ಶ್ರೀ ಕಲ್ಮೇಶ್ವರ ಕಲಾ ತಂಡದಿಂದ ಸರಕಾರದ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ
ಶಿಗ್ಗಾವಿ 10: ತಾಲೂಕಿನ ಕೆಲವು ಆಯ್ದ ಗ್ರಾಮದಲ್ಲಿ ಸರಕಾರದ ಯೋಜನೆ ಕುರಿತು ಬೀದಿ ನಾಟಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲ್ಮೇಶ್ವರ ಜನಪದ ಕಲಾ ತಂಡದವರು ಪ್ರಸ್ತುತ ಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಜಾನಪದ ಹಾಡು ಮತ್ತು ಬೀದಿ ನಾಟಕದ ತಾಲೂಕಿನ ಗ್ರಾಮಗಳಾದ ಮಮದಾಪೂರ ತಾಂಡಾ, ಕುನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಕುನ್ನೂರ, ಹೊಸುರ, ಯತ್ತಿನಹಳ್ಳಿ, ಬದ್ರಾಪೂರ, ಕೋಣನಕೇರಿ, ಅಂದಲಗಿ, ಹನಕನಹಳ್ಳಿ, ಹುನಗುಂದ ಮತ್ತು ಚಂದಾಪೂರ ಗ್ರಾಮದಲ್ಲಿ ದಿ. 5 ರಿಂದ 12 ರವರೆಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.