ಅಥಣಿ ಇನ್ನರ್ ವ್ಹೀಲ್ ಸಂಸ್ಥೆ ರಜತ ಮಹೋತ್ಸವ ಯಶಸ್ವಿ

Athani Inner Wheel Institute Rajata Mahotsava successful

ಅಥಣಿ 10: ನಾವು ಮಾಡುವ ಕೆಲಸದಲ್ಲಿ ಶ್ರೇಷ್ಠ, ಕನಿಷ್ಠ ಎಂಬುದು ಇಲ್ಲ. ಯಾವುದೇ ಕೆಲಸವನ್ನು  ಶ್ರದ್ಧೆಯಿಂದ ಮಾಡಿದರೆ ಯಶಸ್ಸು ದೊರಕುತ್ತದೆ ಎಂದು ರೈತ ಮಹಿಳೆ ಡಾ. ಕವಿತಾ ಮಿಶ್ರಾ ಹೇಳಿದರು.  

 ಅವರು ಅಥಣಿ ಪಟ್ಟಣದಲ್ಲಿ ಇನ್ನರ್ ವ್ಹಿಲ್ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.   ತಮ್ಮ ಏಳು ಬೀಳದ ಸಾಧನೆಯನ್ನು ವಿವರವಾಗಿ ತಿಳಿಸಿದ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆಯನ್ನ ಬೆಳೆದು ಉತ್ತಮ ಸಾಧನೆ ಮಾಡುವ ಮೂಲಕ  ಒಂದು ಎಕರೆ ಜಮೀನಿನಲ್ಲಿ ಒಂದು ಕೋಟಿ ರೂಪಾಯಿ ಉತ್ಪಾದಿಸುವ ಕಲೆಯನ್ನು  ಪ್ರತಿಯೊಬ್ಬರು ರೈತರು ರೂಡಿಸಿಕೊಳ್ಳಬೇಕು. ಅದಕ್ಕಾಗಿ ಸುಧಾರಿತ ಬೇಸಾಯ ರೈತರು ರೂಡಿಸಿಕೊಳ್ಳಬೇಕು. ಕೃಷಿ ಜೊತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆಯಂತಹ  ಉಪಕಸುಬುಗಳನ್ನು ಮಾಡುವುದರಿಂದ  ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದರು.  

 ಹೆಣ್ಣು ಎಂದು ಆಬಲೆಯಲ್ಲ, ಯಾವತ್ತು ಸಬಲೆಯಾಗಿದ್ದಾಳೆ, ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಗಟ್ಟಿಯಾಗಿ ಎದುರಿಸುವ ಶಕ್ತಿ ಹೆಣ್ಣಿಗೆ ಇರುತ್ತದೆ. ಅದಕ್ಕೆ ಈ ಕವಿತಾ ಮಿಶ್ರಾ ಸಾಕ್ಷಿ.   

 ಈ ಜಗತ್ತಿಗೆ ಅನ್ನ, ತರಕಾರಿ ಹಾಲು ಮೊಸರು ನೀಡುವವ ರೈತ. ಕುಟುಂಬದ ಪರಿಸ್ಥಿತಿಯನ್ನು ಅರಿತು ಮಹಿಳೆಯರು ಒಳ್ಳೆಯ ಬದುಕು ನಡೆಸಬೇಕು. ಪ್ರೀತಿ ವಾತ್ಸಲ್ಯ ಎಂಬುದು ದೊಡ್ಡ ಆವರಣ. ಇನ್ನೊಬ್ಬರ ಆಸ್ತಿ ಆಭರಣ, ದೊಡ್ಡ ಮನೆಗಳಿಗೆ ಮಾರು ಹೋಗಬೇಡಿ ಎಂದು ಕರೆ ನೀಡಿದರು.  

ನೇತೃತ್ವ ವಹಿಸಿದ್ದ ಗಜಾನನ ಮಂಗಸುಳಿ ಮಾತನಾಡಿ ರೋಟರಿ ಸಂಸ್ಥೆಯು ಅಥಣಿಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ರೋಟರಿ ಸಂಸ್ಥೆಯ ಜೊತೆಗೆ ಇನ್ನರ್ವಿಲ್ಲ ಸಂಸ್ಥೆಯು ಕೂಡ  ಅನೇಕ ಸಮಾಜ ಮತ್ತು ಸೇವೆಗಳ ಮೂಲಕ  25 ವರ್ಷಗಳಿಂದ ನಿರಂತರ ಮಹಿಳೆಯರು ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದಾರೆ ಎಂದರು.  

ಸಾನಿಧ್ಯ ವಹಿಸಿದ್ದ ಮೂಡಿಗೆ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ ರೋಟರಿ ಸಂಸ್ಥೆಯ ಮತ್ತು ಇನ್ನರ್ ವಿಲ್ ಸಂಸ್ಥೆಯ  25 ವರ್ಷಗಳ ಕಾಯಕ ದೊಡ್ಡದು. ಈ ಸಂಸ್ಥೆಗಳ ಸೇವೆ ಅಂತಕರ್ಣದ ಸೇವೆಯಾಗಲಿ. ಗಜಾನನ ಮಂಗಸುಳಿಯವರ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು.  

ಮೈಸೂರಿನ ಹಾಸ್ಯ ಕಲಾವಿದ ಪ್ರೋ . ಕೃಷ್ಣೇಗೌಡ ಮಾತನಾಡಿ ಸೇವೆ ಮತ್ತು ತ್ಯಾಗ ನಮ್ಮ ರಾಷ್ಟ್ರದ ಆದರ್ಶಗಳು. ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿರುವ ಸಮಾಜಮುಖಿ ಸೇವೆ ಶ್ಲಾಘನೀಯ. ಅಥಣಿಯಲ್ಲಿ ಇನ್ನರ್ವಿಲ್ ಸದಸ್ಯರು ಕಳೆದ 25 ವರ್ಷಗಳಿಂದ ಪರಿಸರ, ಶೈಕ್ಷಣಿಕ, ಆರೋಗ್ಯ,  ಸಾಮಾಜಿಕ ಮತ್ತು ವಿವಿಧ ರಂಗಗಳಲ್ಲಿ  ವಿನೂತನ ಸೇವೆಗಳನ್ನು ಸಲ್ಲಿಸುವ ಮೂಲಕ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.  

ಇನ್ನರ ವ್ಹೀಲ್ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಉದ್ಯಮಿ ರಾವಸಾಹೇಬ ಐಹೊಳೆ, ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ, ಗಜಾನನ ಮಂಗಸೂಳಿ ದಂಪತಿಗಳನ್ನು ಮತ್ತು ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ 25 ಅಧ್ಯಕ್ಷರುಗಳನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು. ಪೂರ್ಣಿಮಾ ಪಾಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಸರ್ವರನ್ನು ಸ್ವಾಗತಿಸಿದರು, ಸುಮೇಧಾ ಮೀರಜ ಸ್ವಾಗತ ಗೀತೆ ಹಾಡಿದರು,  ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಅರುಣ ಸೌದಾಗರ ಉಪಸ್ಥಿತರಿದ್ದರು.