ಮುಂಬೈ 26: ಸೆಪ್ಟೆಂಬರ್ನಲ್ಲಿ ಆಯೋಜನೆಯಾಗಿರುವ ಏಷ್ಯಾ ಕಪ್ ಪಂದ್ಯಾವಳಿಯ ವೇಳಾ ಪಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ನಲ್ಲಿ ನಡೆಯಲಿರು ಏಷ್ಯಾ ಕಪ್ ಪಂದ್ಯಾವಳಿಯ ವೇಳಾ ಪಟ್ಟಿಗೆ ಬಿಸಿಸಿಐ ಆಕ್ಷೇಪ ವ್ಯಕ್ತ ಪಡಿಸಿದ್ದು, ವೇಳಾಪಟ್ಟಿಯನ್ನು ಮೈಂಡ್ಲೆಸ್ (ತಲೆ ಇಲ್ಲದ ನಿಧರ್ಾರ) ಎಂದು ಜರಿದಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಗೊತ್ತು ಮಾಡಿದ ವೇಳಾಪಟ್ಟಿಯ ಬಗ್ಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನಾ ಕ್ವಾಲಿಫೈರ್ ಪಂದ್ಯವನ್ನು ನಿಗದಿಗೊಳಿಸಲಾಗಿದೆ. ಈ ವೇಳಾ ಪಟ್ಟಿ 'ಮೈಂಡ್ಲೆಸ್ ಆಗಿದ್ದು, ಎರಡು ದಿನ ಸತತವಾಗಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಇದನ್ನು ಯಾವ ಕಾರಣಕ್ಕೂ ಒಪ್ಪಲಾಗುವುದಿಲ್ಲ. ವೇಳಾಪಟ್ಟಿ ತಯಾರಿಸುವಾಗ ಸಮಾನವಾಗಿ ತಯಾರಿಸಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಬಿಡುಗಡೆಯಾಗಿರುವ ವೇಳಾಪಟ್ಟಿಯಂತೆ ಪಾಕಿಸ್ತಾನ ಸೆಪ್ಟೆಂಬರ್ 16 ರಂದು ಕ್ವಾಲಿಫೈರ್ ಪಂದ್ಯ ಆಡಿ ಬಳಿಕ 19 ರಂದು ಭಾರತವನ್ನು ಎದುರಿಸಲಿದೆ. ಅಲ್ಲಿಗೆ ಪಾಕಿಸ್ತಾನಕ್ಕೆ ಮುಂದಿನ ಪಂದ್ಯಕ್ಕೆ 2 ದಿನಗಳ ಕಾಲಾವಕಾಶ ದೊರೆಯುತ್ತದೆ. ಆದರೆ ಅದೇ ಭಾರತದ ವಿಚಾರಕ್ಕೆ ಬಂದರೆ, ಭಾರತ ಸೆಪ್ಟೆಂಬರ್ 18 ರಂದು ಕ್ವಾಲಿಫೈರ್ ಪಂದ್ಯವನ್ನು ಆಡಿ ಮತ್ತೆ ಮರುದಿನವೇ ಅಂದರೆ ಸೆಪ್ಟೆಂಬರ್ 19 ಪಾಕಿಸ್ತಾನ ವಿರುದ್ಧ ಸೆಣಸಬೇಕು. ಭಾರತಕ್ಕೆ ಯಾವುದೇ ರೀತಿಯ ಕಾಲಾವಕಾಶವಿಲ್ಲ. ಹೀಗಾಗಿ ಬಿಸಿಸಿಐ ವೇಳಾಪಟ್ಟಿ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ವೇಳಾಪಟ್ಟಿ ಪರಿಷ್ಕರಿಸುವಂತೆ ಆಗ್ರಹಿಸಿದೆ.