ಎಸ್‌ಸಿ, ಎಸ್‌ಟಿ ಕಾಲನಿ ಇಂದಿರಾನಗರದಲ್ಲಿ ಅಂಭೆಡ್ಕರ ಜಯಂತಿ ಆಚರಣೆ

Ambedkar Jayanti celebrated in SC, ST Colony Indiranagar

ಎಸ್‌ಸಿ, ಎಸ್‌ಟಿ ಕಾಲನಿ ಇಂದಿರಾನಗರದಲ್ಲಿ ಅಂಭೆಡ್ಕರ ಜಯಂತಿ ಆಚರಣೆ 

ಯಮಕನಮರಡಿ, 15 : ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಸ್‌ಸಿ, ಎಸ್‌ಟಿ ಕಾಲನಿ ಇಂದಿರಾನಗದಲ್ಲಿ ದಿ 14ರಂದು ಡಾ. ಬಾಬಾ ಸಾಹೇಬ ಅಂಬೇಡ್ಕರರವರ 134ನೇ ಜಯಂತಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಧುರಿಣ ರವೀಂದ್ರ ಜಿಂಡ್ರಾಳಿ ಆಗಮಿಸಿ ಮಾತನಾಡಿದರು. ಇದೇ ಸಂದರ್ಬದಲ್ಲಿ 7 ನೇ ತರಗತಿ ವಿದ್ಯಾರ್ಥಿಗಳಿಗೆ ಪತ್ರಕರ್ತರಾದ ಗೋಪಾಲ ಚಪಣಿ ರವರು ಪೆನ್ನುಗಳನ್ನು ವಿತರಣೆ ಮಾಡಿದರು. 

   ಗ್ರಾಮದ ಯುವಕ ಮೀತ್ರರು ಹಿರಿಯರಾದ ಹನುಮಂತ ಗಾಡಿವಡ್ಡರ ಗ್ರಾ ಪಂ ಸದಸ್ಯ ಸಂತೋಷ ನಾಯಿಕ ಮಹಿಳಾ ಮಂಡಳದ ಸದಸ್ಯನಿಯರು ಉಪಸ್ಥಿತರಿದ್ದು ನಾಮಫಲಕ ಉದ್ಘಾಟಣೇ ಮಾಡಿದರು. ಅತಿಥಿಗಳಿಗೆ ಸನ್ಮಾನ ಹಾಗೂ ಸರ್ವರಿಗೂ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.