ಕೊಡಗು ಪರಿಹಾರ ನಿದಿಗೆ ಸಂಡೂರು ತಾಪಂ, ತೋರಣಗಲ್ಲು ಗ್ರಾಪಂ ವತಿಯಿಂದ ನೆರವು

ಲೋಕದರ್ಶನ ವರದಿ

ಬಳ್ಳಾರಿ01: ಕೊಡಗು ಪರಿಹಾರ ನಿಧಿಗೆ ಜಿಲ್ಲೆಯ ಎಲ್ಲಾ ಗ್ರಾಪಂಗಳು, ತಾಪಂ ಅಧಿಕಾರಿ ಸಿಬ್ಬಂದಿಯವರು ತಮ್ಮ ಒಂದು ದಿನದ ಸಂಬಳವನ್ನು ನೀಡಿದ್ದು, ಅದರಂತೆ ಶುಕ್ರವಾರರಂದು ಸಂಡೂರು ತಾಪಂ ಅಧಿಕಾರಿ ಮತ್ತು ಸಿಬ್ಬಂದಿಯವರ ಒಂದು ದಿನದ ವೇತನವಾದ 34 ಸಾವಿರ ರೂ.ಗಳ ಡಿ.ಡಿ ಯನ್ನು ಸಂಡೂರು ತಾಪಂ ಕಾರ್ಯನಿವರ್ಾಹಕ ಅಧಿಕಾರಿಯಾದ ಅನ್ನದಾನಯ್ಯ ಸ್ವಾಮಿ ಅವರು ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನೀಡಿದರು. ಅದರಂತೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಪಂಯ ಸ್ವಂತ ಸಂಪನ್ಮೂಲದಿಂದ 1 ಲಕ್ಷ ರೂ.ಗಳ ಡಿಡಿಯನ್ನು ಸಹ ತೋರಣಗಲ್ಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮತಪ್ಪ ಉಪ್ಪಾರ ಅವರು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಕೊಡಗು ನಿರಾಶ್ರಿತರ ಪರಿಹಾರ ನಿಧಿಗೆ ಬಳ್ಳಾರಿ ಜಿಪಂ ಮತ್ತು ಅದರ ಅಧೀನದ ಅನುಷ್ಠಾನ ಇಲಾಖೆಗಳು, ತಾಪಂಗಳ ಅಧಿಕಾರಿ ಸಿಬ್ಬಂದಿಯವರು ತಮ್ಮ ಒಂದು ದಿನದ ಸಂಬಳವನ್ನು ನೀಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಇವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಅದರಲ್ಲದೇ ಸಂಕಷ್ಟದಲ್ಲಿರುವ ಕೊಡಗಿನ ಜನತೆಯ ಬವಣೆಗೆ ಸ್ಪಂದಿಸುವ ಮೂಲಕ ಜಿಪಂ ಮತ್ತು ಅಧೀನದ ಅಧಿಕಾರಿ ಸಿಬ್ಬಂದಿವರು ಮಾದರಿಯಾಗುತ್ತಿದ್ದಾರೆ ಎಂದು ಶ್ಲಾಘೀಸಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದಶರ್ಿ ಮುಕ್ಕಣ್ಣ, ಸಂಡೂರು ತಾಪಂ ರೋಷನ್ ಜಮೀರ್, ಅಧೀಕ್ಷಕರಾದ ನರಸಿಂಹ ಮೂತರ್ಿ, ಬಸವರಾಜ ಇತರರು ಇದ್ದರು.