ತಂಬಾಕು ಸೇವನೆಯ ದುಷ್ಪರಿಣಾಗಳ ಕುರಿತು ಜಾಗೃತಿ ಕಾರ್ಯಕ್ರಮ

Awareness program on ill effects of tobacco consumption

ಬೆಳಗಾವಿ 07:    ದಿ. 04ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಕಾರಾಗೃಹದ ನಿವಾಸಿಗಳಿಗಾಗಿ ತಂಬಾಕು ಹಾಗೂ ಮದ್ಯ ಸೇವನೆಯ ದುಷ್ಪರಿಣಾಗಳು ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮವು ಆರೋಗ್ಯ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಹಯೋಗದಲ್ಲಿ ಏರಿ​‍್ಡಸಲಾಗಿತ್ತು. ಉದ್ಘಾಟಕರಾಗಿ ಮಾನಸಿಕ ಆರೋಗ್ಯ ಪರೀಶಿಲನಾ ಮಂಡಳಿಯ ಅಧ್ಯಕ್ಷರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ಆರ್ ರೇನಕೆ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕರಾದ ವಿ ಕೃಷ್ಣಮೂರ್ತಿ ವಹಿಸಿದರು. ಹಾಗೂ ಮನೋರೋಗ ವೈಧ್ಯರಾದ ಡಾಽಽ ಸರಸ್ವತಿ ಹಾಗೂ ಮನ:ಶಾಸ್ತ್ರಜ್ಞೆ ಶ್ರೀಮತಿ ಆಶಾ ಹಿರೇಮಠ ಉಪಸ್ಥಿತರಿದ್ದರು. 

ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಆರ್ ರೇನಕೆ ಮಾತನಾಡಿ ಇಂದಿನ ಆದುನಿಕ ಯುಗದಲ್ಲಿ ಅನೇಕ ಜನರು ತಂಬಾಕು ಮದ್ಯ ಸೇವನೆಯಂತಹ ದುಷ್ಚಟಗಳಿಗೆ ಒಳಗಾಗಿ ತಮ್ಮ ಅಮುಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಕಾರಣ ಇಂತಹ ದುಷ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯಕರ ಜೀವನ ಸಾಗಿಸಬೇಕು ಹಾಗೂ ಬಿಡುಗಡೆ ನಂತರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು. 

ಕಾರಾಗೃಹದ ಮನೋರೋಗ ವೈಧ್ಯರಾದ ಡಾಽಽ ಸರಸ್ವತಿ ಮಾತನಾಡಿ ತಂಬಾಕು ಸೇವನೆಯು ಹಾಗೂ ಮದ್ಯ ಸೇವನೆಯಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ ಇಂತಹ ದುಷ್ಚಟಗಳು ಮನುಷ್ಯನನ್ನು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆರ್ಥೀಕವಾಗಿ ದುರ್ಬಲರನ್ನಾಗಿ ಮಾಡುತ್ತದೆ ಕಾರಣ ಇವುಗಳಿಂದ ಹೊರಬಂದು ತಾವೆಲ್ಲ ಯೋಗ ದ್ಯಾನ ಪ್ರಾಣಾಯಮ ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. 

ಕಾರಾಗೃಹದ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ ಮಾತನಾಡಿ ದುಷ್ಚಟಗಳಿಂದ ಸಂಬಂಧಗಳು ಹಾಳಾಗುತ್ತಿವೆ. ಹಾಗೂ ದೌರ್ಜನ್ಯಗಳು ಹೆಚ್ಚುತ್ತಿದ್ದು ಮನುಷ್ಯರ ನೆಮ್ಮದಿಯನ್ನು ಹಾಳು ಮಾಡುತ್ತಿವೆ ಕಾರಣ ಇಂತಹ ದುಷ್ಚಟಗಳಿಂದ ಹೊರ ಬರಲು ತಮ್ಮ ದೃಢ ನಿರ್ಧಾರವೇ ರಾಮಬಾನ ವಿದ್ದಂತ್ತೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಜೈಲರ್ ಬಿ.ವಾಯ್‌.ಬಜಂತ್ರಿ, ಗುರುಸಿದ್ದ ಮಠ ಹಾಗೂ ಶಿಕ್ಷಕರಾದ ಎಸ್‌.ಎಸ್‌.ಯಾದಗೂಡೆ ಉಪಸ್ಥಿತರಿದ್ದರು.