ಪಿಡಿಪಿ ಬಂಡುಕೋರರ ಜೊತೆ ಕಾಶ್ಮೀರನಲ್ಲಿ ಬಿಜೆಪಿ ಸರಕಾರ?

ಹೊಸದಿಲ್ಲಿ 06: ರಾಜಕಾರಣದಲ್ಲಿ "ಅಸಂಭವ' ಎಂಬ ಪದವೇ ಇಲ್ಲ. ಅಂತೆಯೇ ಪಿಡಿಪಿ ಮೈತ್ರಿ ಕೂಟದಿಂದ ಹೊರಬಂದಿರುವ ಭಾರತೀಯ ಜನತಾ ಪಕ್ಷ ಇದೀಗ ಜಮ್ಮು ಕಾಶ್ಮೀರದಲ್ಲಿ ಬಂಡುಕೋರ ಪಿಡಿಪಿ ಸದಸ್ಯರು ಮತ್ತು ಪಕ್ಷೇತರರ ನೆರವಿನಲ್ಲಿ ಹೊಸದಾಗಿ ಸರಕಾರ ಮಾಡುವ ಸಾಧ್ಯತೆ ಇದೆ ಎಂದು ತಾಜಾ ವರದಿಗಳು ತಿಳಿಸಿವೆ.  

ಈ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಬಂಡುಕೋರ ಪಿಡಿಪಿ ಸದಸ್ಯರನ್ನು ಮತ್ತು ಪಕ್ಷೇತರರನ್ನು ಸಂಪಕರ್ಿಸುವ ಕೆಲಸದಲ್ಲಿ ನಿರತವಾಗಿದೆ; ಅಮರನಾಥ ಯಾತ್ರೆ ಮುಗಿದೊಡನೆಯೇ ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಹೊಸ ಸರಕಾರ ರಚಿಸುವ ಯತ್ನ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. 

ಇದೇ ರೀತಿ ಹಾಲಿ ರಾಜ್ಯಪಾಲ ಎನ್ ಎನ್  ವೋರಾ ಅವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ರಾಜ್ಯದ ಕೆಲವು ಪ್ರಮುಖ ವ್ಯಕ್ತಿಗಳನ್ನು ಪರಿಗಣಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.  

ಕಳೆದ ಜೂನ್ ತಿಂಗಳಲ್ಲಿ ಬಿಜೆಪಿ ಮೈತ್ರಿಕೂಟದಿಂದ ಹೊರ ನಡೆದ ಪರಿಣಾಮ ಪಿಡಿಪಿ ಮುಖ್ಯಮಂತ್ರಿ ಮೆಹಬೂಬ ಮುಪ್ತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.  

87 ಸದಸ್ಯ ಬಲದ ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಮೆಹಬೂಬ ಅವರ ಪಿಡಿಪಿಗೆ 28 ಸ್ಥಾನವಿದೆ; ಬಿಜೆಪಿಗೆ 25 ಸ್ಥಾನವಿದೆ.  

"ಮೂರು ವರ್ಷಗಳ ಹಿಂದೆ ನಾವು ಪಿಡಿಪಿ ಜತೆಗೆ ಸೇರಿಕೊಂಡು ಮೈತ್ರಿ ಸರಕಾರ ರಚಿಸಿದ್ದೆವು; ಆದರೆ ಪಿಡಿಪಿ ಜತೆ ಮುಂದುವರಿಯುವುದು ಅಸಾಧ್ಯವೆಂದು ತಿಳಿದು ನಾವು ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆವು' ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ರಾಮ ಮಾಧವ ಹೇಳಿದ್ದರು . ಅಂತೆಯೇ ರಾಜ್ಯದ ಆಡಳಿತೆಯನ್ನು ರಾಜ್ಯಪಾಲರ ಕೈಗೆ ಒಪ್ಪಿಸುವ ಕಾಲ ಈಗ ಒದಗಿ ಬಂದಿದೆ ಎಂದವರು ಹೇಳಿದ್ದರು.