ನವದೆಹಲಿ, ಫೆ 11, ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆಯತ್ತ ದಾಪುಗಾಲು ಹಾಕಿದೆ. ಸದ್ಯ ಪ್ರಾಥಮಿಕ ವರದಿಗಳ ಪ್ರಕಾರ ಆಮ್ ಆದ್ಮಿ 53 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದೂ ವರದಿಯಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮುನ್ನಡೆ ಸಾಧಿಸಿದ್ದರೆ, ಬಿಜೆಪಿಯ ತಜೀಂದರ್ ಪಾಲ್ ಬಗ್ಗಾ ಆರಂಭಿಕ ಮುನ್ನಡೆಯಲ್ಲಿದ್ದು . ಟಿವಿ ವಾಹಿನಿಗಳ ಮತಗಟ್ಟೆ ಭವಿಷ್ಯ ಹೆಚ್ಚು ಕಡಿಮೆ ನಿಜವಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ.