ಲೋಕದರ್ಶನ ವರದಿ
ಸವಣೂರ04 : ಬಾಲ್ಯದಲ್ಲಿಯೇ ಮಕ್ಕಳಿಗೆ ಬೇಕಾದ ಆರೋಗ್ಯ, ಶಿಕ್ಷಣ, ರಕ್ಷಣೆ ನೀಡುವುದು ಎಲ್ಲರ ಆದ್ಯ ಕರ್ತವ್ಯ. ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಯಾರೂ ಮಾಡಬಾರದು ಮಾನವೀಯ ಮೌಲ್ಯಗಳನ್ನು ಬೆಳೆಸಿ ಅವರನ್ನು ಉತ್ತಮ ನಾಗರಿಕನ್ನಾಗಿ ಮಾಡುವುದು ಸಕರ್ಾರ, ಪೋಷಕರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್ ಎಚ್ ಮಜೀದ್ ಹೇಳಿದರು.
ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾವೇರಿ, ಮಕ್ಕಳ ಸಹಾಯವಾಣಿ ಕೇಂದ್ರ ಹಾವೇರಿ ಹಾಗೂ ಗ್ರಾಮ ಪಂಚಾಯಿತಿ ಹಿರೇಮುಗದೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಕಔಅಖಔ)-2018 ಕುರಿತ ಜಾಗೃತಿ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಜ್ಞಾವಂತ ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಸಕರ್ಾರ 2012 ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ಮಗುವಿನ ಮೇಲೆ ದೌರ್ಜನ್ಯವೆಸಗಿದರೆ ಆತನಿಗೆ ಕಠಿಣವಾದ ಜೈಲು ಶಿಕ್ಷೆ ಮತ್ತು ಜಾಮಿನು ರಹಿತವಾಗಿರುತ್ತದೆ. ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸಬೆಕಾದರೆ ಗ್ರಾಮೀಣ ಭಾಗದ ಎಲ್ಲಾ ಜನರಿಗೆ ಕಾಯ್ದೆ-ಕಾನೂನುಗಳ ಬಗ್ಗೆ ಮಾಹಿತಿ ತಲುಪಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕ.
ಇಂದು ಮಕ್ಕಳ ಮೇಲೆ ಅನೇಕ ರೀತಿಯ ಲೈಂಗಿಕ, ಮಾನಸಿಕ, ದೈಹಿಕ ಶೋಷಣೆಗಳು ನಡೆಯುತ್ತಿರುವುದು ಖೇದದ ಸಂಗತಿ. ಇದರ ಕುರಿತು ಸೂಕ್ಷ್ಮತೆಯನ್ನು ಅರಿತು ಮಕ್ಕಳ ಚಲನವಲನ, ವರ್ತನೆಗಳ ಮೇಲೆ ನಿಗಾವಹಿಸಬೇಕು ಎಂದರು, ಹಾಗೂ ಬೇರೆ ಸ್ಥಳಗಳಿಂದ ಶಾಲೆಗೆ ಬರುವ ಮಕ್ಕಳು ಜೊತೆಯಾಗಿ ಬಂದು ಜೊತೆಯಾಗಿ ಹೋಗಬೇಕು, ಅಪರಿಚಿತರು ಯಾರಾದರು ನಿಮ್ಮ ಬಗ್ಗೆ ಮಾಹಿತಿ ಕೇಳಿದಲ್ಲಿ ಅಥವಾ ಅನುಚಿತವಾಗಿ ವರ್ತನೆ ಮಾಡುವುದು ಕಂಡುಬಂದಲ್ಲಿ ನಿಮ್ಮ ತಂದೆ-ತಾಯಿ ಅಥವಾ ಆಪ್ತರಲ್ಲಿ ಮುಕ್ತವಾಗಿ ಹೇಳಿಕೊಳ್ಳಿ ಇಲ್ಲವೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ತಿಳಿಸಿ ಎಂದು ಸಮಿತಿಯ ಅಧ್ಯಕ್ಷರಾದ ಎಸ್ ಎಚ್ ಮಜೀದ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದ ತಾಲೂಕು ಪಂಚಾಯತಿಯ ಮಾಜಿ ಸದಸ್ಯರಾದ ರಾಜು ಮಾದಾರ ಮಾತನಾಡುತ್ತಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಕಾನೂನಿನ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಕಾನೂನು ಅರಿವನ್ನು ನೀಡಿ ಸುರಕ್ಷಿತ ಸಮಾಜದ ನಿಮರ್ಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಾಸ್ಥಾವಿಕವಾಗಿ ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕ ಶಿವರಾಜ ವಿ ಮಾತನಾಡಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಆರ್.ಜಾಲಗಾರ ರವರು ಪೋಕ್ಸೋ ಕಾಯ್ದೆ-2012 ರ ಬಗ್ಗೆ ಉಪಾನ್ಯಾಸ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಹೊನ್ನವ್ವ ನಿಂಗಪ್ಪ ಹುರುಳಿಕೊಪ್ಪಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೆಚ್.ಜಿ.ಸಂಗೂರ, ಗ್ರಾ ಪಂ ಸದಸ್ಯರುಗಳಾದ ಮರಿಯವ್ವ ಹರಿಜನ, ರತ್ನವ್ವ ಕೆಂಬಾವಿಮಠ, ಸಾವಿತ್ರವ್ವ ಹಿರೇಮಠ, ಯಮುನವ್ವ ಬಾಕರ್ಿ, ಮುತ್ತಪ್ಪ ತಳವಾರ, ಜಿ.ಸಿ.ಕನವಳ್ಳಿ, ವೀರೇಶ ಚಪ್ಪರದಳ್ಳಿ, ಬಸಪ್ಪ ಕಡ್ಲೆಪ್ಪನವರ, ಎಸ್.ಬಿ.ಗುಡಗೇರಿ, ಎನ್.ಎಂ.ದೊಡ್ಡಮನಿ, ಸೋಮಯ್ಯ ಕುಲಕಣರ್ಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕತರ್ೆಯರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಮತ್ತು ಯುವಕರು, ಶಾಲಾ ಸಿಬ್ಬಂದಿಗಳು ಉಪಸ್ಥತರಿದ್ದರು, ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಮಾರುತಿ ಹರಿಜನ ಕಾರ್ಯಕ್ರಮವನ್ನು ನೀರೂಪಿಸಿದರೆ ಗಿರಿಶ್ ಸ್ವಾಗತಿಸಿ ಶೃತಿ ಹಿರೇಮಠ ವಂದಿಸಿದರು.