ಅಲೆಮಾರಿ ಸುಡುಗಾಡು ಸಿದ್ದರ ಕಲಾ ಪ್ರದರ್ಶನ

ಲೋಕದರ್ಶನ ವರದಿ                      

ಹಾನಗಲ್29 : ಅಲೆಮಾರಿ ಜನರಿಗೆ ಬೇರೆ ಬೇರೆ ಹೆಸರು ಗಳಿಂದ ಕರೆಯಲಾಗುತ್ತಿದ್ದು, ಈ ಜನಾಂಗ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ತಮ್ಮ ಕಲೆ ಪ್ರದರ್ಶನ ಮಾಡುತ್ತಾ ಜೀವನ ಸಾಗಿಸುತ್ತಿದ್ದು, ಅವರಿಗೆ ಸಕರ್ಾರ  ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಮಾಜಿಸಚಿವ ಮನೋಹರ್ ತಹಶೀಲ್ದಾರ ಹೇಳಿದರು.

 ತಾಲೂಕ ಪಂಚಾಯತಿ ಆವರಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ವಿಶೇಷ ಘಟಕ ) ಸುಡುಗಾಡು ಸಿದ್ದ ಜಾದು ಹಾಗೂ ಜಾನಪದ ಕಲಾಮೇಳ ಉದ್ಘಾಟಿಸಲಾಯಿತು.   ಅಲೆಮಾರಿ ಜನಾಂಗದವರು  ಜೀವನ ನಿರ್ವಹಣೆಗಾಗಿ  ವೇಷ ಭೂಷಣ ಹಾಕಿ ಊರಿನ ಒಳಿತಿಗಾಗಿ ಕೆಲಸ ಮಾಡುತ್ತಾರೆ.

    ವಿವಿಧ ಕಲೆಗಳನ್ನು ಪ್ರದರ್ಶನ ಮಾಡುತ್ತಾ ಕೌಶಲ್ಯಗಳನ್ನು ಕರಗತ ಮಾಡಿಕೊಂಡು  ಸಕರ್ಾರ ಅವರ ಕಡೆ ಗಮನ ಕೊಟ್ಟು ಅವರಿಗೆ ಸೌಲಭ್ಯಗಳು ಒದಗಿಸಬೇಕು.ಇವರಿಗೆ ಎಲ್ಲರ ಸಹಕಾರ ಮುಖ್ಯವಾಗಿರುತ್ತದೆ. ಪ್ರತಿಭೆಯಗಳ ಅನಾವರಣಕ್ಕೆ ಸಹಕಾರ ನೀಡುವುದು ಅಗತ್ಯ ಎಂದು ಹೇಳಿದರು. ಮುಖ್ಯ ಅಥಿತಿಯಾಗಿ ಯುತ್ ಕಾಂಗ್ರೇಸ್ ನೂತನ ಅಧ್ಯಕ್ಷರಾದ ನೀಯಾಜ್ ಶೇಖ  ಮಾತನಾಡಿ ಸುಡುಗಾಡು ಸಿದ್ದ ಜನ ಅತ್ಯಂತ ಹಿಂದುಳಿದಿದ್ದು,  ತಮ್ಮ ಕಲೆಯನ್ನು ಗ್ರಾಮ ಗ್ರಾಮಗಳಲ್ಲಿ ಹೋಗಿ ಪ್ರದಶರ್ಿಸಿ ತಮ್ಮ ಉಪ ಜಿವನ ನಡೆಸುತ್ತಿದ್ದಾರೆ. ಇವರಿಗೆ ನಮ್ಮ ಸಹಕಾರ ಬೆಂಬಲ ಯಾವತ್ತು ಇರುತ್ತದೆ ಎಂದರು.

   ಕಾರ್ಯಕ್ರಮದಲ್ಲಿ ಜಾದು ಕಲಾ ಪ್ರದರ್ಶನ ನಡೆಸಲು ಕಲಾವಿದರಾದ  ರಾಮಣ್ಣ ರಾಜಪ್ಪ ಬಾದಗಿ,ಲಕ್ಷ್ಮೀ ಕಿನ್ನಿರ ಎಸ್ ಶೇಖಪ್ಪ ಧೂಪದವರ. ಬಸವರಾಜಪ್ಪ ರಾಜಪ್ಪ ಬಾದಗಿ ಅನೇಕರು ಸುಡಗಾಡ ಸಿದ್ದರ ಹಾಗೂ ಜಾನಪದ ಕಲಾ ಮೇಳ ಜಡಿಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ರಾಮಣ್ಣ ರಾಜಪ್ಪ ಬಾದಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ  ಡಿ.ಜಿ ತಿಪ್ಪೇಗೊಂಡರ. ಹನುಮಂತಪ್ಪ ಯಳ್ಳೂರು.ಎಸ್.ಎಚ್ ಗಜಾಕೊಷ್.ಎನ್,ಎನ್ ಗಾಳೆಮ್ಮನವರ. ಶಂಕ್ರಪ್ಪ ಆರ್ ವೇಷಗಾರ. ಹಸೀನಾ ಹೆಡಿಯಾಲ್.ದೊಡ್ಡಹುಸೆನಪ್ಪ ಒಂಟೆತ್ತನವರ ಹುಸೇನಪ್ಪ ರಾಮಣ್ಣ ಬಾದಗಿ ಮಂಗಾಳಾ ಹಿರೆಮಠ ಶಕ್ತಿ ತರೆದ ತಂಗುದಾಣ ಚಂದ್ರಪ್ಪ ಒಂಟೆತ್ತಿನವರ ಅನೇಕರು ಇದ್ದರು.