ಭಾಷಣ ಸ್ಪಧರ್ೆಯಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ

ಲೋಕದರ್ಶನ ವರದಿ

ಬೆಳಗಾವಿ, 28: ಮನುಷ್ಯನ ದೈನಂದಿನ ಅಗತ್ಯತೆಗಳ ಪೂರೈಕೆಯಲ್ಲಿ ವಿಜ್ಞಾನದ ಪಾತ್ರ ಹಿರಿದಾಗಿದೆ. ನಾವು ಸೇವಿಸುವ ನೀರು, ಗಾಳಿ, ಆಹಾರಗಳಷ್ಠೇ ಪ್ರಾಮುಖ್ಯತೆಯನ್ನು ಇಂದು ವಿಜ್ಞಾನ ಪಡೆದುಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಮಾನವ ಸಾಧಿಸಿರುವ ಪ್ರಗತಿಯನ್ನು ಕಂಡರೆ ಸ್ವತ: ಆ ಭಗವಂತನೇ ಅಚ್ಚರಿ ಪಡುತ್ತಾನೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಚೇರಮನ್ ಡಾ. ಬಿ. ಜಿ. ಹೆಗಡೆ ಅಭಿಪ್ರಾಯಪಟ್ಟರು.  ಅವರು ಇಂದು ನಗರದ ಡಾ|| ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದದಲ್ಲಿ  ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಬೆಳಗಾವಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾಥರ್ಿಗಳಿಗಾಗಿ  ಆಯೋಜಿಸಿದ್ದ "ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ" ಎಂಬ ವಿಷಯದ ಕುರಿತಾದ ಕನ್ನಡದಲ್ಲಿ ಭಾಷಣ ಸ್ಪಧರ್ೆಯಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆರ್. ಎಲ್. ವಿಜ್ಞಾನ ಮಹಾವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಆರ್. ಆರ್. ವಡಗಾವಿ ಮಾತನಾಡಿ ಪ್ರಸ್ತುತ ಸೃಷ್ಠಿಯ ವಿನಾಶಕ್ಕೆ ಕಾರಣವಾಗುವ ಅಂಶಗಳಿಗಿಂತ ಮನುಕುಲಕ್ಕೆ ಒಳಿತಾಗುವ ಸಂಶೋಧನಗಳು ವಿಜ್ಞಾನ ಕ್ಷೇತ್ರದಿಂದ ಹೊರಹೊಮ್ಮಬೇಕಾಗಿದೆ ಎಂದರು. ಬೇಸ್ ಕಾರ್ಯದಶರ್ಿ ರಾಜನಂದಾ ಘಾಗರ್ಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್. ಎಲ್. ವಿಜ್ಞಾನ ಮಹಾವಿದ್ಯಾಲಯದ ಪಿಜಿಕಲ್ ಸೊಸೈಟಿ ಚೇರಮನ್ನ ಪ್ರೊ. ಸುಷ್ಮಾ ಕಟ್ಟಿ, ಬೇಸ್ ಖಜಾಂಚಿ ಆರ್. ಜಿ. ಹಲಗಲಿಮಠ ಹಾಗೂ ಇತರರು ಉಪಸ್ಥಿತರಿದ್ದರು. 

ಪ್ರೊ|| ವಿಶ್ವನಾಥ ಗಾಣಿಗೇರ ಹಾಗೂ ಪ್ರೊ|| ಸಂಗಮೇಶ ಹಿರೇಮಠ ನಿಣರ್ಾಯಕರಾಗಿ ಪಾಲ್ಗೊಂಡಿದ್ದರು.  ಸಂಪಗಾಂವ ಆರ್. ಇ. ಎಸ್. ಪ್ರೌಢಶಾಲೆಯ ಪ್ರಿಯಾಂಕಾ ಹುಣಶೀಕಟ್ಟಿ ಪ್ರಥಮ, ಡಿ.ವಾಯ್.ಸಿ. ಭರತೇಶ ಪ್ರೌಢಶಾಲೆಯ ರಾಕೇಶ ಜಿನಗೌಡ ದ್ವಿತೀಯ ಹಾಗೂ ಭಾರತಿ ವಿದ್ಯಾಲಯ ಪ್ರೌಢಶಾಲೆಯ ಸಹನಾ ಮಲ್ಲಪ್ಪನವರ ತೃತೀಯ ಸ್ಥಾನ ಪಡೆದುಕೊಂಡರು.