ಸಂಗೊಳ್ಳಿ ರಾಯಣ್ಣ ನಾಮ ಫಲಕಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಅಶೋಕ ಚಂದರಗಿ ಆಕ್ರೋಶ

ಲೋಕದರ್ಶನ ವರದಿ

ಬೆಳಗಾವಿ: ನಗರದಲ್ಲಿನ ಸಂಗೊಳ್ಳಿ ರಾಯಣ್ಣ ನಾಮ ಫಲಕಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ನಾಮ ಫಲಕವನ್ನು ಜಿಲ್ಲಾಧಿಕಾರಿ ಕಚೇರಿಯ ಮಂದೆ ತಂದಿಟ್ಟು ಆಕ್ರೋಶ ವ್ಯಕ್ತ ಪಡಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಫಲಕದ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಚಚರ್ೆ ನಡೆಸಲಾಗಿತ್ತು. ನಗರದಲ್ಲಿನ ಸಂಗೊಳ್ಳಿ ರಾಯಣ್ಣ ರಸ್ತೆ ನಾಮಫಲಕವನ್ನು ತೆರವು ಮಾಡಿ ಕೋಟರ್್ ರಸ್ತೆ ಎಂದು ಹಾಕಬೇಕು ಎಂದು ಜಿಲ್ಲಾಡಳಿತ ವಿವಾದ ಮಾಡಿಕೊಂಡಿತ್ತು.  

ಅದರ ಬೆನ್ನಲೆ ಸಂಗೊಳ್ಳಿ ರಾಯಣ್ಣ ರಸ್ತೆಯ ನಾಮಫಲಕವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಎಸೆದು ಅವಮಾನ ಮಾಡಿದ್ದನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ನಾಮಫಲಕವನ್ನು ತೆಗೆದುಕೊಂಡು ಹೋಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಇಟ್ಟು ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.