ತಾಂಬಾ: ತಲೆ ತಗ್ಗಿಸಿ ಓದಿದರೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತದೆ, ಗುರಿ ಇಲ್ಲದ ಜೀವನ ರೇಕ್ಕೆ ಇಲ್ಲದ ಹಕ್ಕಿಯಂತೆ ಆಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ನಡೆಯಬೆಕೆಂದು ಶಿಕ್ಷಕ ಎ.ಎಸ್‌ಹೇಳಿದರು.
ಗ್ರಾಮದ ಸಂಕಲ್ಪ ಕೋಚಿಂಗ್ ಕ್ಲಾಸಿನ 202425ನೇ ಸಾಲಿನ ವಿದ್ಯಾರ್ಥಿಗಳಿಗೆ ಶುಭಕೋರುವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಹಾರ್ಡ ವರ್ಕಿಗಿಂತ ಸ್ಮಾರ್ಟ ವರ್ಕ ಮಾಡಿದರೆ ಅದು ನಿಮ್ಮನ್ನು ಯಶಸ್ವಿ ತಳಹದಿ ಆಗಲಿದೆ ಈ ನೀಟ್ಟಿನಲ್ಲಿ ವಿದ್ಯಾರ್ಥಿಗಳು ಸಮಬದ್ದತೆಯಿಂದ ಪ್ರಯತ್ನಿಸಿದರೆ ನಿಮಗೆ ಜಯ ಖಂಡಿತವಾಗಿಯೂ ಸಿಗಲಿದೆ ಎಂದರು.
ಕ್ರೇತ್ರ ಸಮನ್ವಯಾಧಿಕಾರಿಗಳಾದ ಎಸ್.ಆರ್.ನಡಗಡ್ಡಿ ಮಾತನಾಡಿ ನಿರಂತರ ಪರಿಶ್ರಮ ಹಾಗೂ ಕ್ರಮಬದ್ದ ಯೋಜನೆಯ ಅಧ್ಯಯನ ಮಾಡಿದರೆ ಈ ಪರಿಕ್ಷೇಯನ್ನು ಬಾಹಳ ಸಲಿಸಾಗಿ ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸಬಹುದು ಪರಿಕ್ಷೇಯ ಬಗ್ಗೆ ಹಿಂಜರಿಕೆಯನ್ನು ಇಟ್ಟು ಕೊಳ್ಳದೆ ದೈರ್ಯವಾಗಿ ಎದುರಿಸಿ ಎಂದರು. ಶಿಕ್ಷಕ ಪವನ್ ಹದರಿ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ ಅಧ್ಯಕ್ಷತೆ ವಹಿಸಿದ್ದರು, ಪ್ರಕಾಶ ಕಲ್ಲೂರ, ರವಿ ನಡಗಡ್ಡಿ, ಪರಸು ಬಿಸನಾಳ, ಸಿದ್ದು ಹತ್ತಳ್ಳಿ, ಕಸಾಪ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಸಂತೋಷ ಸರಸಂಬಿ, ಶೇಕರ ಪೂಜಾರಿ, ಹಿರಗಪ್ಪ ಪೂಜಾರಿ, ಸಂಗಮೇಶ ಕುಮಟಗಿ ಉಪಸ್ತಿತರಿದ್ದರು. ಸೋಮು ಬಾಗಲಕೋಟಿ ಸ್ವಾಗತಿಸಿದರು, ಜಟ್ಟೆಪ್ಪ ಮಾದರ ನಿರುಪಿಸಿದರು, ಸಿದ್ದು ಹಂಚನಾಳ ವಂದಿಸಿದರು.