ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

Association launches clean drinking water unit

ಲೋಕದರ್ಶನ ವರದಿ 

ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ 

ಸಂಬರಗಿ, 29 : ಗ್ರಾಮೀಣ ಪ್ರದೇಶದಲ್ಲಿ ನೀರನ ಸಮಸ್ಯೆ ಪರಿಗಣಿಸಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮಾಡಲಾಗಿದೆ ಎಂದು ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ವಿಲಾಸ ಟೋಣೆ ಹೇಳಿದರು. 

ಸಂಬರಗಿ ಗ್ರಾಮದಲ್ಲಿ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಚಾಲನೆ ನೀಡಿ ಮಾತನಾಡಿ ಅವರು ಗ್ರಾಮದಲ್ಲಿ ಪ್ರತಿ ಕುಟುಂಬಕ್ಕೆ ಶುದ್ಧ ನೀರು ಪೂರೈಕೆ ಮಾಡುತ್ತಿದ್ದೆವೆ. ಗ್ರಾಮಸ್ಥರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. 

ಈ ವೇಳೆ ರಾಜು ಪಾಸಲೆ, ದತ್ತಾ ಕೋಳಿ, ಪಿಂಟು ನಾಟೆಕರ, ಸರ್ಜಿರಾವ ಮಾನೆ, ಟೋಪಾ ಅವಳೆಕರ, ಶ್ರೀಮತಿ ಸುಶ್ಮಾ ಭಜರಂಗ ದೇವಮಾನೆ ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಕೊಂಡಿಬಾ ಮಿಸಾಳ ಸ್ವಾಗತ ವಂದಿಸಿದರು.