ಕ್ರೀಯಾಶೀಲರಾಗಿ ಜೀವನಸಾಗಿಸಿ ಬದುಕು ಸಾರ್ಥಕಗೊಳಿಸಿ: ವಿವೇಕ


ಲೋಕದರ್ಶನ ವರದಿ

ಕೊಪ್ಪಳ 11: ದುಶ್ಚಟಗಳಿಗೆ ದಾಸರಾಗದೇ ಉತ್ತಮ ಕ್ರೀಯಾಶೀಲರಾಗಿ ಜೀವನಸಾಗಿಸಿ ಬದುಕು ಸಾರ್ಥಕಗೊಳಿಸಬೇಕು. ಇದರಿಂದ ಆರೋಗ್ಯ ಪೂರ್ಣ ಸಮಾಜ ನಿಮರ್ಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಬೆಳ್ತಂಗಡಿ ಅಖಿಲ ಕನರ್ಾಟಕ ರಾಜ್ಯ ಜನಜಾಗೃತಿ ವೇದಿಕೆ ನಿದರ್ೇಶಕ ವಿವೇಕ ವಿನ್ಸೆಂಟ್ ಪಾಯಸ್ ರವರು ಹೇಳಿದರು.

ಅವರು ನಗರದ ಸಾಲಾರ ಜಂಗ್ ರಸ್ತೆ ಬಳಿ ಇರುವ ಪಾಂಡುರಂಗ ದೇವಸ್ಥಾನದ ಸಭಾಂಗಣದಲ್ಲಿ ಕಳೆದ ಜು.04 ರಿಂದ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಹಾಗೂ ಮಧ್ಯಪಾನ ಸ್ವಯಂ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 1217ನೇ ಮಧ್ಯವರ್ಜನ ಶಿಬಿರದ ಕೊನೆಯ ದಿನದ ತರಬೇತಿ ಶಿಬಿರದ ಕುಟುಂಬದ ದಿನ ಎಂಬ ವಿಷಯದ ಕುರಿತು ಶಿಬಿರಾಥರ್ಿಗಳಿಗೆ ಏರ್ಪಡಿಸಿದ ತರಬೇತಿ ಶಿಬಿರದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು.

ಮುಂದುವರೆದು ಮಾತನಾಡಿದ ಅವರು, ಮನುಷ್ಯ ಮಧ್ಯಪಾನ ಮಾಡಿ ತನ್ನ ಜೀವನ ಹಾಳುಮಾಡಿಕೊಳ್ಳಬಾರದು ದುಶ್ಚಂಟಗಳಿಂದ ದೂರವಿರಬೇಕು. ಜೀವನದಲ್ಲಿ ಪುಣ್ಯ ಸಂಪಾದಿಸುವ ಕೆಲಸ ಮಾಡಬೇಕು. ಗುರು ಹಿರಿಯರ ಆಶೀವರ್ಾದ ಪಡೆದವನೇ ನಿಜವಾದ ದೊಡ್ಡ ಮನುಷ್ಯನಿದ್ದಂತೆ. ಮನುಷ್ಯನಿಗೆ ಆತ್ಮವಿಶ್ವಾಸ ಮುಖ್ಯವಾಗಿರಬೇಕು. ಆತ್ಮ ದ್ರೋಹದ ಕೆಲಸ ಮಾಡಬಾರದು. ದೇವರು ಮೆಚ್ಚುವಂತಹ ಕೆಲಸ ಮನುಷ್ಯ ಮಾಡಬೇಕು. ಪಾಪವನ್ನು ಪುಣ್ಯದಿಂದ ತೊಳೆಯಬೇಕು. ದೀಪದಿಂದ ದೀಪ ಹಚ್ಚುವ ಕೆಲಸ ಮಾನವ ಮಾಡಬೇಕು. ಸೋಮಾರಿಗಳಿಗೆ ದೇವರು ಮೆಚ್ಚುವದಿಲ್ಲ. ಪ್ರಾಮಾಣಿಕರಿಗೆ ಆಶೀವರ್ಾದ ಮಾಡುತ್ತಾನೆ. ಪಾಲಕರು ತಮ್ಮ ಮಕ್ಕಳಿಗೆ ಆದರ್ಶಪ್ರಾಯರಾಗಬೇಕು ಎಂದು ಬೆಳ್ತಂಗಡಿ ಅಖಿಲ ಕನರ್ಾಟಕ ರಾಜ್ಯ ಜನಜಾಗೃತಿ ವೇದಿಕೆ ನಿದರ್ೇಶಕ ವಿವೇಕ ವಿನ್ಸೆಂಟ್ ಪಾಯಸ್ ರವರು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾಲ್ಗೊಂಡು ಆಶೀರ್ವಚನ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿದರ್ೇಶಕ ಹೆಚ್.ಎಲ್.ಮುರಳಿಧರ್, ಜನಜಾಗೃತಿ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷ ಶ್ರೀನಿವಾಸ ಗುಪ್ತಾ, ಹಿರಿಯ ಮುಖಂಡ ದೇವೇಂದ್ರಪ್ಪ ಬಳೂಟಗಿ, ನಗರಸಭೆ ಸದಸ್ಯ ಬಾಳಪ್ಪ ಬಾರಕೇರ, ವಾಣಿಜ್ಯೋದ್ಯಮಿ ಹನುಮಂತಪ್ಪ ಅಂಗಡಿ, ಸದಾಶಿವಯ್ಯ ಹಿರೇಮಠ, ಬಸಯ್ಯ ಹಿರೇಮಠ, ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ, ಫಕೀರಪ್ಪ ಗೋಟೂರು, ಯೋಜನಾಧಿಕಾರಿ ಸುರೇಂದ್ರ ನಾಯಕ, ಮೇಲ್ವೀಚಾರಕರಾದ ಸುಮಂಗಲಾ ಹಾಗೂ ಶಿಲ್ಪಾ ಪಾಟೀಲ್ ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ನಂತರ ಶಿಬಿರದ ಸಮಾರೋಪ ಸಮಾರಂಭ ಜರುಗಿತು.