ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪ್ರಶಸ್ತಿ ಘೋಷಣ

Awards announced on the occasion of Ambedkar's birth anniversary

ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪ್ರಶಸ್ತಿ ಘೋಷಣ

ಹಾವೇರಿ 13 : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಅಂತಾರೆ ಕಾಂಗ್ರೆಸ್ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕೊಡ ಮಾಡಲ್ಪಡುವ ಅಂಬೇಡ್ಕರ್ ಪ್ರಶಸ್ತಿ ಗಳನ್ನು ಶೇ.90 ಒಂದೇ ಜಾತಿಯ ನಾಯಕರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ ಇದು ಖಂಡನೀಯ ತಾರತಮ್ಯವನ್ನು ವೆಸಗಿರುವವರ ವಿರುದ್ಧ ತನಿಖೆಯಾಗಬೇಕು ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿದ್ದಾರೆ.     ಸಮಾಜ ಕಲ್ಯಾಣ ಸಚಿವರಾದ ಎಚ್‌.ಸಿ ಮಹದೇವಪ್ಪ ಅವರು ದಲಿತರ ಪರವಾದ ಹೋರಾಟಗಾರರಿಗೆ ನ್ಯಾಯ ಕೊಡದೇ ತಮ್ಮ ಪಕ್ಷದ ಕಾರ್ಯಕರ್ತ ಮತ್ತು ಮುಖಂಡರನ್ನು ಗುರ್ತಿಸಿ ಪ್ರಾಮಾಣಿಕ ದಲಿತ ಪರ ಹೋರಾಟ ನೋವುನ್ನುಂಟು ಮಾಡಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಸಚಿವ ಎಚ್‌.ಸಿ ಮಹದೇವಪ್ಪ ರಾಜೀನಾಮೆ ನೀಡಬೇಕು. ಅಂಬೇಡ್ಕರ್ ಪ್ರಶಸ್ತಿ ಅಷ್ಟೇ ಅಲ್ಲದೆ ಡಾ. ಬಾಬು ಜಗಜೀವರಾಮ್ ಪ್ರಶಸ್ತಿ ಕೂಡಾ ಇದೇ ವಿಧಾನ ಅನುಸರಿಸಲಾಗಿದೆ. ಎರಡು ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಎಲ್ಲ ಜಿಲ್ಲೆಯವರಿಗೂ ಹಾಗೂ ಎಲ್ಲ ಜಾತಿಯ ನಾಯಕರಿಗೆ ಆಧ್ಯತೆ ನೀಡದೇ ಅನ್ಯಾಯ ಮಾಡಿದ್ದಾರೆ. ದಲಿತ ಸಚಿವರಿಂದ ದಲಿತರಿಗೆ ಅನ್ಯಾಯವಾಗಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪಕ್ಷಪಾತ, ಜಾತೀಯತೆ ಮಾಡಿರುವವರ ಬಗ್ಗೆ ತನಿಖೆಯಾಗಬೇಕು.ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿದ್ದಾರೆ.