾಗತಿಸಿದರು, ಎಪಿಎಂಸಿ ನಿದರ್ೇಶಕ ನಿರೂಪಿಸಿದರು. ಎಲ್.ಎಚ್.ಬಂಡಿ ವಂದಿಸಿದರು.