ಬೈಲಹೊಂಗಲ 04: ಪಟ್ಟಣದಲ್ಲಿ ತಂಬಾಕು ನಿಷೇಧ ದಳ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾನ ಬೀಡಾ ಅಂಗಡಿಗಳ ಮೇಲೆ ಮಂಗಳವಾರ ದಿಡೀರ ದಾಳಿ ನಡೆಸಿ, ಗುಟ್ಕಾ ಮಾರಾಟ ಪತ್ತೆ ಹಚ್ಚಿ, ಎಚ್ಚರಿಕೆ ನೀಡಿ ದಂಡ ವಿಧಿಸಿದರು.
ತಂಬಾಕು ನಿಷೇಧ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತದೊಂದಿಗೆ ನಗರದ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಬಜಾರ ರಸ್ತೆ, ಇಂಚಲ ರಸ್ತೆ ಪಾನಬೀಡಾ ಶಾಪ್ಗಳಿಗೆ ದಾಳಿ ಇಟ್ಟು ತಂಬಾಕು ಉತ್ಪನ್ನಗಳನ್ನು ರಾಜಾರೋಷವಾಗಿ ಮಾರುತ್ತಿದ್ದದ್ದನ್ನು ಪತ್ತೆಹಚ್ಚಿ, ರಾಜ್ಯದಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ನಿಷೇಧವಿದ್ದರೂ ಮಾರಾಟ ಮಾಡುತ್ತಿರುವ ಬಗ್ಗೆ ಅಂಗಡಿಗಳ ಮೇಲೆ ಸೆಕ್ಷೆನ್ 4 ರಲ್ಲಿ 7 ಕೇಸು, ಸೆಕ್ಷೆನ6 ಎ ರಲ್ಲಿ 14 ಕೇಸು, ಸೆಕ್ಷೆನ 6ಬಿ ರಲ್ಲಿ 4 ಕೇಸು ಒಟ್ಟು 25 ಕೇಸು ದಾಖಲಿಸಿ 3900 ದಂಡ ವಿಧಿಸಲಾಯಿತು.
ಪಟ್ಟಣದ ಪ್ರದೇಶದಲ್ಲಿ ತಂಬಾಕಿನಿಂದ ದುಷ್ಪಾರಿಣಾಮ ಆಗುತ್ತಿದ್ದು ಕೋಪ್ಟಾ ಕಾಯ್ದೆಯ ಯಶಸ್ವಿ ಅನುಷ್ಠಾನ ಕುರಿತು ತಾಲೂಕಿನಲ್ಲಿ ದಾಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗಿಯ ಸಂಯೋಜಕ ಮಹಾಂತೇಶ ಉಳ್ಳೆಗಡ್ಡಿ ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ.ಶೈಲಾ ಪಾಟೀಲ, ಸಾಮಾಜಿಕ ಕಾರ್ಯಕತರ್ೆ ಕವಿತಾ ರಾಜನ್ನವರ, ಎಸೈ ಎಸ್.ಬಿ.ಮಾವೀನಕಟ್ಟಿ, ಎಫ್.ಬಿ. ವಾಯ್.ಜಿ.ಕುರಿ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ದಾಳಿ ಕಾಲಕ್ಕೆ ಪಟ್ಟಣದಲ್ಲಿ ಸುಮಾರು 4 ಗಂಟೆಗಳ ಕಾಲ ಎಲ್ಲ ಪಾನ ಬೀಡಾ ಅಂಗಡಿಗಳು ಬಂದ್ ಆಗಿದ್ದವು.