ಅಥಣಿ ರಾಮಮಂದಿರದಲ್ಲಿ ಶ್ರೀರಾಮ ನವಮಿ ಅದ್ದೂರಿಯಿಂದ ಆಚರಣೆ

ಅಥಣಿ 13: ಇಲ್ಲಿನ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ರಾಮಮಂದಿರದ ಪ್ರಾಂಗಣದಲ್ಲಿ ರಾಮ ಜನ್ಮಕ್ಕಾಗಿ ತೊಟ್ಟಿಲನ್ನು ಕಟ್ಟಿ, ತೊಟ್ಟಿಲನ್ನು ವಿವಿಧ ಹೂವು, ಎಲೆಗಳಿಂದ ಸಿಂಗರಿಸಲಾಗಿತ್ತು. 

           ತಳಿರು ತೋರಣಗಳಿಂದ ರಾಮಮಂದಿರವನ್ನು ಅಲಂಕರಿಸಲಾಗಿತ್ತು ಗರ್ಭಗುಡಿಯಲ್ಲಿರುವ ರಾಮ ಲಕ್ಷ್ಮಣ ಸೀತಾ ಮಾತೆಯರ ಮೂತರ್ಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೇರೆಬೇರೆ ನಗರಗಳಿಂದ ವಿವಿಧ ಬಗೆಯ ಹೂವುಗಳನ್ನು ತರಿಸಿ ಸುಂದರವಾಗಿ ಅಲಂಕರಿಸಲಾಗಿತ್ತು. ದೆವಸ್ಥಾನದ ಅರ್ಚಕ ಲಕ್ಷ್ಮಣ ರಾಮದಾಸಿ ಇವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ ಶ್ರೀ ರಾಮ ನಾಮ ಭಜನೆ ಹಾಗೂ ಶ್ರೀ ರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಪೂಜೆ, ಅಭಿಷೇಕ ಹಾಗೂ ಆರತಿಯನಂತರ ಮಂತ್ರಪುಷ್ಪ ನಡೆಯಿತು. ವಿವಿಧ ರೀತಿಯ ಹಣ್ಣುಗಳಿಂದ ನೈವೇದ್ಯ ಮಾಡಲಾಯಿತು. ನಂತರ ಪಂಚಾಮೃತ ಹಾಗೂ ತೀರ್ಥ ವಿತರಿಸಲಾಯಿತಯ. ನಂತರ ರಾಮ ದೇವರ ಬಾಲ ವಿಗ್ರಹವನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ಆರಂಭವಾಯಿತು. ವಾದಿರಾಜ ಜಂಬಗಿ ಇವರಿಂದ ಹರಿಕೀರ್ತನೆ ನಡೆಯಿತು.

            ಶ್ರೀರಾಮ ನವಮಿಯ ಅಂಗವಾಗಿ ರಾಮ ಜನ್ಮದ ವೃತ್ತಾಂತದ ಪ್ರವಚನ ಕಾರ್ಯಕ್ರಮವನ್ನು ಹಾಗೂ ಹರಿ ಕೀರ್ತನೆ ವಾದಿರಾಜ ಜಂಬಗಿ ಇವರಿಂದ ನಡೆಯಿತು .

          ಸಾಕಷ್ಟು ಸಂಖ್ಯೆಯಲ್ಲಿ ರಾಮಜನ್ಮದ ವೇಳೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಗೆ ರಾಮಜನ್ಮ ಕಾಲದ ಸಮಯದಲ್ಲಿ ರಾಮಚಂದ್ರ ದೇವರ ಬಲ ಮೂತರ್ಿಯನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುವ ಕಾರ್ಯಕ್ರಮ ನಡೆಯಿತು. ರಾಮ ಜನ್ಮದ ನಿಮಿತ್ತ ಕೆಲ ಭಕ್ತಾದಿಗಳು ಉಪವಾಸ ವೃತ ಕೈಗೊಳ್ಳುತ್ತಾರೆ. ಆದ್ದರಿಂದ ರಾಮ ಮಂದಿರದಲ್ಲಿ ಪಾನಕ, ಮಜ್ಜಿಗೆ , ಕೋಸಂಬರಿಗಳನ್ನು ಭಕ್ತಾದಿಗಳಿಗೆ ನೀಡಲಾಯಿತು. ಸುಡುವ ರಣ ಬಿಸಿಲಿನಲ್ಲಿ ಪಾನಕ, ಮಜ್ಜಿಗೆ ಭಕ್ತಾದಿಗಳ ದಣಿವನ್ನು ತಣಿಸಿದ್ದಂತೂ ನಿಜ. 

              ಸುಮಂಗಲೆಯರು ಸಾಕಷ್ಟು ಸೇರಿರುವ ಈ ಸಂದರ್ಭದಲ್ಲಿ ಎಲ್ಲರೂ ಕುಂಕುಮ ಹಚ್ಚಿ ಉಡಿ ತುಂಬಿ ರಾಮ ಜನ್ಮದ ಸಂಭ್ರಮವನ್ನು ಆಚರಿಸಿದರು.

ರಾಮನವಮಿಯ ನಿಮಿತ್ತದ ಕಾರ್ಯಕ್ರಮಗಳು

ಎ.14 ರವಿವಾರದಂದು ಮಹಾಮಂಗಳಾರತಿ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಸಂಜೆ ಸಂಗೀತ ಸೇವೆ, ದಾಸರ ಪದಗಳ ಕಂಠಪಾಠ ಸ್ಪಧರ್ೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಎ.15 ರಂದು ಭಜನಾ ಕಾರ್ಯಕ್ರಮ, ಎ.16 ರಂದು ಬೆಳಿಗ್ಗೆ ಗ್ರಾಮ ಪ್ರದಕ್ಷಿಣೆ ಸಂಜೆ ಪಂಡಿತ ಜಯರಾಮಾಚಾರ್ಯ ಮದನಪಲ್ಲಿ ಇವರಿಂದ ಪ್ರವಚನ ಹಾಗೂ ರಾತ್ರಿ ಶ್ರೀರಾಮ ನಾಮ ಭಜನೆ, ಶ್ರೀ ರಾಮ ರಕ್ಷಾ ಸ್ತೋತ್ರ ಹಾಗೂ ಮಂತ್ರಪುಷ್ಪದ ನಂತರ ಕಾರ್ಯಕ್ರಮ ಸಮಾರೋಪಗೊಳ್ಳುವದು.