ಅನಕ್ಷರಸ್ಥರ ಜಾಗೃತಿ ಜಾಥಾ ಕಾರ್ಯಕ್ರಮ

ಲೋಕದರ್ಶನವರದಿ

ರಾಣೇಬೆನ್ನೂರು: ತಾಲೂಕಿನ ಪತ್ಯಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಾಕ್ಷರ ಸಮಿತಿ ಮತ್ತು ಶ್ರೀ ಸಿದ್ಧಗಂಗಾ ಮಾದರಿ ಅರಿವು ಸೇವಾ ಸಂಸ್ಥೆ ವತಿಯಿಂದ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಅನಕ್ಷರಸ್ಥ ಸದಸ್ಯರಿಗೆ ಸಾಕ್ಷರತೆ ಅರಿವು ಜಾಗೃತಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು.  

ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಎಂ.ಹೆಚ್.ಪಾಟೀಲ ಅವರು, ಸಾಕ್ಷರತಾ ಇಲಾಖೆ ಹಲವಾರು ವರ್ಷಗಳಿಂದಲೂ ಕೂಡ ನಿರಂತರವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಫಲವಾಗಿಯೇ ಇಂದು ಗ್ರಾಮಾಂತರ ಪ್ರದೇಶದಲ್ಲಿ ಸಾಕ್ಷರರನ್ನು ನೋಡುವಂತಾಗಿದೆ. ಈ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಬೇಕಾಗಿದೆ ಎಂದರು. 

ಜಿಪಂ ಸದಸ್ಯೆ ಗಿರಿಜವ್ವ ಬ್ಯಾಲದಹಳ್ಳಿ, ಓಂ ಪ್ರಕಾಶ ಸಾಲಿಮಠ, ಎಸ್.ವಿ.ಬೂದಿಹಾಳಮಠ, ಎಸ್.ಎಸ್.ಪಾಟೀಲ, ರಾಮಪ್ಪ ಹೊನ್ನತ್ತಿ, ಜಿ.ಉಷಾ ಸೇರಿದಂತೆ ಶಿಕ್ಷಕರು ಮತ್ತಿತರರು ಪಾಲ್ಗೊಂಡಿದ್ದರು. ಜಾಗೃತಿ ಜಾಥಾದಲ್ಲಿ 6466 ಜನರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡುವ ಗುರಿಯನ್ನು ಹೊಂದಲಾಯಿತು.