ನವದೆಹಲಿ 20: ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಆರೋಪಿಸುವುದು ತಪ್ಪು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾಜರ್ುನ್ ಖಗರ್ೆ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಎನ್ಡಿಎ ಸಕರ್ಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಬೆಳಗ್ಗಿನಿಂದಲೂ ಬಿಸಿ ಬಿಸಿ ಚಚರ್ೆ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಮಲ್ಲಿಕಾಜರ್ುನ್ ಖಗರ್ೆ, ಬಿಜೆಪಿ ಮತ್ತು ಆರ್ ಎಸ್ ಎಸ್ ದಲಿತ ವಿರೋಧಿಯಾಗಿದ್ದು, ರಾಜಕೀಯ ಲಾಭಕ್ಕಾಗಿ ರಾಮನನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ರೀತಿಯಲ್ಲಿ ನಾವು ಆಡಳಿತ ನಡೆಸಿದ್ದರೆ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ. ನಿಮ್ಮ ಸಕರ್ಾರ ಕೇವಲ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತನಾಡುತ್ತದೆ. ರೈತರ ಆತ್ಮಹತ್ಯೆ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಲೋಕಪಾಲ್ ಕಾಯ್ದೆಗೆ ಒಂದು ಸಣ್ಣ ತಿದ್ದುಪಡಿ ತರಲು ಬಿಜೆಪಿ ಸಕರ್ಾರ ವಿಫಲವಾಗಿದೆ ಎಂದ ಖಗರ್ೆ, ಕಾಂಗ್ರೆಸ್ ದೇಶದ ಬಹುತೇಕ ಹಳ್ಳಿಗಳಿಗೆ ವಿದ್ಯುತ್ ನೀಡಿದೆ ಎಂದರು.