ಮಕ್ಕಳ ಸಹಾಯವಾಣಿ(1098)ಯ ಕುರಿತು ಜಾಗೃತಿ ಕಾರ್ಯಕ್ರಮ


ಲೋಕದರ್ಶನ ವರದಿ

ಹಾವೇರಿ30 : ಶಿಕ್ಷಣ ಮಕ್ಕಳ ಅಭಿವೃದ್ದಿಯ ಸಂಕೇತವಾಗಿದ್ದು, ಮಕ್ಕಳು ದೇಶದ ಸಂಪತ್ತು ಆದ್ದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಕಷ್ಠದಲ್ಲಿರುವ ಪ್ರತಿಯೊಂದು ಮಗುವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮುಖ್ಯವಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್.ಎಚ್. ಮಜೀದ್ ಹೇಳಿದರು.  

ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ (ರಿ) ಹಾವೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾರಡಗಿ ಹಾಗೂ ಮಕ್ಕಳ ಸಹಾಯವಾಣಿ (1098) ಕೇಂದ್ರ ಹಾವೇರಿ ಇವರ ಸಂಯಕ್ತ ಆಶ್ರಯದಲ್ಲಿ ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರಿಗೆ ಎರ್ಪಡಿಸಿದ್ದ ಮಕ್ಕಳ ಸಹಾಯವಾಣಿ(1098)ಯ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ.

 ಮಕ್ಕಳು ಬೆಳೆದು ಸಮುದಾಯಕ್ಕೆ ಸಹಾಯಕರಾಗಿ ರಾಜ್ಯ ಮತ್ತು ದೇಶವನ್ನು ಮುನ್ನಡೆಸುವವರಾಗಬೇಕು ಹುಟ್ಟುವ ಪ್ರತಿಯೊಂದು ಮಗುವನ್ನು ಆರೈಕೆಯಿಂದ, ಜಾಗರೂಕತೆಯಿಂದ ಬೆಳೆಸಿ, ಯಾವುದೇ ಮಗು ಅನಾಥ, ಅಂಗವಿಕಲರಾಗದಂತೆ, ಯಾವುದೇ ಒತ್ತಡಕ್ಕೆ ಬೀಳದೆ, ಉತ್ತಮ ನಾಗರಿಕರಾಗಲು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

  ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ತಂಡದ ಸದಸ್ಯರಾದ ಹೇಮಪ್ಪ ಹೆಚ್.ಎನ್. ಮಾತನಾಡುತ್ತಾ ಮಕ್ಕಳಿಗೆ ಪೋಷಣೆ ಮತ್ತು  ರಕ್ಷಣೆ ಅಗತ್ಯಯಿರುವ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ, ಭಾರತ ದೇಶವು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992 ರಲ್ಲಿ ಮಕ್ಕಳ ಹಕ್ಕುಗಳನ್ನು ನೀಡುತ್ತೇವೆಂದು ಒಪ್ಪಿದ್ದು ಮಕ್ಕಳಿಗೆ ನಾಲ್ಕು ಪ್ರಮುಖ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು, ಹಾಗೂ ಭಾಗವಹಿಸುವ ಹಕ್ಕುಗಳನ್ನು ನೀಡಿದೆ, ಆದರೆ ಪ್ರತಿಯೊಂದು ಮಗುವಿಗೂ ಈ ಎಲ್ಲಾ ಹಕ್ಕುಗಳು ದೊರೆಯುವಂತಾಗಬೇಕು ಮತ್ತು ಸರಕಾರ ಮತ್ತು ಸಂಘ ಸಂಸ್ಥೆಗಳು, ಸಮುದಾಯ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.    

  ಕಾರ್ಯಕ್ರಮದಲ್ಲಿ ಮಹಿಳಾ ಮೇಲ್ವಿಚಾರಕಿಯಾದ ಆಶಾ ಗುರುಪುತ್ರ ರವರು ಪ್ರಸ್ಥಾವಿಕವಾಗಿ ಮಾತನಾಡಿದರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮಲ್ಲಿಕಾಜರ್ುನ.ಎಸ್.ವೈ. ಅಂಗನವಾಡಿ ಕಾರ್ಯಕತರ್ೆಯರು ಉಪಸ್ಥಿತರಿದ್ದರು, ಮಕ್ಕಳ ಸಹಾಯವಾಣಿ ತಂಡದ ಸದಸ್ಯರಾದ ಶೈನಜಾ ಸ್ವಾಗತಿಸಿ ಅಶ್ವಿನಿ ಪಾಟೀಲ್ ವಂದಿಸಿದರು.