ಲೋಕದರ್ಶನ ವರದಿ
ಮೂಡಲಗಿ 25: ಧಾಮರ್ಿಕ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರು ಭಕ್ತಿ ಮಾರ್ಗವನ್ನು ಅನುಸರಿಸಿ ನಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲೂ ಸಾಧ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಅವರು ಸೋಮವಾರ ನಗರದ ಬಸವ ರಂಗಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 25ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜಾ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತ ಮೂಡಲಗಿಯಲ್ಲಿ ನಡೆಯುತ್ತಿರುವ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ಕಂಡರೆ ಕೇರಳದಲ್ಲಿರುವ ಅಯ್ಯಪ್ಪ ಸನ್ನಿದಾನದಲ್ಲಿ ನಡೆಯುವ ಪೂಜೆಯಂತೆ ಭಾಸವಾಗುವುದು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳೂ ಜೀವನದಲ್ಲಿ ಶಿಸ್ತು, ಸಂಯಮ ಕಾಪಾಡಿ ಕೊಂಡು ನಡೆಯಬೇಕು. ಈ ಭಕ್ತಿ ವೃತ ಕೇವಲ 48 ದಿನಕ್ಕೆ ಸೀಮಿತವಾಗದೇ ನಮ್ಮ ಜೀವನದುದ್ದಕ್ಕು ಅಳವಡಿಸಿಕೊಂಡು ಹೋದರೆ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ನಾವೂ ಭಕ್ತಿಯ ಅನುಭವವನ್ನು ನೋಡಿ, ಕೇಳಿ, ಹಾಡಿ ಪಡೆದುಕೊಳ್ಳಬಹುದು. ಮನುಷ್ಯ ಇಂದಿನ ದಿನಗಳಲ್ಲಿ ಸ್ವಾರ್ಥಕ್ಕಾಗಿ ಬದುಕುತ್ತಿದ್ದಾನೆ. ಧ್ಯಾನ ಧರ್ಮ ಕಾರ್ಯಗಳಿಗೆ ಅವನಲ್ಲಿ ಸಮಯವಿಲ್ಲ. ವೃತ, ಧ್ಯಾನಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಅದ್ದರಿಂದ ಎಲ್ಲರು ಧರ್ಮದ ಕಾರ್ಯಗಳಲ್ಲಿ ಪಾಲ್ಗೋಳ್ಳಬೇಕು ಎಂದರು.
ಸಾನಿಧ್ಯವಹಿಸಿದ ಮುನ್ಯಾಳ ರಂಗಪೂರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜೀ ಮಾತನಾಡುತ್ತ ಇಂದಿನ ಯಾಂತ್ರಿಕ ಯುಗದಲ್ಲಿ ಪೂಜೆ, ವೃತ, ಧ್ಯಾನಗಳು ಮನುಷ್ಯನಿಗೆ ಆಧ್ಯಾತ್ಮಿಕ ಯಾತ್ರೆಗಳಾಗಿ ಪರಿವರ್ತನೆಯಾದಾಗ ಮಾತ್ರ ಮನುಷ್ಯನಲ್ಲಿ ಮಮತೆ, ಪ್ರೀತಿ ವಾತ್ಸಲ್ಯದ ಗುಣಗಳು ಬೆಳೆದು ಸಾಮರಸ್ಯದ ಸಮಾಜ ನಿಮರ್ಾಣವಾಗಲು ಸಾಧ್ಯವಿದೆ ಎಂದರು.
ಮೂಡಲಗಿ ಸಿದ್ದಸಂಸ್ಥಾನಮಠದ ಪೀಠಾಧಿಪತಿ ಶ್ರೀಪಾದಭೋದ ಸ್ವಾಮಿಜೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಆತ್ಮ ಶ್ರದ್ದೆ, ಸ್ಥಿರ ಚಿತ್ತದ ಭಕ್ತಿಯಿಂದ ನಡೆಸುವ ಪೂಜೆ, ಧ್ಯಾನಗಳಿಂದ ಭಗವಂತನನ್ನು ಕಾಣಬಹುದು ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕಲಿಯುಗದಲ್ಲಿ ಧಾಮರ್ಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿದೆ. ಧರ್ಮದಿಂದ ವಿಮುಕ್ತರಾಗುತ್ತಿರುವ ಯುವ ಜನಾಂಗವನ್ನು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡಲು ನಾವೆಲ್ಲರು ಶ್ರಮಿಸಬೇಕು. ಮೂಡಲಗಿಯ ಅಯ್ಯಪ್ಪ ಸ್ವಾಮಿ ಭಕ್ತರು ಇಂತಹ ಐತಿಹಾಸಿಕ ಪೂಜಾ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಎಂದರು.
ಅದ್ದೂರಿ ಮೆರವಣಿಗೆ: ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 25ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜಾಯ ನಿಮಿತ್ಯವಾಗಿ ಬಸವರಂಗಮಂಟಪದ ಸನ್ನಿಧಿಯಿಂದ ಸಂಜೆ 5 ಕ್ಕೆ ಕನ್ನಿ ಸ್ವಾಮಿಗಳ ಕುಂಭಮೇಳ, ಆನೆ ಮೇಲೆ ಅಂಬಾರಿ, ಅಯ್ಯಪ್ಪನ ಪಲ್ಲಕ್ಕಿ ಹಾಗೂ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ಜರುಗಿತು. ಅಪಾರಭಕ್ತ ಸಮೂಹದಲ್ಲಿ ನೂರಾರು ಮಾಲಧಾರಿಗಳ ಹಾಗೂ ಝಾಂಜ ಪಥಕ್, ಡೊಳ್ಳು ಕುಣಿತ, ಹಲಗೆ ವಾದ್ಯ ಹಾಗೂ ವಿವಿಧ ವಾದ್ಯಮೇಳದೊಂದಿಗೆ ನಗರದ ಶಿವಭೋಧರಂಗ ಮಠ, ಸಂಗಪ್ಪನ ವೃತ್ತ, ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮ ದೇವಿ ವೃತ್ತ ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಎಲ್ಲಾ ದೇವಸ್ಥಾನಗಳಿಗೆ ಪೂಜೆಗೈಯುತ್ತಾ ಬಸವ ಮಂಟಪದಲ್ಲಿ ನಿಮರ್ಿಸಿದ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಸ್ವಾಮಿಯ ಮೂತರ್ಿಯನ್ನು ಪ್ರತಿಷ್ಠಾಪಿಸಲಾಯಿತು.
ರಾಜು ಶೆಟ್ಟಿ(ಬೈಂದೂರು), ರವಿ ನೇಸೂರ ಗುರು ಸ್ವಾಮಿಗಳಿಂದ ಸ್ವಾಮಿಯ ಮೂತರ್ಿಗೆ ಪೂಜೆ, ಅಭಿಷೇಕ, ಪಡಿ ಪೂಜೆ, ಮತ್ತು ಮಹಾ ಮಂಗಳಾರತಿ ಜರುಗಿತು.
ಪೂಜಾ ಕಾರ್ಯಕ್ರಮದಲಿ ್ಲ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಗುರುಸ್ವಾಮಿಗಳು, ಮಾಲಾಧಾರಿಗಳು ಅಪಾರ ಭಕ್ತ ಸಮೂಹ ಪಾಲ್ಗೋಂಡಿತ್ತು. ಕಾರ್ಯಕ್ರಮವನ್ನು ಬಸವರಾಜ ಸಸಾಲಟ್ಟಿ ಹಾಗೂ ಎನ್.ಜಿ ಹೆಬ್ಬಳ್ಳಿ ನಿರೂಪಿಸಿದರು. ಪೂಜಾ ಕಾರ್ಯಕ್ರಮದ ನಂತರ ಭಕ್ತಾರಿಗೆ ಅನ್ನ ಸಂತರ್ಪಣೆ ನೇರವೇರಿತು.