ಶಾಂತಿ ಕದಡಲು ಯತ್ನ: ಕ್ರಮಕ್ಕೆ ಆಗ್ರಹಿಸಿ ಮನವಿ
ಬೆಳಗಾವಿ 21: ನಗರ ಹಾಗೂ ನಗರದ ಸುತ್ತಮುತ್ತಲಿನ ಘಟನೆಗಳತ್ತ ಗಮನ ಹರಿಸಬೇಕು ಮತ್ತು ಶಾಂತಿ ಕದಡುವ ಮತ್ತು ಹಿಂದೂಗಳ ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿರುವ ಇಂತಹವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳ ವತಿಯಿಂದ ಮನವಿ ಅರ್ಿಸಲಾಯಿತು.
ಮನವಿಯಲ್ಲಿ ಮುಸ್ಲಿಂ ಯುವಕನೋರ್ವ ಪಾಂಗುಳ ಗಲ್ಲಿಯಲ್ಲಿನ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ಎಸೆದ ಘಟನೆ ನಡೆದಿದ್ದು ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಅದೇ ರೀತಿ ದರಬಾರ್ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಸ್ಕ್ರೀನ್ ಅಳವಡಿಸಿ ಓರಂಗಜೇಬ ಹಾಗೂ ಟಿಪ್ಪು ಸುಲ್ತಾನನಿಬ್ಬರ ಘನ ಕಾರ್ಯಗಳ ಬಗ್ಗೆ ತೋರಿಸುತ್ತಿರುತ್ತಾನೆ. ಸಂಭಾಜಿ ಮಹಾರಾಜರಿಗೆ ಆದ ಕೌರ್ಯ-ಕಹಿ ಘಟನೆಯ ಬಗ್ಗೆ ತೋರಿಸಿ ಶಾಂತಿ ಕದಡುವ ಕೆಲಸವನ್ನು ನಿಲ್ಲಿಸಬೇಕು. ಹಿಂದೂಗಳ ಮೇಲೆ ಕೌರ್ಯ ಮೆರೆದವರನ್ನು ಮಹಾನ್ ವ್ಯಕ್ತಿಗಳೆಂದು ಮೆರೆಸುವುದು ನಿಲ್ಲಬೇಕು. ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ಜರುಗಿಸಬೇಕು.
ಕೇದನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಊರಿನಿಂದ 2ಕಿ.ಮೀ. ಅಂತರದಲ್ಲಿರುವ ಮಹಾದೇವ ಮಂದಿರದ ಪರಿಸರದಲ್ಲಿ ಮುಸ್ಲಿಂ ಯುವಕರು ಬಂದು ನಮಾಜ ಮಾಡುವುದು, ಮಾಂಸಾಹಾರಿ ಊಟ ಮಾಡುವುದು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಮೋಜು ಮಸ್ತಿ ಪಾರ್ಟಿ ಮಾಡುವುದು ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ ಹಾಳಾಗುತ್ತಿದೆ. ಇದು ನಿಲ್ಲಲೇಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ನಶೆಯಲ್ಲಿ ದುರ್ಘಟನೆಗಳು ಸಂಭವಿಸುತ್ತಿವೆ. ಈ ಎಲ್ಲ ವಿಷಯಗಳತ್ತ ಗಮನ ಹರಿಸಿ ಎಲ್ಲರೂ ಶಾಂತಿ ನೆಮ್ಮದಿಯಿಂದ ನೆಲೆಸುವ ನಿಟ್ಟಿನಲ್ಲಿ ತಮ್ಮ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಿ ಇನ್ನೊಮ್ಮೆ ಇಂತಹ ಶಾಂತಿ ಕದಡುವ, ಇನ್ನೊಬ್ಬರಿಗೆ ತೊಂದರೆ ಕೊಡುವ ದುಸ್ಸಾಹಸಕ್ಕೆ ಮುಂದಾಗದಂತೆ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಮಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ ಮಾದಿಗರ, ಸಹ ಸಂಯೋಜಕ ಸುನೀಲ ಗೌರಣ್ಣ ಮೊದಲಾದ ಅನೇಕ ಕಾರ್ಯಕರ್ತರು ತೆರಳಿ ಮನವಿ ಅರ್ಿಸಿದರು.