ಲೋಕದರ್ಶನ ವರದಿ
ಬೆಳಗಾವಿ : ಜೀವನ ನಡೆಸುವದಕ್ಕೆ ನಮಗೆ ಸ್ವಂತ ಸೂರಿಲ್ಲ ನಮಗೆ ಸ್ವಂತ ಸೂರನ್ನು ಆದಷ್ಟು ಬೇಗನೆ ವದಸಿಕೊಡಬೇಕೆಂದು ಖಸಾಯಿ ಗಲ್ಲಿ ಖಡ್ಡಾ ರಹವಾಸಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ಮಾಡುತ್ತ ಜಿಲ್ಲಾಧಿಕಾರಿ ಕಚೇರಿ ತೆರಳಿ ತಮ್ಮ ಎಲ್ಲ ಸಮಸ್ಯೆಗಳೆಲ್ಲವನ್ನು ಬಗೆಹರಿಸಬೇಕು, ನಮಗೆ ಆದಷ್ಟು ಬೇಗ ಸೂಕ್ತಕ್ರಮ ಕ್ರಮ ತೆಗೆದುಕೊಂಡು ಸ್ವಂತ ಸೂರ ಮಂಜುರು ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಸೇನ್ ಬೇಪಾರಿ, ದಿವ್ಯಾ ಅನಂತಪುರಿ,ರಹೀಮತ್ ಬೇಪಾರಿ ರೇಷ್ಮಾ ಮತ್ತೆಸಾಬ,ನೂರಜಾನ್ ಮಾದೇವಿ ಬೂದಿಕೊಪ್ಪ, ಮಲ್ಲವ್ವಾ ತಪ್ಪಲಿ, ನಹೀಮಾ ಬೇಪಾರಿ, ಸಹೀದಾ ಬೇಪಾರಿ, ಖೈರುಣ ಕುಳಚೆ, ಶಬಾನಾ ಮುಜಾವರ, ಸಾಯಿರಾಭಾನ ಸರಜೇಖಾನ ಮುಂತಾದವರು ಉಪಸ್ಥಿತರಿದ್ದರು.